ನೇಜಿ ನಾಟಿ ಮಾಡಿದ ಆಹಾರ ಸಚಿವ !
Team Udayavani, Sep 18, 2017, 7:50 AM IST
ಉಳ್ಳಾಲ: ನೇಜಿ ನಾಟಿ ಮಾಡುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಆಹಾರ ಸಚಿವ ಯು.ಟಿ. ಖಾದರ್ ಅವರೂ ಗದ್ದೆಗಿಳಿದು ಸುಮಾರು ಅರ್ಧ ತಾಸು ಕಾಲ ನೇಜಿ ನಾಟಿ ಮಾಡುವ ಮೂಲಕ ಗಮನ ಸೆಳೆದರು.
ಕೊಣಾಜೆ ಸಮೀಪದ ಅಣ್ಣೆರೆಪಾಲು ಗದ್ದೆಯಲ್ಲಿ ದ.ಕ. ಜಿಲ್ಲಾ ರೈತ ಸಂಘ ಹಸಿರು ಸೇನೆಯ ಮಾರ್ಗದರ್ಶನದಲ್ಲಿ ಮಂಗಳೂರು ರಥಬೀದಿಯ ಡಾ| ಪಿ. ದಯಾನಂದ ಪೈ, ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ “ವಿದ್ಯಾರ್ಥಿಗಳ ನಡಿಗೆ ಹಡಿಲು ಭೂಮಿಯ ಕಡೆಗೆ’ ಕಾರ್ಯಕ್ರಮದ ಭಾಗವಾಗಿ ನೇಜಿ ನಾಟಿ ಕಾರ್ಯ ಕಳೆದೆರಡು ದಿನಗಳಿಂದ ನಡೆಯುತ್ತಿದೆ.
ರವಿವಾರ ವಿದ್ಯಾರ್ಥಿಗಳ ಕೃಷಿ ಕಾರ್ಯವೀಕ್ಷಣೆಗೆ ಬಂದ ಸಚಿವ ಯು.ಟಿ. ಖಾದರ್ ಅವರೂ ಶೂ ತೆಗೆದು ಪ್ಯಾಂಟ್
ಅರ್ಧಕ್ಕೆ ಮಡಚಿ ಗದ್ದೆಗೆ ಇಳಿದು ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.
ಸುಮಾರು ಅರ್ಧ ಗಂಟೆ ಕಾಲ ಎಪಿಎಂಸಿ ಉಪಾಧ್ಯಕ್ಷೆ ಮುತ್ತು ಎನ್. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಖಾದರ್ ನೇಜಿ ನಾಟಿ ಮಾಡಿದರು. ಸ್ಥಳೀಯ ರಾಜಕೀಯ ಮುಖಂಡರು, ಹಿರಿಯರೂ ಸಾಥ್ ನೀಡಿದರು.
ಕೃಷಿಯಿಂದ ದೂರವಾಗುತ್ತಿರುವ ವಿದ್ಯಾರ್ಥಿ ಮತ್ತು ಯುವ ಸಮುದಾಯವನ್ನು ನಮ್ಮ ಜಿಲ್ಲೆಯ ಮಣ್ಣಿನ ಸಂಸ್ಕೃತಿಯತ್ತ ಕರೆತರುವ ಕಾರ್ಯ ಶ್ಲಾಘನೀಯ. ಬರಡು ಭೂಮಿಯನ್ನು ಹಸಿರುಗೊಳಿಸುವ ಕಾರ್ಯದ ಮೂಲಕ ಅದನ್ನು ಪುನರುಜ್ಜೀವನಗೊಳಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಂದನಾರ್ಹರು. ಮುಂದಿನ ದಿನಗಳಲ್ಲಿ ಈ ಭೂಮಿಯಲ್ಲಿ ರೈತರು ಕೃಷಿಯನ್ನು ಮಂದುವರಿಸಿಕೊಂಡು ಹೋಗಬೇಕು.
– ಯು.ಟಿ. ಖಾದರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.