ಕೊಳವೆ ಬಾವಿಯಿಂದ ಚಿಮ್ಮಿದ ನೀರು: ವೀಡಿಯೋ ವೈರಲ್
Team Udayavani, Jan 20, 2019, 6:03 AM IST
ಪುತ್ತೂರು : ಇಲ್ಲಿನ ಪಾಪೆಮಜಲು ಗರಡಿಯಲ್ಲಿ ಬೋರ್‌ವೆಲ್ ಕೊರೆಸುವಾಗ ನೀರು ಕಾರಂಜಿ ಯಂತೆ ಚಿಮ್ಮಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎರಡು ವರ್ಷಗಳ ಹಿಂದೆ ಪಾಪೆಮಜಲು ಗರಡಿಯ ನೇಮದ ಸಂದರ್ಭ ಕೊಳವೆ ಬಾವಿ ಕೊರೆಯುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಆಗ ಬೈದೇರುಗಳು ಆಯುಧವನ್ನು ನೆಲಕ್ಕೆ ಚುಚ್ಚಿ, ನೀರಿರುವ ಸೆಲೆಯನ್ನು ಗುರುತಿಸಿದ್ದರು. ಇದೀಗ ಕೊಳವೆ ಬಾವಿ ಕೊರೆಸಿದ್ದು, 4 ಇಂಚಿನಷ್ಟು ನೀರು ಲಭ್ಯವಾಗಿದ್ದು ಮಾತ್ರವಲ್ಲ, ಭಾರೀ ಎತ್ತರಕ್ಕೆ ನೀರು ಚಿಮ್ಮಿ ಸುದ್ದಿಯಾಗಿದೆ. ಇದು ಕೋಟಿ – ಚೆನ್ನಯರ ಕಾರಣಿಕ ಎಂಬ ಬಗ್ಗೆ ಚರ್ಚೆ ಆಗುತ್ತಿದೆ.
ಬೋರ್‌ವೆಲ್ ಕೊರೆಸುವಾಗ 280 ಅಡಿ ಆಳದಲ್ಲೇ ನೀರು ಸಿಕ್ಕಿತು. ಹಾಗಿದ್ದೂ ಬೋರ್‌ವೆಲ್ ಕೊರೆಯುವುದನ್ನು ಮುಂದು ವರಿಸಲಾಯಿತು. ನೀರು ರಭಸವಾಗಿ ಮೇಲೆ ಚಿಮ್ಮಲಾರಂಭಿಸಿತು. ನೀರಿನ ರಭಸ ಹೆಚ್ಚಿದ್ದರಿಂದ 340 ಅಡಿಯಲ್ಲಿ ಬೋರ್ ತೆಗೆಸುವುದನ್ನು ನಿಲ್ಲಿ ಸಲಾಗಿದೆ. ಇದು ಕೋಟಿ – ಚೆನ್ನಯರ ತೀರ್ಥ ಎಂಬ ಬರಹ ದೊಂದಿಗೆ ವೀಡಿಯೋ ವೈರಲ್ ಆಗುತ್ತಿದೆ.
ಕೋಟಿ ಚೆನ್ನಯರು ಪಡುಮಲೆ ಯಿಂದ ಇಳಿದು ಎಣ್ಮೂರಿನತ್ತ ಹೋಗುವಾಗ ಪಾಪೆಮಜಲು ಪ್ರದೇಶ ದಲ್ಲಿ ಮಕ್ಕಳೊಂದಿಗೆ ಆಟವಾಡಿದ್ದಾರೆ. ಒಂದು ರಾತ್ರಿ ಈ ಪ್ರದೇಶದಲ್ಲಿ ತಂಗಿದ್ದರು ಎಂದು ಹೇಳಲಾಗಿದೆ.
ಕೋಟಿ – ಚೆನ್ನಯರ ತೀರ್ಥ
2017ರಲ್ಲಿ ನೇಮ ನಡೆದಾಗ ಬೋರ್‌ವೆಲ್ ಕೊರೆಸುವ ಬಗ್ಗೆ ಕೇಳಿ ಕೊಂಡಿದ್ದೆವು. ಈ ವೇಳೆ ಕೋಟಿ ನರ್ತಕ ಒಂದು ಜಾಗಕ್ಕೆ ಬಂದು ಸುರ್ಯ ಹಾಕಿದರು. ಈ ವರ್ಷ ಬೋರ್ ಕೊರೆಸಿದ್ದೇವೆ. 4 ಇಂಚಿನಷ್ಟು ನೀರು ಸಿಕ್ಕಿದ್ದು, ಇದು ಕೋಟಿ – ಚೆನ್ನಯರ ತೀರ್ಥ ಎಂದೇ ಹೇಳಬಹುದು.
– ಎಂ.ಎಸ್. ಮುಕುಂದ,
ಆಡಳಿತ ಮೊಕ್ತೇಸರ, ಪಾಪೆಮಜಲು ಗರಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.