ವಿವಿಧ ಮೇಳಗಳು ಮನಸ್ಸಿಗೆ ಮುದ ನೀಡಿದರೆ, ಪುಷ್ಕಳ ಭೋಜನ ಹೊಟ್ಟೆ ತಣ್ಣಗೆ ಇಡುತ್ತಿದೆ
ಆಳ್ವಾಸ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ; ಒಂದು ಹೊತ್ತಿಗೆ ಊಟ ಮಾಡುವವರ ಸಂಖ್ಯೆ ಎಷ್ಟು ಗೊತ್ತಾ?!
Team Udayavani, Dec 21, 2022, 6:27 PM IST
ವಿದ್ಯಾಗಿರಿ: ಎಷ್ಟೇ ದೊಡ್ಡ ಹಬ್ಬವಾದರೂ ಹೊಟ್ಟೆ ತುಂಬದೇ ಹೋದರೆ.. ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಮೇಳಗಳು ಮನಸ್ಸಿಗೆ ಮುದ ನೀಡಿದರೆ, ಪುಷ್ಕಳ ಭೋಜನ ಹೊಟ್ಟೆ ತಣ್ಣಗೆ ಇರುವಂತೆ ಮಾಡುತ್ತಿದೆ.
ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಎಂಬ ಬೃಹತ್ ಲೋಕವನ್ನೇ ಧರೆಗಿಳಿಸಿರುವ ಡಾ.ಎಂ ಮೋಹನ ಆಳ್ವರು ಹಸಿದು ಬಂದವರಿಗೆ ರುಚಿ ಶುಚಿಕರವಾದ ಊಟ ನೀಡುವಲ್ಲಿ ಹಿಂದೆ ಉಳಿದಿಲ್ಲ. ಅಂದಹಾಗೆ ಇಲ್ಲಿ ಒಂದು ಹೊತ್ತಿಗೆ ಊಟ ಮಾಡುವವರ ಸಂಖ್ಯೆ ಎಷ್ಟು ಗೊತ್ತಾ? ಅದು ಬರೋಬ್ಬರಿ 70,000. ಹೌದು, ಇಷ್ಟು ಸಂಖ್ಯೆಯ ಜನರಿಗೆ ವಿದ್ಯಾಗಿರಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದು ಇನ್ನು ಏಳು ದಿನಗಳ ಕಾಲವೂ ಮುಂದುವರಿಯುತ್ತದೆ.
ಇದನ್ನೂ ಓದಿ :ಸಮಗ್ರ ಕೃಷಿಯ ಪರಿಕಲ್ಪನೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಪ್ರತಿ ದಿನ 55 ಸಾವಿರ ವಿದ್ಯಾರ್ಥಿಗಳು, 12 ಸಾವಿರ ಶಿಕ್ಷಕರು ಮತ್ತು ಮೂರು ಸಾವಿರ ಸ್ವಯಂ ಸೇವಕರು ಇಲ್ಲಿ ಊಟ ಸವಿಯುತ್ತಿದ್ದಾರೆ. ಇಷ್ಟೊಂದು ಜನರಿಗೆ ಊಟ ತಯಾರಿ ಮಾಡಲು ಇಲ್ಲಿ ಒಟ್ಟು 22 ಅಡುಗೆ ಮನೆ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 21 ಅಡುಗೆ ಮನೆಯನ್ನು ಸ್ಕೌಟ್ಸ್ ಗೈಡ್ಸ್ ಮಕ್ಕಳಿಗಾಗಿಯೇ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಒಟ್ಟು 400 ಮಂದಿ ಬಾಣಸಿಗರು ಒಲೆಗಳ ಮುಂದೆ ಮೃಷ್ಟಾನ್ನ ಭೋಜನ ತಯಾರಿಯಲ್ಲಿ ತೊಡಗಿದ್ದಾರೆ. ಸುಮಾರು 1600 ಮಂದಿ ಸ್ವಯಂ ಸ್ವೇವಕರು ಊಟ ಬಡಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ.
ಸ್ಕೌಟ್ಸ್ ಗೈಡ್ಸ್ ಮಕ್ಕಳಿಗೆ ಊಟೋಪಚಾರಕ್ಕೆಂದೇ 36 ಹಾಸ್ಟೆಲ್ ಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲಿ 144 ಕೌಂಟರ್ ಗಳಲ್ಲಿ ಊಟ ಬಡಿಸಲಾಗುತ್ತಿದೆ. ಸಾರ್ವಜನಿಕರಿಗೂ ಇದೇ ರೀತಿಯ ವ್ಯವಸ್ಥೆಯಿದ್ದು, 60 ಕೌಂಟರ್ ಗಳಲ್ಲಿ ಹಾಳೆ ಪ್ಲೇಟ್ ನಲ್ಲಿ ಊಟ ನೀಡಲಾಗುತ್ತಿದೆ.
ಸಾರ್ವಜನಿಕರಿಗಾಗಿಯೇ ಕೃಷಿ ಮೇಳದ ಬಳಿ ಇರುವ ಬೃಹತ್ ಅಡುಗೆ ಮನೆಯಲ್ಲಿ 200 ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಯೇ 600 ಮಂದಿ ಸ್ವಯಂ ಸೇವಕರಿದ್ದಾರೆ. ಪ್ರತಿ ದಿನ 12 ಸಾವಿರ ಮಂದಿ ಬೆಳಗ್ಗಿನ ಉಪಹಾರ, 25 ಸಾವಿರ ಮಂದಿ ಮಧ್ಯಾಹ್ನದ ಊಟ ಮತ್ತು 30ರಿಂದ 40 ಸಾವಿರ ಸಾವರ್ಜನಿಕರಿಗೆ ರಾತ್ರಿಯ ಊಟ ಮಾಡಲಾಗುತ್ತಿದೆ. ಶನಿವಾರ ಮತ್ತು ರವಿವಾರ ಇದರ ಸಂಖ್ಯೆ ಹೆಚ್ಚಾಗುತ್ತದೆ.
ಇಷ್ಟು ದೊಡ್ಡ ಮಟ್ಟದಲ್ಲಿ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ, ಹಾಗಾದರೆ ಅತ್ಯಂತ ಸಿಂಪಲ್ ಆಗಿರಬಹುದು ಎಂದು ನೀವಂದುಕೊಂಡರೆ ಅದು ತಪ್ಪು. ಬೆಳಗ್ಗಿನ ಉಪಹಾರಕ್ಕಾಗಿಯೇ ಇಡ್ಲಿ- ಸಾಂಬಾರ್, ಶೀರಾ, ಉಪ್ಪಿಟ್ಟು ಅವಲಕ್ಕಿ, ಶೇವಿಗೆ ಬಾತ್ ಮಾಡಲಾಗಿದೆ. ಪ್ರತಿ ಬಾರಿಯೂ ಎರಡು ಬಗೆಯ ಸ್ವೀಟ್ಸ್ ನೀಡಲಾಗುತ್ತದೆ. ಇಲ್ಲಿ ಉತ್ತಮ ಊಟ ಉಪಹಾರವನ್ನೇ ಜನರಿಗೆ ನೀಡಲಾಗುತ್ತಿದೆ. ಬಂದ ಜನರು ಊಟ ಮಾಡಿ ಸಂತೃಪ್ತರಾಗಬೇಕು. ಅವರ ಸಂತಸವೇ ನಮ್ಮ ಉದ್ದೇಶ ಎನ್ನುತ್ತಾರೆ ಜಾಂಬೂರಿಯ ಸಂಪೂರ್ಣ ಅಡುಗೆಯ ಉಸ್ತುವಾರಿ ವಹಿಸಿರುವ ಚಂದ್ರಹಾಸ ಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.