ಮಳೆಗಾಲದಲ್ಲಿ ನೆರೆ ಭೀತಿ; ತಡೆಗೋಡೆ ಶಿಥಿಲ
Team Udayavani, Aug 9, 2021, 3:30 AM IST
ನಂದಿನಿ ನದಿ ತಟದಲ್ಲಿರುವ ಪಂಜ ಗ್ರಾಮಕ್ಕೆ ನೆರೆ ಭೀತಿಯೇ ಪ್ರಮುಖ ಸವಾಲು. ಇದಲ್ಲದೇ ಕುಡಿಯುವ ನೀರಿನ ತತ್ವಾರಕ್ಕೆ ಪರಿಹಾರ ಜತೆಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನ ಇಂದಿನ “ಉದಯವಾಣಿ ಸುದಿನ’ದ “ಒಂದು ಊರು- ಹಲವು ದೂರು’ ಸರಣಿಯಲ್ಲಿ ಮಾಡಲಾಗಿದೆ.
ಕಿನ್ನಿಗೋಳಿ: ಪಂಜ ಗ್ರಾಮದ ಹೆಚ್ಚಿನ ಭಾಗ ನಂದಿನಿ ನದಿಯ ತಟದಲ್ಲಿದೆ. ಮಳೆಗಾಲದಲ್ಲಿ ಇಲ್ಲಿನ ಜನರಿಗೆ ನೆರೆ ಭೀತಿ ಸಾಮಾನ್ಯ. 26 ವರ್ಷಗಳ ಹಿಂದೆ ಮಹಾ ನೆರೆಯಿಂದಾಗಿ ಇಲ್ಲಿನ ಜನರು ಆಸ್ತಿ-ಪಾಸ್ತಿಯನ್ನು ಕಳೆದುಕೊಂಡು ಬೀದಿ ಪಾಲು ಆಗಿದ್ದರು ಎಂಬುದು ಬೇಸರದ ಸಂಗತಿ.
ಮಂಗಳೂರು ನಗರದಿಂದ ಸುಮಾರು 32 ಕಿ.ಮೀ. ದೂರದಲ್ಲಿರುವ ಪಂಜ ಗ್ರಾಮ ಮೂಲ್ಕಿ -ಮೂಡುಬಿದಿರೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಬಿರುಸು ಮಳೆ ಬಂದರೆ ಸಾಕು ನೆರೆ ಬಂದು ಗ್ರಾಮದ ಜನರು ಅಸ್ತವ್ಯಸ್ತ ಪಡು ವಂತಾಗುತ್ತದೆ. ಈ ಸಮಸ್ಯೆಗೆ ಇನ್ನು ಸೂಕ್ತ ಪರಿಹಾರ ಸಿಕ್ಕಿಲ್ಲ.
ಮಳೆಗಾಲದಲ್ಲಿ ನೆರೆ ಭೀತಿ:
ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯಲ್ಲಿನ ಪಂಜ ಗ್ರಾಮವು ಹೆಚ್ಚಿನ ಭಾಗ ಕೃಷಿ ಭೂಮಿಯನ್ನು ಹೊಂದಿದ್ದು, ಸ್ಥಳೀಯರು ಭತ್ತ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಈ ಪ್ರದೇಶವು ತಗ್ಗು ಪ್ರದೇಶವಾಗಿರುವುದರಿಂದ ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಸ್ವಲ್ಪ ಜಾಸ್ತಿ ಮಳೆ ಬಂದರೆ ಬೈಲಗುತ್ತು ಹಾಗೂ ಕೆಳಗಿನ ಭಾಗಗಳು ಜಲಾವೃತವಾಗಿ ದ್ವೀಪದಂತಾಗುತ್ತವೆ. ನೆರೆಯನ್ನು ನಿಯಂತ್ರಣಕ್ಕಿರುವ ತಡೆಗೋಡೆಯೂ ಕೂಡ ಸಮರ್ಪಕವಾಗಿಲ್ಲ. ಮಹಾ ನೆರೆ ಬಂದ ಹೋದ ಬಳಿಕ ಇಲ್ಲಿನ ನಂದಿನಿ ನದಿ ಪಾತ್ರಕ್ಕೆ ಮಣ್ಣು ಕಲ್ಲುಗಳಿಂದ ತಡೆಗೋಡೆ ಕಟ್ಟಲಾಗಿದೆ. ಆದರೆ ನೆರೆ ರಭಸಕ್ಕೆ ಕೆಲವು ಭಾಗಗಳಲ್ಲಿ ಆ ತಡೆಗೋಡೆಯೂ ಕೂಡ ಶಿಥಿಲವಾಗಿದೆ.
ಇತರ ಸಮಸ್ಯೆಗಳೇನು? :
- ಮಳೆಗಾಲದಲ್ಲಿ ಕೂಡ ಸ್ಥಳೀಯವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ನೆರೆ ಬಂದರೆ ಹೆಚ್ಚಿನ ಬಾವಿಗಳಿಗೆ ಕೆಸರು ತುಂಬಿದ ನೀರು ಬರುವುದರಿಂದ ಆ ನೀರು ಕುಡಿಯಲು ಯೋಗ್ಯವಾಗಿಲ್ಲ.
- ಗ್ರಾಮದಲ್ಲಿ ಮನೆ ನಿವೇಶವ ರಹಿತರ ಜಾಗ ಗುರುತು ಮಾಡಿಕೊಡಬೇಕಾಗಿದೆ.
- ದಿನ ನಿತ್ಯ ಮಂಗಳೂರು ಕಡೆಗೆ ಸಂಚಾರ ಮಾಡುವ ವಿದ್ಯಾರ್ಥಿಗಳು, ಕಾರ್ಮಿಕರಿದ್ದು, ಈ ರಸ್ತೆಯಲ್ಲಿ ಕಿನ್ನಿಗೋಳಿ, ಪಕ್ಷಿಕೆರೆ- ಮಧ್ಯ-ಸುರತ್ಕಲ್ ಮೂಲಕ ಮಂಗಳೂರು ಬಸ್ ಸಂಚಾರ ಆರಂಭಿಸಬೇಕು. ಇಲ್ಲವೇ ಸಿಟಿ ಬಸ್ ಬರುವ ವ್ಯವಸ್ಥೆ ಮಾಡಬೇಕಿದೆ.
- ಪಂಜ ಗ್ರಾಮದಲ್ಲಿ ನಂದಿನಿ ನದಿಗೆ ಸೇರುವ ಚಿಕ್ಕ ಹಳ್ಳ, ತೋಡುಗಳಿವೆ. ಅದರ ಮೋರಿಗಳು ತಾಜ್ಯ, ಹೊಳು ತುಂಬಿ ನೀರು ಸರಾಗವಾಗಿ ಹರಿಯಲು ತೊಡಕು ಉಂಟಾಗಿದ್ದು, ಹೂಳು ಎತ್ತುವ ಕೆಲಸ ಆಗಬೇಕಿದೆ.
- ಬೇಸಗೆಯಲ್ಲಿ ಕೃಷಿ ಭೂಮಿಗಳಿಗೆ ಉಪ್ಪು ನೀರಿನ ಸಮಸ್ಯೆ ಇದೆ. ಇದರಿಂದ ಕುಡಿಯುವ ನೀರಿನ ಬಾವಿಗಳಲ್ಲಿ ಉಪ್ಪಿನಂಶ ಕಂಡುಬಂದು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗುತ್ತದೆ.
- ಮಾರ್ಚ್ ತಿಂಗಳ ಬಳಿಕ ನದಿಯಲ್ಲಿ ಆಯಿಲ್ ಮಿಶ್ರಿತ ನೀರು ಬರಲಾಂಭಿಸಿದೆ. ಅದರ ಉಪಯೋಗದಿಂದ ಹಲವು ಮಂದಿಗೆ ಚರ್ಮ ರೋಗ, ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಶೀಘ್ರ ಪರಿಹಾರ ಅಗತ್ಯ.
-ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.