ಐದು ಕೆರೆ ಬದುಕಿದವು, ಕೆಲವು ಯೋಜನೆಗಳು ದಾರಿಯಲ್ಲಿವೆ!


Team Udayavani, Mar 22, 2018, 10:24 AM IST

22-March-2.jpg

ಇಂದು ವಿಶ್ವ ಜಲ ದಿನ. ಕಳೆದ ಬೇಸಗೆಯಲ್ಲಿ ಮಂಗಳೂರಿನಲ್ಲಿ ನೀರಿಗೆ ರೇಷನ್‌ ಪದ್ಧತಿ ಅಳವಡಿಸುವ ಸ್ಥಿತಿ ಇತ್ತು. ಈ ವರ್ಷ ತುಂಬೆ ಡ್ಯಾಂನಲ್ಲಿ ಒಂದು ಮೀಟರ್‌ ಹೆಚ್ಚು ನೀರು ನಿಲ್ಲಿಸಿರುವುದರಿಂದ ಅಷ್ಟೊಂದು ಆತಂಕವಿಲ್ಲ. ಆದರೆ ಬೆಳೆಯುತ್ತಿರುವ ನಗರಕ್ಕೆ ಈ ಒಂದು ಮೀಟರ್‌ ನೀರು ಎಷ್ಟು ದಿನ? ಈ ಹಿನ್ನೆಲೆಯಲ್ಲಿ ಹಿಂದಿನ ವರ್ಷ ಆರಂಭವಾದ ಜಲ ಸಂರಕ್ಷಣೆಯ ಕ್ರಮಗಳು ಏನಾಗಿವೆ? ಎಂಬುದನ್ನು ವರದಿಗಾರ ದಿನೇಶ್‌ ಇರಾ ಪರಿಶೀಲಿಸಲು ಯತ್ನಿಸಿದ್ದಾರೆ. ಅದರ ವಿವರ ಇದು. 

ಮಹಾನಗರ: ಹಿತ್ತಲಲ್ಲೊಂದು ಬಾವಿ… ಊರಿನಲ್ಲೊಂದು ಕೆರೆ ಎಂಬುದು ಸಾಮಾನ್ಯವಾಗಿತ್ತು. ಆ ಕೆರೆ ಬಾವಿಗಳು ಬರೀ ನೀರಿನ ಮೂಲ ಮಾತ್ರವಲ್ಲ. ಬದುಕಿನ ಸೆಲೆ. ಆದರೆ ಇಂದು ಅವುಗಳ ಜಾಗದಲ್ಲಿ ಬಸ್‌ ನಿಲ್ದಾಣಗಳ್ಳೋ, ವಾಣಿಜ್ಯ ಸಂಕೀರ್ಣಗಳ್ಳೋ, ಆಟದ ಮೈದಾನಗಳು ಬಂದಿವೆ. ಸಾರ್ವಜನಿಕ ಬಾವಿಗಳನ್ನು ಒಂದೋ ಮುಚ್ಚಲಾಗಿದೆ, ಇಲ್ಲವೇ ಬಳಸದೇ ಪಾಳು ಬೀಳಿಸಿದ್ದೇವೆ. ಬಹಳಷ್ಟು ಖಾಸಗಿ ಬಾವಿಗಳು ಮಲಿನ ನೀರು ಸೇರಿ ಬಳಸದಂತಾಗಿವೆ.

ಇಂಥ ಆತಂಕದ ಮಧ್ಯೆಯೇ ಮಂಗಳೂರಿನ 5 ಕೆರೆಗಳಿಗೆ ಮರುಜೀವ ನೀಡುವಲ್ಲಿ ಶಾಸಕ ಜೆ.ಆರ್‌. ಲೋಬೋ ಯಶಸ್ವಿಯಾಗಿರುವುದು ವಿಶೇಷ. ಉದ್ಯೋಗ ಖಾತರಿ ಯೋಜನೆ ಮೂಲಕ ‘ಜಲಧಾರೆ’ ಯೋಜನೆಯನ್ನು ಜಿ.ಪಂ. ಅನುಷ್ಠಾನಿಸುತ್ತಿದೆ. ಜಿಲ್ಲೆಯ ವಿವಿಧೆಡೆ ಕಿಂಡಿ ಅಣೆಕಟ್ಟು ಕಟ್ಟಿ ನೀರು ಸಂರಕ್ಷಣೆಗೆ ಮುಂದಾಗುತ್ತಿದೆ. ‘ಕೃಷಿ ಹೊಂಡ’ ಯೋಜನೆ ಮೂಲಕ ಅಂತರ್ಜಲ ಹೆಚ್ಚಾಗಿ ಕೃಷಿಕನಿಗೆ ಸಿಗಲಿ ಎಂಬ ಪರಿಕಲ್ಪನೆ ಜಾರಿಗೊಂಡಿತ್ತು. ಬೋರ್‌ವೆಲ್‌ಗ‌ಳ ಜಲಮರುಪೂರಣ, ಇಂಗುಗುಂಡಿಯ ಮೂಲಕವೂ ಒಂದಿಷ್ಟು ನೀರು ಉಳಿಸಿಕೊಳ್ಳಲಾಗಿದೆ.

ಬಹುಗ್ರಾಮ ನೀರಿನ ಯೋಜನೆ
ಬಂಟ್ವಾಳ ತಾಲೂಕಿನಲ್ಲಿ ಕರೋಪಾಡಿ ಹಾಗೂ ಸಂಗಬೆಟ್ಟು ಹಾಗೂ ಹಾಗೂ ಮಂಗಳೂರು ತಾಲೂಕಿನ ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಒದಗಿಸಲಾಗುತ್ತಿದೆ. ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಇದೇ ಯೋಜನೆಯ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದೆ. ಸರಪಾಡಿ ಹಾಗೂ ನರಿಕೊಂಬು ಯೋಜನೆಯ ಡಿಪಿಆರ್‌ನ ತಾಂತ್ರಿಕ ಮಂಜೂರಾತಿ ಸಿಗಬೇಕಿದೆ. ಕಿನ್ನಿಗೋಳಿ ಯೋಜನೆಯ ಉಳಿಕೆ ಕಾಮಗಾರಿ ಆರಂಭವಾಗಲಿದೆ.

ನದಿಯಲ್ಲಿ ಮರಳು ತೆಗೆಯುವುದರಿಂದ ನೀರಿನ ಸಾಂದ್ರತೆಗೆ ಧಕ್ಕೆ ಆಗುತ್ತದೆ. ಕೆಲವು ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆದ ಪರಿಣಾಮ ನದಿಯಲ್ಲಿನ ನೀರಿನ ಪ್ರಮಾಣದಲ್ಲೂ ವ್ಯತ್ಯಯವಾಯಿತು. ಆದರೆ, ಎರಡು ವರ್ಷಗಳಿಂದ ಜಿಲ್ಲಾಧಿಕಾರಿಯು ಮರಳುಗಾರಿಕೆಗೆ ಹೊಸ ಪರ್ಮಿಟ್‌ ನೀಡದಿರುವುದು ನಿಜಕ್ಕೂ ಉತ್ತಮ ನಿರ್ಧಾರವಾಗಿದೆ.

ಮಳೆ ನೀರು ಕೊಯ್ಲು ಕಡ್ಡಾಯ!
ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಾಗದಿರಲು ಜಿಲ್ಲೆಯಾದ್ಯಂತ 2017ರ ಎ. 1ರಿಂದ ಮಳೆನೀರು ಕೊಯ್ಲು ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಜಿ.ಪಂ. ನಿರ್ಧರಿಸಿತ್ತು. ಇದರ ಜತೆಗೆ ಇಂಗುಗುಂಡಿಗಳ ರಚನೆ ಹಾಗೂ ತೆರೆದ ಬಾವಿಗೆ ಜಲ ಮರುಪೂರಣ ಯೋಜನೆಯನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಸಿದ್ಧತೆ ನಡೆಸಿತ್ತು. ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾ.ಪಂ./ಪೊಲೀಸ್‌ ಠಾಣೆಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ಯೋಜನೆ ಅನುಷ್ಠಾನಗೊಳಿಸುವಂತೆ ಜಿ.ಪಂ. ಎಲ್ಲ ಗ್ರಾ.ಪಂ.ಗಳಿಗೆ ಸುತ್ತೋಲೆ ಕಳಿಸಿತ್ತು. ಆದರೆ, ಬಹುತೇಕ ಭಾಗದಲ್ಲಿ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ.

ನೀರಿನ ಸದ್ಬಳಕೆಯ ಬಗ್ಗೆ ಅರಿವು ಮೂಡಿಸಲು ಮಹಾನಗರ ಪಾಲಿಕೆಯ ಎಲ್ಲ ಪ್ರಮುಖ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಲು 2017ರ ಬಜೆಟ್‌ನಲ್ಲಿ 1 ಕೋ. ರೂ. ಅನುದಾನ ಕಾದಿರಿಸಿತ್ತು. ಜತೆಗೆ ಮನಪಾ ವ್ಯಾಪ್ತಿಯಲ್ಲಿ 100 ಚ.ಮೀಟರ್‌ ವಿಸ್ತೀರ್ಣ ಮತ್ತು ಅದಕ್ಕಿಂತ ಹೆಚ್ಚಿನ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲು ಪಾಲಿಕೆ ಕಳೆದ ವರ್ಷದ ಫೆಬ್ರವರಿಯಲ್ಲಿ ತೀರ್ಮಾನ ಕೈಗೊಂಡಿತ್ತು. ವಿಶೇಷ ಅಂದರೆ, 2016ರಲ್ಲೂ ಇದೇ ಮಂತ್ರವನ್ನು ಜಪಿಸಿತ್ತು. ಮೇ 31ರಂದು ನಡೆದ ಪಾಲಿಕೆ ಸಭೆಯಲ್ಲಿ ಹೊರಡಿಸಿದ ಅಧಿಕೃತ ಪ್ರಕಟನೆಯ ಪ್ರಕಾರ, ಮನಪಾ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದ ವಾಣಿಜ್ಯ ಉಪಯೋಗದ ಕಟ್ಟಡಗಳು ಹಾಗೂ ಎಲ್ಲ ವಿಧದ ಕೈಗಾರಿಕಾ ಕಟ್ಟಡಗಳು ಹಾಗೂ 2,000 ಚ.ಅಡಿಗಿಂತ ಹೆಚ್ಚಿರುವ ಎಲ್ಲ ಕಟ್ಟಡಗಳಲ್ಲಿ ‘ಮಳೆ ನೀರು ಕೊಯ್ಲು ಕಡ್ಡಾಯ’ ಎಂದಿತ್ತು. ಇದರ ಅನುಷ್ಠಾನವೂ ಸ್ಪಷ್ಟವಾಗಿ ಎಲ್ಲೂ ಕಂಡು ಬರುತ್ತಿಲ್ಲ.

ನೀರು ಲಭ್ಯತೆಗಿಂತ ವ್ಯತ್ಯಯವೇ ಅಧಿಕ..!
ಲಭ್ಯ ನೀರನ್ನು ಬಳಸುವ ರೀತಿಯಲ್ಲೂ ಸುಧಾರಣೆಗೆ ವಿಶೇಷ ಗಮನ ನೀಡಬೇಕು. ನೀರಿನ ಸೋರಿಕೆ ತಡೆಗಟ್ಟಲು ಆಡಳಿತ ವ್ಯವಸ್ಥೆ ಹೆಚ್ಚಿನ ಗಮನ ಹರಿಸಿಲ್ಲ. ಪಾಲಿಕೆಯದ್ದೇ ಉದಾಹರಣೆಗೆ ಪರಿಗಣಿಸುವುದಾದರೆ, ತುಂಬೆಯಿಂದ ಪ್ರತೀದಿನ 160 ಎಂ.ಎಲ್‌ .ಡಿ. ನೀರು ಪಂಪಿಂಗ್‌ ಮಾಡಲಾಗುತ್ತಿದೆ. ಇದರಲ್ಲಿ 140 ಎಂ.ಎಲ್‌.ಡಿಯಷ್ಟು ಮಾತ್ರ ಬಳಕೆಯಾಗುತ್ತಿದೆ. ಉಳಿದ 20 ಎಂ.ಎಲ್‌.ಡಿ ನೀರು ಸೋರಿಕೆಯಾಗುತ್ತಿದೆ. ಇದನ್ನು ಸರಿಪಡಿಸಲು ಇನ್ನೂ ಸಮಗ್ರ ಕ್ರಮ ಅನುಸರಿಸಿಲ್ಲ.  

ತುಂಬೆ ಪಂಪ್‌ ಹೌಸ್‌ನಿಂದ ನೀರನ್ನು ನಗರದ ಪಂಪ್‌ ಹೌಸ್‌ಗಳಿಗೆ ಪೂರೈಕೆ ಮಾಡುವ ಹಂತದಲ್ಲಿ ಸೋರಿಕೆಯಾಗಿ ಕಣ್ಣೂರು, ಫರಂಗಿಪೇಟೆ, ಅಡ್ಯಾರು ಮುಂತಾದ ವ್ಯಾಪ್ತಿಗೆ ಹರಿಯುತ್ತಿದೆ. ಇದಾವುದಕ್ಕೂ ಶುಲ್ಕ ವಸೂಲಿ ಮಾಡಲಾಗುತ್ತಿಲ್ಲ. ಈಗಿನ 21 ಎಂಜಿಡಿ (ಮಿಲಿಯನ್‌ ಗ್ಯಾಲನ್‌) ಎಡಿಬಿ ಕೊಳವೆ ಮಾರ್ಗದ ಪಕ್ಕದಲ್ಲಿ ಹಳೆಯ ಪುರಸಭೆ ಅವಧಿಯ ಎಂಜಿಡಿ ಕೊಳವೆಯಿದೆ. ಅದರಿಂದ ಗ್ರಾಮೀಣ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಜಿ.ಪಂ. ಗೆ ಹಸ್ತಾಂತರ ಮಾಡಿದರೂ ಇನ್ನೂ ಬಳಸುತ್ತಿಲ್ಲ. ಪರಿಣಾಮವಾಗಿ ಅಕ್ರಮ ಸಂಪರ್ಕಗಳು ಅಧಿಕವಿದೆ.

ಮಳೆ ಕೊಯ್ಲು- ಏನು ಮಾಡಬಹುದು?
ಎರಡು ತಿಂಗಳ ಬಳಿಕ ಮಳೆಗಾಲ. ಇದಕ್ಕಿಂತ ಮೊದಲು ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದರೆ ಒಳ್ಳೆಯದು. ಇದಕ್ಕಾಗಿ ಸರಕಾರ/ಪಾಲಿಕೆಯನ್ನು ಕಾಯಬೇಕಾಗಿಲ್ಲ. ಯಾಕೆಂದರೆ, ಮನೆ-ಕಟ್ಟಡದಲ್ಲಿ ಮಳೆ ನೀರು ಕೊಯ್ಲು ಯೋಜನೆ ಅಳವಡಿಸಿಕೊಳ್ಳುವುದು ಕಷ್ಟದ ಕೆಲಸವಲ್ಲ. ಮನೆ/ಕಟ್ಟಡದ ಛಾವಣಿ ಅಥವಾ ತಾರಸಿ, ಕಿಟಕಿ, ಬಾಗಿಲಿನ ಮೇಲೆ ಬೀಳುವ ಮಳೆ ನೀರು ಪೋಲಾಗದಂತೆ ಮೊದಲು ವ್ಯವಸ್ಥೆ ಮಾಡಬೇಕು. ಬಳಿಕ ಈ ಎಲ್ಲ ನೀರೂ ಕೊಳವೆಗಳ ಮೂಲಕ ಒಂದೆಡೆ ಸಂಗ್ರಹವಾಗುವಂತೆ ಮಾಡಬೇಕು. ಅದಕ್ಕೂ ಮುನ್ನ ಈ ನೀರು ಸಂಗ್ರಹಿಸಲು ಮನೆಯ ಅಂಗಳದಲ್ಲಿ ಒಂದು ದೊಡ್ಡ ತೊಟ್ಟಿ ನಿರ್ಮಿಸಿಕೊಳ್ಳಬೇಕು. 

ಮನೆ ನಂಬರ್‌ ಸಿಗಬೇಕಾದರೆ ಮಳೆಕೊಯ್ಲು ಕಡ್ಡಾಯ
ಜಿ.ಪಂ. ವ್ಯಾಪ್ತಿಯಲ್ಲಿ ಎರಡು ಸಾವಿರ ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಮನೆ/ಕಟ್ಟಡ ನಿರ್ಮಿಸುವುದಾದರೆ, ಮಳೆ ನೀರು ಕೊಯ್ಲು ಹಾಗೂ ಶೌಚಾಲಯ ವ್ಯವಸ್ಥೆಗಳು ಕಡ್ಡಾಯವಾಗಿ ಮಾಡಬೇಕೆಂಬ ನಿಯಮವಿದೆ. ಮನೆ ನಂಬರ್‌/ ಕಟ್ಟಡ ಸಂಖ್ಯೆ ನೀಡುವಾಗ ಪರಿಶೀಲಿಸಬೇಕಿದೆ. ಪ್ರಸಕ್ತ ಇದು ಕೆಲವು ಗ್ರಾ.ಪಂ.ನಲ್ಲಿ ಮಾತ್ರ ಅನುಷ್ಠಾನವಾಗುತ್ತಿದೆ.

ಮಂಗಳೂರಿನಲ್ಲಿ ನೀರಿನ ಸಂರಕ್ಷಣೆ; ಅಗತ್ಯತೆಗಳು ಯಾವುದು?
ಮಂಗಳೂರು ನಗರದ ಅಂದಾಜು ನೀರಿನ ಬೇಡಿಕೆ, ಲಭ್ಯವಿರುವ ಜಲಮೂಲಗಳು ಹಾಗೂ ಮತ್ತು ಅವುಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಮಾಹಿತಿ ಕ್ರೋಢೀಕರಣ ಆಗಬೇಕಿದೆ. ಈ ಕುರಿತು ಸಮಗ್ರ ಕೈಪಿಡಿ ಸಿದ್ಧವಾಗಬೇಕಿದೆ. ಕುಡಿಯುವ ನೀರು ಸಂಪರ್ಕ ಜಾಲದ (ಪೈಪ್‌ಲೈನ್‌ ನೆಟ್‌ವರ್ಕ್‌) ನಿಖರ ನಕ್ಷೆ ತಯಾರಿ, ಸಮಗ್ರ ವಿವರವೂ ಪಾಲಿಕೆಯಲ್ಲಿಲ್ಲ. ಅಂದಾಜಿನಲ್ಲೆ ಎಲ್ಲವೂ ನಡೆಯುತ್ತಿರುವುದರಿಂದ ವಿತರಣೆಯಲ್ಲಿ ವ್ಯತ್ಯಾಸಗಳಾಗುತ್ತಿವೆ. ಜನವರಿಯಿಂದ ಜೂನ್‌ವರೆಗೆ ನೇತ್ರಾವತಿ ನದಿ ನೀರು ಒಳಹರಿವು ಬಗ್ಗೆ ನಿರಂತರ ನಿಗಾ ವಹಿಸಿ ನೀರು ಪೂರೈಕೆ ವೇಳಾಪಟ್ಟಿಯನ್ನು ಹೊಂದಿಸಬೇಕು. ತ್ಯಾಜ್ಯ ನೀರು ಸಂಸ್ಕರಿಸಿ ಕೈಗಾರಿಕೆಗಳಿಗೆ ಬಳಸಬೇಕು. ಸಮುದ್ರದ ಉಪ್ಪುನೀರು ಸಂಸ್ಕರಿಸಿ ಕೈಗಾರಿಕೆಗಳಿಗೆ ಬಳಸಲು (ಪ್ರಸ್ತುತ ಸರಕಾರ ಇದಕ್ಕೆ ಒಪ್ಪಿಗೆ ನೀಡಿದೆ) ಉತ್ತೇಜಿಸಬೇಕು ಹಾಗೂ ಜಲಕಾವಲು ಸಮಿತಿ ರಚಿಸಬೇಕು. ಇನ್ನಷ್ಟು ಕೆರೆಗಳ ಪುನಃಶ್ಚೇತನಕ್ಕೆ ಉತ್ತೇಜನ ನೀಡಿ, ಮಳೆನೀರು ಕೊಯ್ಲು ಕಡ್ಡಾಯ ಅನುಷ್ಠಾನಕ್ಕೆ ಮುಂದಾಗಬೇಕು. ಬಾವಿ, ಕೊಳವೆ ಬಾವಿಗಳಿಗೆ ಜಲಮರುಪೂರಣ ಕೈಗೊಳ್ಳಬೇಕು.

ಟಾಪ್ ನ್ಯೂಸ್

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.