ಕಲ್ಲಂದಡ್ಕ ಕ್ರಷರ್ ಘಟಕದ ವಿರುದ್ಧ ಫ್ಲೆಕ್ಸ್ ಸಮರ
Team Udayavani, Mar 22, 2018, 2:39 PM IST
ಕುಳ : ಇಡ್ಕಿದು ಗ್ರಾ.ಪಂ. ವ್ಯಾಪ್ತಿಯ ಕುಳ ಗ್ರಾಮದ ಕಲ್ಲಂದಡ್ಕದಲ್ಲಿರುವ ಅಕ್ರಮ ಜಲ್ಲಿ ಕ್ರಷರ್ ಹಾಗೂ ಕೃತಕ ಮರಳು (ಎಂ. ಸ್ಯಾಂಡ್) ಘಟಕದ ವಿರುದ್ಧ ಅಧಿಕಾರಿಗಳ ಗಮನ ಸೆಳೆಯಲು ಜಿ.ಪಂ. ರಸ್ತೆಯ ಪಕ್ಕ ಫ್ಲೆಕ್ಸ್ ಅಳವಡಿಸಿದ್ದಾರೆ.
ಈ ಹಿಂದೆ ದೂರುಗಳ ಹಿನ್ನೆಲೆಯಲ್ಲಿ ಕಲ್ಲಂದಡ್ಕ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗಣಿ, ಪರಿಸರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕ್ರಷರ್ ಘಟಕ ಸ್ಥಾಪಿಸಲು ಇದು ಸುರಕ್ಷಿತ ಸ್ಥಳವಲ್ಲ ಎಂದು ತಿಳಿಸಿದ್ದರು. ಆದರೂ ಘಟಕ ಸ್ಥಗಿತಗೊಳ್ಳದ ಕಾರಣ ಕುಳ ಗ್ರಾಮದ ಕಬಕ, ಕಲ್ಲಂದಡ್ಕ, ಕುಡುವರ ಪಡ್ಡು, ಓಜಾಲ ಭಾಗಕ್ಕೆ ತೆರಳುವ ರಸ್ತೆ ಪಕ್ಕದಲ್ಲೇ ಈ ಫ್ಲೆಕ್ಸ್‌ಗಳನ್ನು ಗ್ರಾಮಸ್ಥರು ಅಳವಡಿಸಿದ್ದಾರೆ.
ಕಲ್ಲಂದಡ್ಕ ಜನವಸತಿ ಪ್ರದೇಶದಲ್ಲಿರುವ ಅಕ್ರಮ ಕ್ರಷರ್ ಮತ್ತು ಎಂ.ಸ್ಯಾಂಡ್ (ಕೃತಕ ಮರಳು) ಘಟಕ ನಿಷೇಧಿಸಿ, ಈ ಭಾಗದ ಜನರಿಗೆ ನಿರ್ಭಯವಾಗಿ ಬದುಕಲು ಅವಕಾಶ ಕಲ್ಪಿಸಿ. ಗ್ರಾಮೀಣ ರಸ್ತೆಗಳು ಗಣಿ ಮಾಫಿಯಾದ ಅಟ್ಟಹಾಸಕ್ಕೆ ಬಲಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಿ. ಮನೆ, ಮಂದಿರ, ಮಸೀದಿ, ಮದ್ರಸ, ಅಂಗನವಾಡಿಗಳಿರುವ ಕಲ್ಲಂದಡ್ಕ ಪ್ರದೇಶ ಕಲ್ಲು ಗಣಿ ಉದ್ಯಮಕ್ಕೆ ಸೂಕ್ತವಲ್ಲ. ಶಬ್ದ ಹಾಗೂ ಪರಿಸರ ಮಾಲಿನ್ಯವಾಗುತ್ತಿದ್ದು, ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಅಂತಾರಾಜ್ಯ ನೋಂದಣಿ ವಾಹನಗಳು ಕೇರಳಕ್ಕೆ ಕೃತಕ ಮರಳು ಹಾಗೂ ಜಲ್ಲಿಕಲ್ಲುಗಳನ್ನು ಸಾಗಿಸುತ್ತಿದ್ದು, ಜನರು ಪ್ರಾಣಭಯದಿಂದ ದಿನ ಕಳೆಯುವಂತಾಗಿದೆ. ಅಧಿಕಾರಿಗಳು ಈ ಅಕ್ರಮ ಕಲ್ಲುಗಣಿಯನ್ನು ತಡೆಯಲು ವಿಫಲರಾದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸುವ ಫ್ಲೆಕ್ಸ್ ಗಳನ್ನು ‘ನೊಂದ ಕುಳ ಗ್ರಾಮಸ್ಥರು’ ಹೆಸರಿನಲ್ಲಿ ಅಳವಡಿಸಲಾಗಿದೆ.
ಸಮಸ್ಯೆಗಳ ಪರಿಹಾರಕ್ಕೆ ಸದಾಸಿದ್ಧ
ಸಾರ್ವಜನಿಕರಿಗೆ ತೊಂದರೆಯಾಗುವ ಉದ್ಯಮಗಳಿಗೂ ಗ್ರಾ.ಪಂ.ಅವಕಾಶ ನೀಡುವುದಿಲ್ಲ. ಕ್ರಶರ್ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೈಸೆನ್ಸ್ ನವೀಕರಣ ಮಾಡಿಲ್ಲ. ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸ್ಥಳೀಯಾಡಳಿತ ಸದಾ ಸಿದ್ಧವಿದೆ. ಗ್ರಾಮಸ್ಥರ ಎಲ್ಲ ನ್ಯಾಯಯುತ ಹೋರಾಟಗಳಿಗೂ ನಾವು ಸ್ಪಂದನೆ ನೀಡಿದ್ದೇವೆ.
– ಸುಧೀರ್ ಕುಮಾರ್ ಶೆಟ್ಟಿ
ಇಡ್ಕಿದು ಗ್ರಾ.ಪಂ. ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.