ಫ್ಲೈ ಓವರ್, ಅಂಡರ್‌ಪಾಸ್‌ಗಳತ್ತ ಲಕ್ಷ್ಯ ಅವಶ್ಯ
Team Udayavani, Sep 10, 2017, 8:20 AM IST
ಮಹಾನಗರ: ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸ ಉಪಾಯ ಹುಡುಕಲೇ ಬೇಕಾದ ಸ್ಥಿತಿ ನಿರ್ಮಾಣ ವಾಗಿದೆ.
ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ಎದುರಿಸಿದ ಸಂಚಾರ ಸಮಸ್ಯೆಯಿಂದ ಎಚ್ಚೆತ್ತುಕೊಂಡಿರುವ ಸರಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಫ್ಲೈ ಓವರ್ ಹಾಗೂ ಅಂಡರ್‌ಪಾಸ್‌ಗಳನ್ನು ನಿರ್ಮಿಸುತ್ತಿದೆ. ಸದ್ಯ ಮಂಗಳೂರಿಗೂ ಅದೇ ದಾರಿ ಯೋಗ್ಯವೇನೋ ಎನ್ನಿಸತೊಡಗಿದೆ.
ಮಂಗಳೂರು ವಿಸ್ತಾರಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಮೂಲ ಸೌಕರ್ಯ ಗಳೂ ಹೆಚ್ಚಾಗಬೇಕು. ಇರುವ ಸೌಕರ್ಯ ಗಳು ಮೇಲ್ದರ್ಜೆಗೇರಬೇಕು. ನಗರ ಬೆಳೆಯುತ್ತಿರುವ ಗತಿಗೆ ಅನುಗುಣವಾಗಿ ಈ ಕಾರ್ಯ ನಡೆದರೆ ಅನುಕೂಲ ಎಂಬುದು ಪರಿಣಿತರ ಲೆಕ್ಕಾಚಾರ.
ನಗರದಲ್ಲಿ ಸಂಚಾರ ಮಾರ್ಗಗಳು ಮೇಲ್ದರ್ಜೆಗೇರುತ್ತಿಲ್ಲ. ಕೆಲವು ರಸ್ತೆಗಳು ಅಗಲಗೊಂಡಿದ್ದರೂ, ವಾಹನಗಳ ಪಾರ್ಕಿಂಗ್‌ಗೆ ಹೆಚ್ಚು ಜಾಗ ಬಳಕೆ ಯಾಗುತ್ತಿದೆ. ಇದರಿಂದ ಸುಗಮ ಸಂಚಾರದ ಸಮಸ್ಯೆ ಬಗೆಹರಿದಿಲ್ಲ. ಈ ನಿಟ್ಟಿನಲ್ಲಿ ನಗರದ ಪ್ರಮುಖ ಭಾಗಗಳಲ್ಲಿ ಒಂದಷ್ಟು ಹೊಸ ವ್ಯವಸ್ಥೆಗಳು ಬರಬೇಕಾ ಗಿದೆ. ಇದರಲ್ಲಿ ಫ್ಲೆ$ç ಓವರ್‌ಗಳು ಹಾಗೂ ಅಂಡರ್‌ಪಾಸ್‌ಗಳು ಕೆಲವು.
ಎಲ್ಲೆಲ್ಲಿ ಆವಶ್ಯವಿದೆ ?
ಹಂಪನಕಟ್ಟೆ, ಬಂಟ್ಸ್‌ಹಾಸ್ಟೆಲ್, ನಂತೂರು ಜಂಕ್ಷನ್, ಕೆಪಿಟಿ, ಪಂಪ್‌ವೆಲ್, ಬೆಂದೂರ್‌ವೆಲ್, ಪಣಂಬೂರು ಜಂಕ್ಷನ್ ಮುಂತಾದೆಡೆ ಸಂಚಾರ ದಟ್ಟನೆ ಹೆಚ್ಚುತ್ತಿದೆ. ಕೊಟ್ಟಾರ ಚೌಕಿ, ಕುಂಟಿಕಾನ ಜಂಕ್ಷನ್, ಮರೋಳಿ ಕೈಕಂಬ ವೃತ್ತಗಳಲ್ಲಿ ಫ್ಲೆಓವರ್‌ಗಳು ಆಗಿವೆ. ಪಂಪ್‌ವೆಲ್, ತೊಕ್ಕೊಟ್ಟಿನಲ್ಲಿ ಫ್ಲೆಒವರ್ ನಿರ್ಮಾಣವಾಗುತ್ತಿದೆ.
ನಂತೂರಿನ ಪ್ರಸ್ತಾವನೆ ನನೆಗುದಿಯಲ್ಲಿದೆ. ಇವೆಲ್ಲವೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ್ದು. ಆದರೆ ನಗರದ ಹೃದಯ ಭಾಗಗಳಾದ ಹಂಪನಕಟ್ಟೆ, ಬಂಟ್ಸ್ ಹಾಸ್ಟೆಲ್, ಎಂ.ಜಿ. ರೋಡ್, ಕಂಕನಾಡಿ ಕರಾವಳಿ ವೃತ್ತ ಮುಂತಾದೆಡೆ ಳಲ್ಲಿ ಸಂಚಾರ ಸಮಸ್ಯೆ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಆಗಬೇಕಿದೆ ಎನ್ನುತ್ತಾರೆ ನಾಗರಿಕರು.
ಸಂಚಾರ ಸಮಸ್ಯೆಗೆ ಪರಿಹಾರ
ಕೊಟ್ಟಾರ ಚೌಕಿ, ಕುಂಟಿಕಾನ ಜಂಕ್ಷನ್ ಹಾಗೂ ಮರೋಳಿ ಕೈಕಂಬ ವೃತ್ತಗಳಲ್ಲಿ ಫ್ಲೆ ಓವರ್‌ಗಳಾಗಿವೆ. ಪಂಪ್‌ವೆಲ್, ತೊಕ್ಕೊಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ಪ್ರಗತಿಯಲ್ಲಿದೆ.
ನಂತೂರು, ಕೆಪಿಟಿ ವೃತ್ತ
ರಾ.ಹೆ. 66ರಲ್ಲಿ ನಂತೂರು ಮತ್ತು ಕೆಪಿಟಿ ಫ್ಲೆಓವರ್‌ಗಳ ಆವಶ್ಯಕತೆ ಬಹಳಷ್ಟಿದೆ. ನಂತೂರು ಅತ್ಯಂತ ಸಂಚಾರದಟ್ಟನೆಯ ಪ್ರದೇಶ. ರಾ.ಹೆ. 66, 169 ಸಂಧಿಸುವ ಸ್ಥಳ.ಇಲ್ಲಿ ಫ್ಲೆಓವರ್‌ಗಳ ನಿರ್ಮಾಣ ಬಗ್ಗೆ ಪ್ರಸ್ತಾವನೆಗಳು ಹಲವಾರು ಸಮಯದಿಂದ ಕೇಳಿಬರುತ್ತಿವೆಯಾದರೂ ಯೋಜನೆ ಇನ್ನೂ ಸಾಕಾರಗೊಂಡಿಲ್ಲ.
ಕೆಪಿಟಿ (ಕರ್ನಾಟಕ ಪಾಲಿಟೆಕ್ನಿಕ್) ವೃತ್ತ ದಲ್ಲಿ ಫ್ಲೆ$çಓವರ್ ನಿರ್ಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ಬಗ್ಗೆ ಮಹಾನಗರ ಪಾಲಿಕೆ ಸಭೆ, ಜಿಲ್ಲಾಡಳಿತದ ಸಭೆಗಳಲ್ಲಿ ಪ್ರಸ್ತಾವನೆಗಳು ಆಗುತ್ತಲೇ ಇವೆ. ಪ್ರಸ್ತುತ ಇಲ್ಲಿ ಒಂದೆಡೆ ಸದಾ ಟ್ರಾಫಿಕ್ ಬ್ಲಾಕ್ ಸಮಸ್ಯೆಯಾಗುತ್ತಿದೆ. ಇದಕ್ಕೆ ಪರಿಹಾರ ಬೇಕೆಂಬುದು ನಾಗರಿಕರ ಆಗ್ರಹ.
ಫ್ಲೆ$ç ಓವರ್ ಯೋಜನೆ
ನಗರದಲ್ಲಿ ಫ್ಲೆ$çಓವರ್ ಪ್ರಸ್ತಾವ ಹೊಸದೇನೂ ಇಲ್ಲ. 1992ರಲ್ಲಿ ವೀರಪ್ಪ ಮೊಲಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹಂಪನಕಟ್ಟೆಯಲ್ಲಿ ಫ್ಲೆ$çಓವರ್ ರಚನೆ ಪ್ರಸ್ತಾಪ ಕೇಳಿ ಬಂದಿತ್ತು. ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಕಟ್ಟಡದ ಬಳಿಯಿಂದ ಪುರಭವನದ ಬಳಿಯ ಕ್ಲಾಕ್ ಟವರ್‌ವರೆಗೆ ( ಪ್ರಸ್ತುತ ಕ್ಲಾಕ್‌ಟವರ್‌ನ್ನು ತೆಗೆಯಲಾಗಿದೆ) ಫ್ಲೆ$ç ಓವರ್ ರಚಿಸುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆದಿತ್ತು. ಆದರೆ ಈ ಬಗ್ಗೆ ಪ್ರಸ್ತಾವನೆ ರಚಿಸುವ ಸಿದ್ಧತೆ ನಡೆಯುತ್ತಿರುವಾಗ ವೀರಪ್ಪ ಮೊಲಿ ಅವರು ಮುಖ್ಯಮಂತ್ರಿ ಪದವಿಯಿಂದ ನಿರ್ಗಮಿಸಿದ್ದರು. ಮುಂದಕ್ಕೆ ಹಲವಾರು ಸಂದರ್ಭಗಳಲ್ಲಿ ಈ ಫ್ಲೆ$ç ಓವರ್ ಬಗ್ಗೆ ಉಲ್ಲೇಖವಾಗಿದ್ದರೂ ಕಾರ್ಯರೂಪಕ್ಕೆ ಬರುವ ನಿಟ್ಟಿನಲ್ಲಿ ಯಾವುದೇ ಯೋಜನೆಗಳಾಗಲಿಲ್ಲ .
ಕುಂಟುತ್ತಾ ಸಾಗಿದ ಕಾಮಗಾರಿ
ನಂತೂರಿನಲ್ಲಿ ವಾಹನ ದಟ್ಟನೆಯಿಂದ ದಿನನಿತ್ಯ ಸಂಚಾರ ತಡೆ ಸಮಸ್ಯೆಗಳಾಗುತ್ತಿವೆ. ಇಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಕೇಂದ್ರ ಸರಕಾರ, ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಈವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಪಂಪ್‌ವೆಲ್‌ನ ಫ್ಲೆ$çಓವರ್ ಕಾಮಗಾರಿ ಕುಂಟುತ್ತಾ ಸಾಗಿದೆ.
– ಜೆ.ಆರ್. ಲೋಬೋ,
ಶಾಸಕರು, ಮಂಗಳೂರು ದಕ್ಷಿಣ ಕ್ಷೇತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.