ಫಲ್ಗುಣಿ ನದಿಯಲ್ಲಿ ಮುಳುಗಿ ಐವರು ಬಾಲಕರ ಸಾವು
Team Udayavani, Nov 8, 2017, 10:14 AM IST
ಬಂಟ್ವಾಳ: ಅರಳ ಗ್ರಾಮ ಮೂಲರಪಟ್ನ ಫಲ್ಗುಣಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಐವರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತೀರಾ ಬಡ ಕುಟುಂಬದ ಹದಿಹರೆಯದ ಮಕ್ಕಳ ಸಾವಿನಿಂದ ಊರಿಡೀ ಶ್ಮಶಾನ ಮೌನ ಅವರಿಸಿದೆ.
ಸ್ಥಳೀಯ ನವಗ್ರಾಮ ನಿವಾಸಿ ಕೂಲಿ ಕಾರ್ಮಿಕ ಅಶ್ರಫ್ ಅವರ ನಾಲ್ಕು ಮಂದಿ ಮಕ್ಕಳಲ್ಲಿ ಎರಡನೇ ಪುತ್ರ ಪ್ರಥಮ ಪಿ.ಯು. ವಿದ್ಯಾರ್ಥಿ ಅಸ್ಲಾಂ (16), ಶರೀಫ್ ಅವರ ಎಂಟು ಮಕ್ಕಳಲ್ಲಿ ನಾಲ್ಕನೇ ಪುತ್ರ ದೇರಳಕಟ್ಟೆ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಮುದಾಸಿರ್ (17), ಶುಂಠಿಹಿತ್ಲು ಕಲ್ಲಗುಡ್ಡೆ ನಿವಾಸಿ ಜಿ. ಮಹಮ್ಮದ್ ಅವರ ಎಂಟು ಮಕ್ಕಳಲ್ಲಿ ನಾಲ್ಕನೇ ಪುತ್ರ ಬೇಕರಿ ಉದ್ಯೋಗಿ ಸವಾದ್ (17), ಕೆ. ಶರೀಫ್ ಅವರ ಐವರು ಮಕ್ಕಳಲ್ಲಿ ಮೂರನೇ ಪುತ್ರ ಮುತ್ತೂರು ಸಂಯುಕ್ತ ಪ.ಪೂ. ಕಾಲೇಜು ವಿದ್ಯಾರ್ಥಿ ರಮೀಜ್ (17), ಗುಜರಿ ವ್ಯಾಪಾರಿ ಹಕೀಂ ಅವರ ನಾಲ್ವರು ಮಕ್ಕಳಲ್ಲಿ ಮೂರನೇ ಪುತ್ರ ಅಜ್ಮಲ್ (17) ಮೃತಪಟ್ಟವರು.
ವಿವಾಹಕ್ಕೆ ಹೋಗಲಿದೆ
ಸೋಮವಾರ ಕಾಲೇಜಿಗೆ ರಜೆಯ ಹಿನ್ನೆಲೆ ಯಲ್ಲಿ ಒಬ್ಟಾತ ಬಾಲಕ ಗುರುಪುರ ಕೈಕಂಬದಲ್ಲಿ ಮಿತ್ರರೊಬ್ಬರ ವೈವಾಹಿಕ ಕಾರ್ಯ ಕ್ರಮ ಇದೆ ಎಂದು ಮನೆಮಂದಿಗೆ ಹೇಳಿದ್ದ. ಇತರ ಬಾಲಕರು ಆಟವಾಡಲೆಂದು ತಿಳಿಸಿ ಹೊರಟಿದ್ದರು ಎಂದು ಮನೆಮಂದಿ ಹೇಳು ತ್ತಾರೆ. ರಾತ್ರಿ 9 ಗಂಟೆಯ ಬಸ್ಸಲ್ಲೂ ಮಕ್ಕಳು ಬಾರದಿದ್ದಾಗ ಅವರ ಮನೆ ಮಂದಿ ಪರಸ್ಪರ ವಿಚಾರಿಸಿ ಹುಡುಕಾಟ ಆರಂಭಿಸಿದ್ದರು.
ಮೊದಲಿಗೆ ಬಾಲಕರೆಲ್ಲ ಸೇರಿಕೊಂಡು ಸಿನೆಮಾ ನೋಡಲು ಹೋಗಿರಬಹುದೆಂದು ಶಂಕಿಸ ಲಾಗಿತ್ತು. ಕೊನೆಗೆ ಯಾರೋ ಅವರು ಸ್ನಾನಕ್ಕೆಂದು ಫಲ್ಗುಣಿ ನದಿಯತ್ತ ಹೋಗಿದ್ದಾಗಿ ಮಾಹಿತಿ ನೀಡಿದರು. ಫಲ್ಗುಣಿ ನದಿಯ ಇರೆಂದಿಲು ಎಂಬ ಸ್ಥಳಕ್ಕೆ ಅವರು ಸ್ನಾನಕ್ಕೆ ಹೋಗಿದ್ದಾರೆ ಎಂಬ ವಿಚಾರ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ದೃಢವಾಯಿತು.
ಮನೆಮಂದಿ ಆ ಸ್ಥಳಕ್ಕೆ ಬಂದು ಪರಿಶೀಲಿಸಿ ದಾಗ ಬಂಡೆಕಲ್ಲಿನ ಮೇಲೆ ಮಕ್ಕಳ ಅಂಗಿ, ಪ್ಯಾಂಟ್ ಚಪ್ಪಲಿ, ಮೊಬೈಲ್‌ಗಳು ಪತ್ತೆ ಯಾದವು. ಇದರಿಂದ ಶಂಕಿತರಾದ ಊರ ಮಂದಿ ತತ್‌ಕ್ಷಣವೇ ನದಿ ನೀರಲ್ಲಿ ಇಳಿದು ಹುಡುಕಾಡಿದ್ದರೂ ಫಲಕಾರಿ ಆಗಲಿಲ್ಲ. ಬಂಟ್ವಾಳ ಗ್ರಾಮಾಂತರ ಠಾಣೆ, ಅಗ್ನಿ ಶಾಮಕ ದಳಕ್ಕೂ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಬಂದರೂ ರಾತ್ರಿಯಾಗಿದ್ದರಿಂದ ಕಾರ್ಯಾ ಚರಣೆ ಸಾಧ್ಯವಾಗಲಿಲ್ಲ.
ಬೆಳಗ್ಗೆ ಮೊದಲ ಮೃತ ದೇಹ ಪತ್ತೆ
ಮಂಗಳವಾರ ಬೆಳಗ್ಗೆ ಮೂಲರಪಟ್ನ ಸೇತುವೆಯ ಕೆಳ ಭಾಗದಲ್ಲಿ ನದಿಯ ಹತ್ತಿರ ಹೋಗಿದ್ದ ಸ್ಥಳೀಯ ವ್ಯಕ್ತಿಯೊಬ್ಬರಿಗೆ ನೀರಲ್ಲಿ ತೇಲು ತ್ತಿರುವ ಮೃತ ದೇಹವೊಂದು ಕಂಡು ಬಂತು. ಸ್ಥಳೀಯರು ಸೇರಿಕೊಂಡು ಇದೇ ಪ್ರದೇಶದಲ್ಲಿ ಇತರ ನಾಲ್ವರು ಬಾಲಕರಿಗಾಗಿ ಹುಡುಕಿದರೂ ಪ್ರಯೋಜನ ಆಗಿರಲಿಲ್ಲ. ಅಗ್ನಿ ಶಾಮಕ ದಳದ ಸಿಬಂದಿ ಮತ್ತು ಸ್ಥಳೀಯ ಈಜುಗಾರರು ನಿರಂತರ ಶೋಧ ನಡೆಸಿದ್ದು, ಬಾಲಕರು ಸ್ನಾನಕ್ಕೆ ಇಳಿದ ಸ್ಥಳದಿಂದ ಸ್ವಲ್ಪ ಕೆಳಗಿನ ಇರೆಂದಿಲು ಮತ್ತು ಮೂಲರಪಟ್ನ ಸೇತುವೆಯ ಮಧ್ಯದ ಪ್ರದೇಶ ಛತ್ರ ಶಾಲೆಯ ಎದುರು ನೀರಿನ ಆಳದಲ್ಲಿ ಮೂವರ ಮೃತದೇಹಗಳು ಪತ್ತೆಯಾದವು.
ಸಚಿವ ರಮಾನಾಥ ರೈ ಸೂಚನೆ
ವಿಧಾನಸೌಧದಲ್ಲಿ ಸಿಎಂ ಜತೆ ಪ್ರಮುಖ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ರಮಾನಾಥ ರೈ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ರಾತ್ರಿ 8.30ರ ವೇಳೆಗೆ ಬೆಂಗಳೂರಿನಿಂದ ಆಗಮಿಸಿದ ರೈ ಅವರು ನೇರವಾಗಿ ಮೃತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು.
ಪ್ರಮುಖರು ಸ್ಥಳಕ್ಕೆ
ಬಿಜೆಪಿ ನೇತಾರ ರಾಜೇಶ್ ನಾೖಕ್ ಉಳಿಪಾಡಿ ಗುತ್ತು ಮತ್ತು ಪಕ್ಷದ ಪ್ರಮುಖರು ಸ್ಥಳಕ್ಕೆ ಧಾವಿಸಿ ಮೃತ ಬಾಲಕರೆಲ್ಲರ ಮನೆಗಳಿಗೆ ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದ್ದಾರೆ.
ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ. ತುಂಗಪ್ಪ ಬಂಗೇರ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೆರ, ಉಪಾಧ್ಯಕ್ಷ ಅಬ್ಟಾಸ್ ಅಲಿ, ಪುರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್, ಗ್ರಾ.ಪಂ. ಸದಸ್ಯ ಅಶ್ರಫ್ ಮೂಲರಪಟ್ನ, ಗೇರು ಅಭಿವೃದ್ಧಿ ನಿಗಮದ ಸದಸ್ಯ ಜಗದೀಶ ಕೊçಲ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕರಾದ ನವೀನ್ ಕುಮಾರ್, ಗ್ರಾಮ ಕರಣಿಕ ಅಮೃತಾಂಶು, ರಾಜು ಲಂಬಾಣಿ, ಸಂದೀಪ್. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್. ಸಹಿತ ಇತರ ಅಧಿಕಾರಿ ವರ್ಗದವರು ಸ್ಥಳಕ್ಕೆ ಆಗಮಿಸಿದ್ದರು.
ಮಂಗಳೂರು ಎಸಿ ರೇಣುಕಾಪ್ರಸಾದ್, ಬಂಟ್ವಾಳ ಉಪವಿಭಾಗ ಎಎಸ್‌ಪಿ ಡಾ| ಅರುಣ್, ಬಂಟ್ವಾಳ ಸಿಐ ಪ್ರಕಾಶ್, ಎಸ್‌ಐ ಪ್ರಸನ್ನ, ಎಎಸ್‌ಐ ರಮೇಶ್ ಸ್ಥಳದಲ್ಲಿ ಉಪಸ್ಥಿತ ದ್ದರು. ಬಂಟ್ವಾಳ ಅಗ್ನಿಶಾಮಕ ದಳ ಎಎಸ್‌ಐ ರಾಜೀವ್ ಮತ್ತು ಸಿಬಂದಿ ಶವಗಳ ಪತ್ತೆಗಾಗಿ ದೋಣಿ ಬಳಸಿ ಹುಡುಕಾಟ ನಡೆಸಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಮೃತರ ಮನೆಮಂದಿ, ಸಂಬಂಧಿಗಳು, ಸಾರ್ವ ಜನಿಕರ ಸಹಿತ ಅಪಾರ ಜನಸಂದಣಿ ನೆರೆದಿತ್ತು.
ದಿನಪೂರ್ತಿ ಕಾರ್ಯಾಚರಣೆ; ಎಲ್ಲ ಶವಗಳೂ ಪತ್ತೆ
ಬೆಳಗ್ಗೆ ಏಳು ಗಂಟೆ ಸುಮಾರಿಗೆ ಸಾವದ್ ಮೃತ ದೇಹ ಪತ್ತೆಯಾಗಿತ್ತು. ನದಿ ನೀರಲ್ಲಿ ಹುಡುಕು ತ್ತಿದ್ದವ ರಿಗೆ ಸುಮಾರು ಹನ್ನೊಂದು ಗಂಟೆ ಸುಮಾರಿಗೆ ರಮೀಜ್, ಅಜ್ಮಲ್, ಅಸ್ಲಾಂ ಅವರ ಮೃತದೇಹ ಒಟ್ಟಾಗಿ ಪತ್ತೆ ಯಾಗಿವೆ. ರಾತ್ರಿಯ ವೇಳೆಗೆ ಮುದಾಸಿರ್ ಶವ ಪತ್ತೆಯಾಯಿತು.
ಬಂಟ್ವಾಳದಲ್ಲಿ ಶವ ಪರೀಕ್ಷೆ
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋ ತ್ತರ ಪರೀಕ್ಷೆ ನಡೆಸ ಲಾಯಿತು. ಈ ಸಂದರ್ಭ ಸಹ ಸ್ರಾರು ಸಂಖ್ಯೆಯಲ್ಲಿ ಸಾರ್ವ ಜನಿಕರು ಸೇರಿದ್ದರು.
ಅಪಾಯಕಾರಿ ಸ್ಥಳ
ಬಾಲಕರು ಸ್ನಾನಕ್ಕೆ ಇಳಿದ ಜಾಗದಲ್ಲಿ ಹೇಳಿ ಕೊಳ್ಳುವ ಆಳ ಇಲ್ಲವಾದರೂ ಆಟವಾಡುತ್ತಾ ಮುಂದಕ್ಕೆ ಹೋಗಿ ನೀರಿನ ಸೆಳೆತಕ್ಕೆ ಸಿಲುಕಿರ ಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷ ಮೂಲರಪಟ್ನ ಸೇತುವೆಯ ಕೆಳಗೆ ಫಲ್ಗುಣಿ ನದಿಯಲ್ಲಿ ಮರಳುಗಾರಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಪೊಲೀಸರು ಬಂದರೆಂಬ ಕಾರಣಕ್ಕೆ ಓಡುವ ಭರದಲ್ಲಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಎರಡು ವರ್ಷದ ಹಿಂದೆ ಇದಕ್ಕೂ ಕೆಳಗೆ ಶ್ರೀ ಶಾರದೋ ತ್ಸವ ಮೂರ್ತಿ ವಿಸರ್ಜನೆ ಸಂದರ್ಭ ನೀರಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದನ್ನು ಸ್ಮರಿಸ ಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.