ಮಂಗಳೂರಲ್ಲೂ ಆರಂಭವಾಯ್ತು ಆಹಾರ ಸುರಕ್ಷೆ ಗುಣಮಟ್ಟ ಪ್ರಾಧಿಕಾರ

ಹೆಚ್ಚುತ್ತಿರುವ ಆಹಾರ ಆಮದು

Team Udayavani, Nov 18, 2022, 12:35 PM IST

9

ಮಂಗಳೂರು: ವಾಣಿಜ್ಯೋದ್ಯಮದಲ್ಲಿ ರಾಜ್ಯದ ಪ್ರಮುಖ ನಗರವಾಗಿ ಹೊರ ಹೊಮ್ಮುತ್ತಿರುವ ಮಂಗಳೂರಿನಲ್ಲಿ ಈಗ ಆಹಾರವಸ್ತುಗಳ ಆಮದು ಹೆಚ್ಚುತ್ತಿದ್ದು, ಆ ಹಿನ್ನೆಲೆಯಲ್ಲಿ ಮಂಗಳೂರು ಬಂದರಿಗೆ ಆಗಮಿಸುವ ಆಹಾರವಸ್ತುಗಳ ಗುಣಮಟ್ಟ ಪರಿಶೀಲನೆಗಾಗಿ ಎಫ್‌ ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ) ಕಾರ್ಯಾಚರಣೆ ಪ್ರಾರಂಭಿಸಿದೆ.

ರಾಜ್ಯದಲ್ಲಿ ಈ ಪ್ರಾಧಿಕಾರದ ಕಚೇರಿ ಇದುವರೆಗೆ ಬೆಂಗಳೂರಿನಲ್ಲಿ ಮಾತ್ರವೇ ಇತ್ತು. ನವ ಮಂಗಳೂರು ಬಂದರು ನಿರಂತರ ಬೆಳವಣಿಗೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಪಣಂಬೂರಿನಲ್ಲೇ ಎಫ್‌ಎಸ್‌ಎಸ್‌ಎಐ ಕಚೇರಿಯನ್ನು ತಿಂಗಳ ಹಿಂದೆಯಷ್ಟೇ ಆರಂಭಿಸಿದೆ. ಹೊರದೇಶಗಳಿಂದ ಆಮದಾಗುವ ಆಹಾರವಸ್ತುಗಳ ಪರಿವೀಕ್ಷಣೆ ನಡೆಸಿ ಅದರ ಗುಣಮಟ್ಟವನ್ನು ದೃಢಪಡಿಸುವುದು ಮುಖ್ಯ ಉದ್ದೇಶ.

ಪ್ರಕ್ರಿಯೆ ಹೇಗೆ? ಮಂಗಳೂರು ಬಂದರಿನಲ್ಲಿ ಸದ್ಯ ಆಮದಾಗುವ ಆಹಾರವಸ್ತುಗಳಲ್ಲಿ ಒಣಹಣ್ಣುಗಳೇ ಪ್ರಮುಖ. ಗೇರು ಬೀಜದ್ದು ಸಿಂಹಪಾಲು. ಹಡಗುಗಳಲ್ಲಿ ಆಗಮಿಸುವ ಆಹಾರವಸ್ತುವಿನ ಎರಡು ಮಾದರಿಗಳನ್ನು ಪಡೆಯಲಾಗುತ್ತದೆ. ಒಂದನ್ನು ಕಚೇರಿಯಲ್ಲಿ ಇರಿಸಿಕೊಂಡು ಇನ್ನೊಂದನ್ನು ಎನ್‌ ಎಬಿಎಲ್‌ ಪ್ರಮಾಣಿಕೃತ ಪ್ರಯೋ ಗಾಲಯಗಳಿಗೆ ಕಳುಹಿಸಲಾಗುತ್ತದೆ. ಸಾಮಾನ್ಯವಾಗಿ 2 ದಿನಗಳಲ್ಲಿ ಇದರ ಫಲಿತಾಂಶ ಬರುತ್ತದೆ. ಎಲ್ಲವೂ ಸರಿಯಿದ್ದರೆ ಬಂದರಿನಿಂದ ಆಹಾರವಸ್ತುವನ್ನು ಅದರ ಆಮದುದಾರರು ಹೊರಗೆ ಕೊಂಡೊಯ್ಯಬಹುದು.

ಕೆಲವೊಮ್ಮೆ ಸರ್ಟಿಫಿಕೆಟ್‌ ಆಫ್‌ ಒರಿಜಿನ್‌, ಬಿಲ್‌ ಆಫ್‌ ಎಂಟ್ರಿ ಇತ್ಯಾದಿಗಳಲ್ಲಿ ತಾಳೆಯಾಗದಿದ್ದರೆ ಸರಿಯಾಗುವವರೆಗೆ ಸರಕನ್ನು ತಡೆಹಿಡಿಯಬಹುದು. ಗೋಡಂಬಿ, ಖಾದ್ಯ ತೈಲಗಳಿಗೆ ಪ್ರಾವಿಶನಲ್‌ ಎನ್‌ ಒಸಿ ನೀಡುವ ಅವಕಾಶವೂ ಇದೆ ಎನ್ನುತ್ತಾರೆ ಅಧಿಕಾರಿಗಳು.

ಕಳಪೆ ಆಹಾರಕ್ಕಿಲ್ಲ ಪ್ರವೇಶ

ಕಳಪೆ ಆಹಾರವಸ್ತುಗಳು, ಅವಧಿ ಮೀರಿದ ಆಹಾರ ಇತ್ಯಾದಿಗಳನ್ನು ಲ್ಯಾಬ್‌ನಲ್ಲಿ ಪರಿಶೀಲಿಸಿ ತಡೆಹಿಡಿಯಲಾಗುತ್ತದೆ. ಈ ಬಗ್ಗೆ ಎರಡನೇ ಬಾರಿ ಪರೀಕ್ಷೆ ನಡೆಸಲು ಆಮದುದಾರರು ಕೇಳುವುದಕ್ಕೆ ಅವಕಾಶವಿದೆ. ಈ ಪ್ರಕ್ರಿಯೆ ಮೂಲಕ ದೇಶದೊಳಕ್ಕೆ ಕಳಪೆ ಗುಣಮಟ್ಟದ ಆಹಾರ ವಸ್ತು ಬರದಂತೆ ತಡೆಯಲಾಗುತ್ತದೆ.

ಆಹಾರ ಸಚಿವಾಲಯದ ಅಧೀನ ದಲ್ಲಿರುವ ಎಫ್‌ಎಸ್‌ಎಸ್‌ಎಐ 2008ರಲ್ಲಿ ದೇಶದಲ್ಲಿ ಕಾರ್ಯಾರಂಭಿ ಸಿತ್ತು. ವಾರ್ಷಿಕ 12 ಲಕ್ಷ ರೂ. ನಿಂದ 20 ಕೋಟಿ ರೂ. ವರೆಗಿನ ವಹಿವಾಟು ನಡೆಸುವ ಆಹಾರ ಪದಾರ್ಥ ಉದ್ಯಮಗಳಿಗೆ ರಾಜ್ಯದ ಲೈಸನ್ಸ್‌ ನೀಡಿದರೆ 20 ಕೋಟಿ ರೂ. ಮೇಲ್ಪಟ್ಟ ವಹಿವಾಟು ನಡೆಸುವವರು ಕೇಂದ್ರದ ಲೈಸನ್ಸ್‌ ಪಡೆದುಕೊಳ್ಳಬೇಕು. 12 ಲಕ್ಷ ರೂ.ಗಿಂತ ಕಡಿಮೆ ವಹಿವಾಟಿನ ಉದ್ದಿಮೆ ನೋಂದಣಿ ಮಾಡಿಕೊಂಡರೆ ಸಾಕು. ಮಂಗಳೂರಿನಲ್ಲಿ ಪ್ರಸ್ತುತ ಲೈಸನ್ಸ್‌ ಪಡೆಯುವ ಸೌಲಭ್ಯ ಇನ್ನೂ ಆರಂಭವಾಗಿಲ್ಲ, ಸದ್ಯ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಈ ಅನುಕೂಲ ಇದೆ.

ಎಫ್‌ಎಸ್‌ಎಸ್‌ಎಐ ದಕ್ಷಿಣ ಭಾರತದಾದ್ಯಂತ ವಿಸ್ತರಣೆಯಾಗುತ್ತಿದೆ, ಕಳೆದ ವರ್ಷ ಬೆಂಗಳೂರಿನಲ್ಲಿ, ಈ ವರ್ಷ ಮಂಗಳೂರಿನಲ್ಲಿ ಕಚೇರಿ ಪ್ರಾರಂಭಗೊಂಡಿದೆ. ಮಂಗಳೂರು ಬಂದರಿನ ಪ್ರಾಮುಖ್ಯತೆಯನ್ನು ಅರಿತು ಇಲ್ಲಿ ಕಚೇರಿ ಪ್ರಾರಂಭಿಸಲಾಗಿದೆ. – ಕುಮರೇಸನ್‌ ಚಂದ್ರಶೇಖರ್‌, ಅಧಿಕೃತ ಅಧಿಕಾರಿ, ಎಫ್‌ಎಸ್‌ಎಸ್‌ಎಐ

ಟಾಪ್ ನ್ಯೂಸ್

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.