ಹಿಂಗಾರು ಪ್ರವೇಶ; ಕರಾವಳಿಯಲ್ಲಿ ಮಂಜಿನ ವಾತಾವರಣ
Team Udayavani, Oct 28, 2020, 11:47 PM IST
ಕಾಪು ಪರಿಸರದಲ್ಲಿ ಬುಧವಾರ ಬೆಳಗ್ಗೆ ಕಂಡು ಬಂದ ದೃಶ್ಯ
ಮಂಗಳೂರು/ಕಾಪು: ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ದಕ್ಷಿಣ ಭಾರತಕ್ಕೆ ಇದೀಗ ಹಿಂಗಾರು ಪ್ರವೇಶ ಪಡೆದಿದೆ.
ವಾಡಿಕೆಯಂತೆ ಸಾಮಾನ್ಯವಾಗಿ ಅಕ್ಟೋಬರ್ ಎರಡನೇ ವಾರದಲ್ಲಿ ಹಿಂಗಾರು ಮಾರುತ ಅಪ್ಪಳಿಸುತ್ತದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ 2016ರಲ್ಲಿ ಅ. 28 ರಂದು, 2017ರಲ್ಲಿ ಅ. 11ರಂದು, 2018ರಲ್ಲಿ ಅ. 21ರಂದು, 2019ರಲ್ಲಿ ಅ. 16ರಂದು ಹಿಂಗಾರು ಪ್ರವೇಶಿಸಿತ್ತು. ನಾಲ್ಕು ವರ್ಷದ ಬಳಿಕ ಈ ಬಾರಿ ಅ. 28ರಂದು ಹಿಂಗಾರು ಕಾಲಿಟ್ಟಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿಂಗಾರು ಮೇಲೆ ಪರಿಣಾಮ ಬೀರಿತ್ತು. ಇದೇ ಕಾರಣಕ್ಕೆ ತುಸು ತಡವಾಗಿ ಹಿಂಗಾರು ಅಪ್ಪಳಿಸಿದೆ.
ಕರಾವಳಿಯ ವಿವಿಧೆಡೆ ಮಂಗಳವಾರ ರಾತ್ರಿ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ಬುಧವಾರ ಮುಂಜಾನೆ ವರೆಗೂ ಇದೇ ಸ್ಥಿತಿ ಇತ್ತು. ಬೆಳಗ್ಗೆ ಹೊರಬರುತ್ತಿದ್ದಂತೆಯೇ ಗಾಢವಾದ ಮಂಜು ಕವಿದ ವಾತಾವರಣ ಕಂಡು ಕರಾವಳಿಯ ಜನರು ಪುಳಕಿತರಾದರು.
ಕರಾವಳಿ ಪ್ರದೇಶಗಳು ಮಾತ್ರವಲ್ಲದೇ ಬಯಲು ಪ್ರದೇಶಗಳಲ್ಲೂ ಮಂಜು ಮುಸುಕಿದ ವಾತಾರಣ ಇದ್ದು ಇದು ಮಳೆಯ ಮುನ್ಸೂಚನೆಯೋ ಅಥವಾ ಮಳೆ ದೂರವಾಗಿ ಚಳಿಗಾಲ ಆರಂಭವಾಗುವುದರ ಮುನ್ಸೂಚನೆಯೋ ಎಂಬ ಆತಂಕ ಜನರನ್ನು ಕಾಡತೊಡಗಿದೆ.
ಸುಳ್ಯದ ವಿವಿಧೆಡೆ ಮಳೆ
ಸುಳ್ಯ: ತಾಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಗುಡುಗು ಸಹಿತ ಸ್ವಾತಿ ಮಳೆ ಸುರಿದಿದೆ. ಮಡಪ್ಪಾಡಿಯಲ್ಲಿ ಗರಿಷ್ಠ 33 ಮಿ.ಮೀ. ಮಳೆಯಾಗಿದೆ.
ವಾಡಿಕೆಯಂತೆ ಮಳೆ
ಹವಾಮಾನ ಇಲಾಖೆ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲಿ ಈ ಬಾರಿ ವಾಡಿಕೆಯಂತೆ ಹಿಂಗಾರು ಮಳೆ ಸುರಿಯುವ ಸಾಧ್ಯತೆ ಇದೆ. ಹಿಂಗಾರು ಸಮಯದಲ್ಲಿ ಅಂದರೆ ಅಕ್ಟೋಬರ್ 1 ರಿಂದ ಡಿಸೆಂಬರ್ ಅಂತ್ಯದವರೆಗೆ ಕಳೆದ ವರ್ಷ ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.157ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.74 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 136ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಇಷ್ಟೊಂದು ಪ್ರಮಾಣದ ಮಳೆ ಸುರಿದಿದ್ದು, ಕಳೆದ ವರ್ಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.