ನೇತ್ರಾವತಿ ನದಿ ಉಬ್ಬರ: ಶಂಭೂರು ಡ್ಯಾಂ ಅಪಾಯದ ಸಂಕೇತ ಸೈರನ್ ಸದ್ದು
ತುಂಬೆ ಡ್ಯಾಂ ಎಲ್ಲ ಗೇಟ್‌ಗಳನ್ನು ತೆರೆದು ನೀರು ಬಿಡುಗಡೆ
Team Udayavani, Aug 9, 2019, 4:01 PM IST
ಬಂಟ್ವಾಳ : ಬಿರುಸುಗೊಂಡಿರುವ ಮಳೆ, ಬಿರುಗಾಳಿಯಿಂದ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಘಟ್ಟದ ಮೇಲಿಂದ ಬರುತ್ತಿರುವ ನೀರ ಹರಿವಿನಿಂದ ನದಿಯಲ್ಲಿ ಮಹಾಪೂರ ಆರಂಭವಾಗಿದೆ. ಶಂಭೂರು ಡ್ಯಾಂನಲ್ಲಿ ನೀರನ್ನು ನಿಯಂತ್ರಿಸಿ ಬಿಡುವ ಸೈರನ್ ಸತತವಾಗಿ ಮೊಳಗಿಸುತ್ತಿದ್ದು ನದಿ ಪಾತ್ರದ ಜನರು ಜೀವರಕ್ಷಣೆ, ತಮ್ಮ ಜಾನುವಾರುಗಳ ಪ್ರಾಣಿಗಳ ರಕ್ಷಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಮರಬಿದ್ದು, ಮಣ್ಣು ಕುಸಿದು ತಾಲೂಕಿನ ನಗರ ಗ್ರಾಮಾಂತರ ಪ್ರದೇಶ ಹಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಗುರುವಾರ ನಿಲುಗಡೆಯಾದ ವಿದ್ಯುತ್ ಸಂಪರ್ಕವನ್ನು ಶುಕ್ರವಾರವೂ ಮುಂದುವರಿಸಿದ್ದು ಇಲಾಖಾ ಲೈನ್‌ಮೆನ್, ಮೆಸ್ಕಾಂ ಜೆ.ಇ. ಸಹಿತ ಸಿಬಂದಿಗಳು ಅಡಚಣೆ ಉಂಟಾದ ಪ್ರದೇಶಗಳಲ್ಲಿ ಸಂಚರಿಸಿ ದುರಸ್ತಿ ಕಾರ್ಯ ಮಾಡುತ್ತಿದ್ದರೂ ಇನ್ನೂ ಅನೇಕ ಮಂದಿ ತೊಂದರೆಯಲ್ಲಿ ಇರುವುದಾಗಿ ಮಾಹಿತಿ ಮೂಲಗಳು ಹೇಳಿದೆ.
ಪಾಣೆಮಂಗಳೂರು ನಂದಾವರ ಸಂಪರ್ಕದ ಸೇತುವೆಯ ಮೇಲಕ್ಕೆ ನೆರೆ ನೀರು ಬಂದಿದ್ದು ಬ್ಯಾರಿಕೇಡ್ ಅಳವಡಿಸಿದ್ದ ಪೊಲೀಸರು ಸಂಚಾರ ನಿಯಂತ್ರಿಸಿದ್ದಾರೆ. ಇದರಿಂದ ಇತಿಹಾಸ ಪ್ರಸಿದ್ದ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನಕ್ಕೆ ಶ್ರೀ ವರಮಹಾಲಕ್ಷಿ$¾à ಪೂಜೆಗೆ ಹೋಗುವ ಭಕ್ತಾಧಿಗಳಿಗೆ ತೊಂದರೆ ಆಗಿದ್ದು ಅವರು ಮೂರು ಕಿ.ಮೀ. ದೂರದ ಮೆಲ್ಕಾರ್ ಮಾರ್ನಬೈಲು ಮೂಲಕ ಸಂಚರಿಸುವಂತಾಗಿದೆ.
ಪಾಣೆಮಂಗಳೂರು ಆಲಡ್ಕ ಸೇತುವೆಯ ಮೇಲೆ ನೆರೆ ನೀರು ಉಕ್ಕಿ ಬಂದಿದ್ದು ಅಲ್ಲಿಯೂ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಿಸಿದ್ದಾರೆ. ನೀರಲ್ಲಿ ಯಾರೂ ಈಜುವುದಕ್ಕೆ ಹೋಗದಂತೆ ಎಚ್ಚರಿಸಲಾಗಿದೆ.
ಬಂಟ್ವಾಳ ಬಡ್ಡಕಟ್ಟೆ, ರಾಯರಚಾವಡಿ, ಕಂಚುಗಾರಪೇಟೆ, ಬಸ್ತಿಪಡು³ಗಳಲ್ಲಿ ನೆರೆ ನೀರು ರಸ್ತೆಯ ಮೇಲಕ್ಕೆ ಬಂದಿದ್ದು ಸಂಚಾರ ನಿಯಂತ್ರಿಸಲಾಗಿದೆ.
ಗಂಜಿ ಕೇಂದ್ರ
ನೆರೆ ಪೀಡಿತರಿಗಾಗಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರಕ್ಕೆ ಪಾಣೆಮಂಗಳೂರು ಸುಣ್ಣದಗೂಡು ಶೆಡ್‌ಗಳಲ್ಲಿ ತಗ್ಗು ಪ್ರದೇಶದಲ್ಲಿ ವಾಸ್ತವ್ಯ ಇದ್ದಂತಹ 80ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿ ಅವರಿಗೆ ಬೆಳಗ್ಗಿನ ಉಪಹಾರ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಪ್ರಮುಖವಾಗಿ ಆಲಡ್ಕಪಡು, ಪಾಣೆಮಂಗಳೂರು ಗೂಡಿನಬಳಿಯ ಶೆಡ್‌ಗಳಲ್ಲಿ ವಾಸ್ತವ್ಯ ಇದ್ದಂತಹ ಕೂಲಿಕಾರ್ಮಿಕರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ನೆರೆ ಏರುವ ಭೀತಿ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸ್ಥಳಾಂತರ ಕಾರ್ಯಾಚರಣೆ ನಡೆಸಿದ್ದಾಗಿ ಬಂಟ್ವಾಳ ತಹಶೀಲ್ದಾರ ರಶ್ಮಿ ಎಸ್.ಆರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.