ಮೀನುಗಾರಿಕೆ ಕೋರ್ಸ್‌ ಪ್ರವೇಶ ಮೀನುಗಾರ ಮಕ್ಕಳಿಗೆ ಸವಾಲು!

ಕೃಷಿ ಜಮೀನು ಹೊಂದಿರಬೇಕೆಂಬ ನಿಯಮದಿಂದ ಅಡ್ಡಿ- ಶೇ.50 ಸೀಟು ಮೀಸಲಿದ್ದರೂ ಕಡಲ ಮಕ್ಕಳಿಗಿಲ್ಲ ಅವಕಾಶ

Team Udayavani, Aug 6, 2023, 12:32 AM IST

FISHERMAN

ಮಂಗಳೂರು: ಹೆಸರಿಗೆ ಮೀನುಗಾರಿಕೆ ಮಹಾವಿದ್ಯಾಲಯ; ಆದರೆ ಮೀನುಗಾರರ ಮಕ್ಕ ಳಿಗೇ ಇಲ್ಲಿನ ಕೋರ್ಸ್‌ಗೆ ಪ್ರವೇಶ ದುಸ್ತರ!
ರಾಜ್ಯದ ಕೃಷಿ ಮತ್ತು ಕೃಷಿ ಪೂರಕ ವಿಶ್ವವಿದ್ಯಾನಿಲಯದ ಪದವಿ ಹಾಗೂ ಕೃಷಿ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶದಲ್ಲಿ ಕೃಷಿಕರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50ರಷ್ಟು ಸೀಟುಗಳು ಮೀಸಲಿವೆ. ಈ ಸೌಲಭ್ಯ ಪಡೆಯಲು ಆರ್‌ಡಿ ನಂಬ್ರ ಹೊಂದಿರುವ ಕೃಷಿ ಮತ್ತು ಕೃಷಿ ಸಂಬಂಧಿತ ಕೂಲಿ ಕಾರ್ಮಿಕರ ಪ್ರಮಾಣಪತ್ರ ಸಲ್ಲಿಸಬೇಕು.
ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾ ಲಯದಲ್ಲಿ ಲಭ್ಯವಿರುವ ಸೀಟುಗಳು 50. ಅದ ರಲ್ಲಿ ಶೇ. 50ರಷ್ಟು ಕೃಷಿಕ ರಿಗೆ ಮೀಸಲು. ಈ ಸೀಟು ಪಡೆಯಲು ಕೃಷಿಕರೆನ್ನುವುದಕ್ಕೆ ಪೂರಕವಾಗಿ ಆರ್‌ಡಿ ಸಂಖ್ಯೆ ಇರುವ ಪ್ರಮಾಣ ಪತ್ರ ಸಲ್ಲಿಸಬೇಕು. ಆದರೆ ಮೀನುಗಾರರ ಮಕ್ಕಳಿಗೆ ಜಮೀನಿನ ದಾಖಲೆ ಹಾಜರುಪಡಿಸಲು, ಪ್ರಮಾಣ ಪತ್ರ ಪಡೆಯಲು ಆಗುತ್ತಿಲ್ಲ.

ಆರ್‌ಡಿ ನಂಬರ್‌ ಕೇವಲ ಕೃಷಿ ಜಮೀನು ಇರುವವರಿಗೆ ಮಾತ್ರವೇ ನೀಡಲಾಗುತ್ತದೆ. ಮೀನುಗಾರರ ಮಕ್ಕಳು ಅದರ ಬದಲು ತಹಶೀಲ್ದಾರ ರಿಂದ ಜಾತಿ ಪ್ರಮಾಣ ಪತ್ರ ಪಡೆದು ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ಆದರೆ ಆ ಪ್ರಮಾಣಪತ್ರವನ್ನು ಮೀನು ಗಾರಿಕೆ ಕೋರ್ಸ್‌ಗೆ ಪ್ರವೇಶಾತಿ ಕಲ್ಪಿಸುವ ಸಂದರ್ಭ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದವರು ಪರಿಗಣಿಸುವುದಿಲ್ಲ. ಯಾಕೆಂದರೆ ಕಡ್ಡಾಯವಾಗಿ ಆರ್‌ಡಿ ಸಂಖ್ಯೆ ಅಲ್ಲಿ ನಮೂದಿಸಬೇಕು ಎನ್ನುತ್ತಾರೆ ಮೀನು ಗಾರಿಕೆ ಕಾಲೇಜು ಅಧಿಕಾರಿಗಳು.

ಮೀನುಗಾರಿಕೆಯನ್ನೂ ಸರಕಾರ ಗಳು ಕೃಷಿ ಎಂದು ಪರಿಗಣಿಸಿವೆ. ಆದರೆ ನಮ್ಮ ಸಮುದಾಯದ ಮಕ್ಕಳನ್ನು ಮೀನುಗಾರಿಕೆ ಕೋರ್ಸ್‌ಗೆ ಸೇರಿಸಲು ಮಾತ್ರ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಮಂಗಳೂರು ಟ್ರಾಲ್‌ ಬೋಟ್‌ ಮೀನು ಗಾರರ ಸಂಘದ ಅಧ್ಯಕ್ಷ ಚೇತನ್‌ ಬೆಂಗ್ರೆ.

ರಾಜ್ಯ ಕರಾವಳಿಯಲ್ಲಿ ಸಾವಿರಾರು ಮಂದಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಅವರು ಯಾವುದೇ ಕೃಷಿ ಭೂಮಿ ಹೊಂದಿಲ್ಲ. ಕೃಷಿ ಭೂಮಿ ಇಲ್ಲದೆ ಡಿಜಿಟಲ್‌ ರೆಕಾರ್ಡ್‌ ಸಂಖ್ಯೆ (ಆರ್‌ಡಿ) ಸಿಗದು. ಹಾಗಾಗಿ ಇದೊಂದೇ ಕಾರಣ ದಿಂದ ಆಸಕ್ತಿ ಇದ್ದರೂ ಮಕ್ಕಳು ಕೋರ್ಸ್‌ಗೆ ಸೇರಲಾಗದ ವಾತಾವರಣ ಇದೆ.

ಸರಕಾರಕ್ಕೆ ವಿಶ್ವವಿದ್ಯಾನಿಲಯ ಪತ್ರ
ಇತ್ತೀಚೆಗೆ ಈ ಬಗ್ಗೆ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿ.ವಿ. ಕುಲಸಚಿವರು ರಾಜ್ಯ ಸರಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ಕರಾವಳಿಯಲ್ಲಿ ಮೀನುಗಾರರು ಮೀನುಗಾರಿಕೆ ಕೃಷಿ ಅವಲಂಬಿತರಾ ಗಿದ್ದು, ಅವರು ಜಮೀನು ಹೊಂದಿಲ್ಲ. ಕಂದಾಯ ಇಲಾಖೆಯಿಂದ ಮೀನು ಕೃಷಿಕರ ಪ್ರಮಾಣ ಪತ್ರ ಆರ್‌ಡಿ ಸಂಖ್ಯೆಯೊಂದಿಗೆ ಬರುತ್ತಿಲ್ಲ. ಹಾಗಾಗಿ ಮೀನುಗಾರರಿಗೆ ಮೀನು ಕೃಷಿಕರ/ಮೀನುಗಾರ ವ್ಯವಸಾಯ ಪ್ರಮಾಣ ಪತ್ರ ಅಥವಾ ತಹಶೀಲ್ದಾರರು ನೀಡುವ ಪ್ರಮಾಣಪತ್ರ ಪರಿಗಣಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ. ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ನಿರಂತರ ಪ್ರಯತ್ನದಿಂದ ದ.ಕ. ಜಿಲ್ಲಾಧಿಕಾರಿಗಳು, ಮೀನುಗಾರಿಕೆ ವಿದ್ಯಾಲ ಯದ ಡೀನ್‌ ಅವರು ವಿಶ್ವವಿದ್ಯಾನಿಲಯಕ್ಕೆ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ. ಸರಕಾರವೀಗ ಸ್ಪಂದಿಸಬೇಕಿದೆ.

2023-24ರಲ್ಲಿ ಮೀನುಗಾರಿಕೆ ಕಾಲೇಜಿಗೆ ಪ್ರವೇಶಾತಿಗಾಗಿ ಆರ್‌ಡಿ ನಂಬ್ರ ಇರುವ ಪ್ರಮಾಣ ಪತ್ರದ ಬದಲು ತಹಶೀಲ್ದಾರ್‌ ನೀಡುವ ಜಾತಿ ಪ್ರಮಾಣಪತ್ರ ಪರಿಗಣಿಸು ವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮೂಲಕವೇ ಜೂ. 1ರಂದು ಟಿಪ್ಪಣಿ ಹೊರಡಿಸಲಾಗಿತ್ತು. ಆದರೆ ತಹಶೀಲ್ದಾರ್‌ಗಳ ಪತ್ರ ನೀಡಿದ್ದರೂ ಸಾಫ್ಟ್‌ವೇರ್‌ನಲ್ಲಿ ಆರ್‌ಡಿ ನಂಬರ್‌ ಇಲ್ಲದ್ದಕ್ಕೆ ಕೆಇಎನಲ್ಲಿ ಅರ್ಜಿ ಪುರಸ್ಕರಿಸಿಲ್ಲ. ಈ ಬಾರಿ ಒಟ್ಟು ಸಲ್ಲಿಸಲಾಗಿದ್ದ 147 ಅರ್ಜಿಗಳಲ್ಲಿ 17 ಕೃಷಿ ಪ್ರಮಾಣಪತ್ರವಿಲ್ಲದೆ ತಿರಸ್ಕೃತಗೊಂಡಿವೆ.

ಈ ಭಾಗದಿಂದ ತುಂಬಾ ಮೀನುಗಾರರ ಮಕ್ಕಳು ಮೀನುಗಾರಿಕೆ ಕೋರ್ಸ್‌ ಕಲಿಯಲು ಆಸಕ್ತರಿದ್ದಾರೆ. ಈ ತಾಂತ್ರಿಕ ಸಮಸ್ಯೆಯ ವಿಷಯವನ್ನು ನಮ್ಮ ವಿದ್ಯಾಲಯದ ಮೂಲಕ ಸರಕಾರದ ಗಮನಕ್ಕೆ ತಂದಿದ್ದೇವೆ.
ಡಾ| ಎಚ್‌.ಎನ್‌. ಅಂಜನಪ್ಪ, ಡೀನ್‌, ಮೀನುಗಾರಿಕೆ ವಿದ್ಯಾಲಯ ಮಂಗಳೂರು

ಕಂದಾಯ ಮತ್ತು ಮೀನುಗಾರಿಕೆ ವಿಭಾಗದಿಂದ ಈ ಕುರಿತು ಯಾವ ರೀತಿ ಸಮಸ್ಯೆ ಬಗೆಹರಿಸಬೇಕು ಎನ್ನುವ ಒಂದು ಕರಡನ್ನು ಸರಕಾರಕ್ಕೆ ಕಳುಹಿಸುತ್ತೇವೆ, ಅಂತಿಮ ತೀರ್ಮಾನ ಸರಕಾರದ ಮಟ್ಟದಲ್ಲಿ ಆಗಬೇಕಿದೆ.
ಮುಲ್ಲೈ  ಮುಗಿಲನ್‌, ಜಿಲ್ಲಾಧಿಕಾರಿ

- ಉದಯವಾಣಿ ವಿಶೇಷ

ಟಾಪ್ ನ್ಯೂಸ್

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.