ಕಾಲು ಸಂಕ: 23.50 ಲಕ್ಷ ರೂ. ಅನುದಾನ ಬಿಡುಗಡೆ
Team Udayavani, Apr 28, 2019, 6:06 AM IST
ಜಾಲ್ಸೂರು: ಜಾಲ್ಸೂರು ಬೇರ್ಪಡ್ಕ ನಿವಾಸಿಗಳ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಬೇರ್ಪಡ್ಕ ಪರಿಸರದಲ್ಲಿ ಹರಿಯುವ ತೋಡಿಗೆ ಕಾಲು ಸಂಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದೆ. ಜಾಲ್ಸೂರು-ಸುಬ್ರಹ್ಮಣ್ಯ ರಸ್ತೆಯ ಬೇರ್ಪಡ್ಕ ತೋಡಿಗೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರ ವಿಶೇಷ ಅನುದಾನದಲ್ಲಿ 23.50 ಲಕ್ಷ ರೂ. ವೆಚ್ಚದಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಕಾಮಗಾರಿ ಆರಂಭಗೊಳ್ಳಲಿದೆ. ಸಿದ್ಧತೆಗಳು ಪ್ರಗತಿಯಲ್ಲಿವೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅಗ್ರಿಮೆಂಟ್ ಲಭಿಸಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎನ್ನುವ ಮಾಹಿತಿಯನ್ನು ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಬೇರ್ಪಡ್ಕದಲ್ಲಿ ತೋಡಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸುವಂತೆ ಪ್ರಧಾನ ಮಂತ್ರಿ ಕಾರ್ಯಾಲಯ ಸಹಿತ ಹಲವು ಇಲಾಖೆಗೆ ಮನವಿ ಪತ್ರ ಬರೆಯಲಾಗಿತ್ತು. 2016ರಲ್ಲಿ ದ.ಕ. ಜಿಲ್ಲಾಧಿಕಾರಿಗೆ ಹಾಗೂ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು ಸೂಚಿಸಲಾಗಿತ್ತು. 2017ರಲ್ಲಿ ರಾಜ್ಯದ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರು. ಯೋಜನಾ ಇಲಾಖೆಯಿಂದ ಎಂಜಿನಿಯರ್ ಇಲಾಖೆಗೆ ಪ್ರತಿ ಕಳುಹಿಸಲಾಗಿತ್ತು. ವರದಿ ಪರಿಶೀಲಿಸಿದ ಎಂಜಿನಿಯರ್ ಇಲಾಖೆ ಹೆಚ್ಚುವರಿ ಅನುದಾನ ಕೋರಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಕೊನೆಗೂ ಜನರ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸಿದೆ. ಕಾಲು ಸಂಕ ನಿರ್ಮಾಣಕ್ಕೆ ಅನುಮೋದನೆ ಲಭಿಸಿದೆ.
ಕಾಲು ಸಂಕ ಕಾಮಗಾರಿಗೆ ಚಾಲನೆ
ಜಾಲ್ಸೂರು ಗ್ರಾಮದ ಬೇರ್ಪಡ್ಕದಲ್ಲಿ ಕಾಲು ಸಂಕ ನಿರ್ಮಾಣಕ್ಕೆ ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು ಅವರು ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಗೋಪಾಲಕೃಷ್ಣ ಭಟ್ ಬೇರ್ಪಡ್ಕ, ಪ್ರೇಮ ಕುರ್ಮಾರ್, ಮನೋಹರ, ಪುಷ್ಪಾ ಬೇರ್ಪಡ್ಕ, ಕುಮಾರ ಸುಬ್ರಹ್ಮಣ್ಯ ಬೇರ್ಪಡ್ಕ, ಲಿಂಗಪ್ಪ ಗೌಡ ಗಬ್ಬಲಡ್ಕ, ಪ್ರವೀಣ ಬೇರ್ಪಡ್ಕ, ಸುಜಾತಾ ಬೇರ್ಪಡ್ಕ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಜಾಲ್ಸೂರಿನ ಬೇರ್ಪಡ್ಕದಲ್ಲಿ 25ಕ್ಕಿಂತ ಹೆಚ್ಚು ಮನೆಗಳಿವೆ. ಈ ಭಾಗದ ನಿವಾಸಿಗಳು ದಿನನಿತ್ಯ ಕೆಲಸ-ಕಾರ್ಯಗಳಿಗೆ ತೆರಳಲು ತೋಡು ದಾರಿಯನ್ನೆ ಅವಲಂಬಿಸಿದ್ದಾರೆ. ತೋಡಿಗೆ ಅಡ್ಡಲಾಗಿ ಅಡಿಕೆ ಪಾಲ ನಿರ್ಮಿಸಲಾಗಿದೆ. ಶಾಲಾ ಮಕ್ಕಳು, ಹಿರಿಯರು, ಮಹಿಳೆಯರು, ಅಡಿಕೆ ಪಾಲದಲ್ಲಿಯೇ ಓಡಾಡುತ್ತಿದ್ದಾರೆ. ನಡೆಯುವಾಗ ನಿಯಂತ್ರಣ ತಪ್ಪಿದರೆ ಅಪಾಯ ಖಚಿತ. ಮಳೆಗಾಲದಲ್ಲಂತೂ ಜನರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿತ್ತು.
ಸ್ಥಳೀಯ ನಿವಾಸಿ ಗೋಪಾಲಕೃಷ್ಣ ಭಟ್ ಬೈತಡ್ಕ ಅವರು ಪ್ರಧಾನಿಗೆ ಬರೆದ ಮನವಿ ಪತ್ರದ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಕಾರ್ಯಾಲಯದಿಂದ ರಾಜ್ಯ ಸರಕಾರಕ್ಕೆ ಸೂಚನೆ ಕಳುಹಿಸಲಾಗಿತ್ತು. ಅನುದಾನ ಕೊರತೆ ಮುಂದಿಟ್ಟುಕೊಂಡು ಸರಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಲಾಗಿತ್ತು.
ದಶಕಗಳ ವ್ಯಥೆ
ಜಾಲ್ಸೂರಿನ ಬೇರ್ಪಡ್ಕದಲ್ಲಿ 25ಕ್ಕಿಂತ ಹೆಚ್ಚು ಮನೆಗಳಿವೆ. ಈ ಭಾಗದ ನಿವಾಸಿಗಳು ದಿನನಿತ್ಯ ಕೆಲಸ-ಕಾರ್ಯಗಳಿಗೆ ತೆರಳಲು ತೋಡು ದಾರಿಯನ್ನೆ ಅವಲಂಬಿಸಿದ್ದಾರೆ. ತೋಡಿಗೆ ಅಡ್ಡಲಾಗಿ ಅಡಿಕೆ ಪಾಲ ನಿರ್ಮಿಸಲಾಗಿದೆ. ಶಾಲಾ ಮಕ್ಕಳು, ಹಿರಿಯರು, ಮಹಿಳೆಯರು, ಅಡಿಕೆ ಪಾಲದಲ್ಲಿಯೇ ಓಡಾಡುತ್ತಿದ್ದಾರೆ. ನಡೆಯುವಾಗ ನಿಯಂತ್ರಣ ತಪ್ಪಿದರೆ ಅಪಾಯ ಖಚಿತ. ಮಳೆಗಾಲದಲ್ಲಂತೂ ಜನರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿತ್ತು.
ಶೀಘ್ರ ಕಾಮಗಾರಿ
– ಹರೀಶ್, ಎಂಜಿನಿಯರ್, ಪಿಡಬ್ಲ್ಯೂಡಿ ಸುಳ್ಯ •ಶಿವಪ್ರಸಾದ್ ಮಣಿಯೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.