ಬಂಟ್ವಾಳ: ಫುಟ್ ಪಾತ್ ಗಳು ಕಾಣೆಯಾಗಿವೆ…!
Team Udayavani, Jun 23, 2018, 2:30 AM IST
ಬಂಟ್ವಾಳ: ಬಿ.ಸಿ. ರೋಡ್ ನಗರದಲ್ಲಿ ರಸ್ತೆಬದಿ ಹಿಂದೆ ಇದ್ದಂತಹ ಫುಟ್‌ಪಾತ್ ಕಾಣೆಯಾಗಿ ದಶಕಗಳು ಸಂದಿವೆ. ರಸ್ತೆ ಅಭಿವೃದ್ಧಿ ಸಂದರ್ಭ ಯೋಜನೆ ನಿರ್ಮಿಸುವವರು ಫುಟ್ ಪಾತನ್ನು ನೀಲ ನಕ್ಷೆಯಲ್ಲಿ ತೋರಿಸುವುದಿಲ್ಲ. ರಸ್ತೆ ಕಾಂಕ್ರೀಟ್, ಡಾಮರು ಮಾಡುವುದು ಬಿಟ್ಟರೆ, ಚರಂಡಿ ನಿರ್ಮಾಣ ಇರುವುದಿಲ್ಲ. ಜನರ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಯಾಕೆ ಕಲ್ಪಿಸುವುದಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ.
ಕಾಣೆಯಾಗುತ್ತಿವೆ
ಹೆದ್ದಾರಿ ವಿಸ್ತರಣೆ, ದ್ವಿಚಕ್ರ, ಘನ ವಾಹನಗಳ ಹೆಚ್ಚಳದೊಂದಿಗೆ ನಗರ – ಗ್ರಾ. ಪ್ರದೇಶದಲ್ಲಿ ಪಾದಚಾರಿಗಳ ಹಕ್ಕು – ಸೌಕರ್ಯಗಳು ಕಾಣೆಯಾಗುತ್ತಿವೆ. ಪುರಸಭೆ ವ್ಯಾಪ್ತಿಗೆ ಬಂದರಂತೂ ಪಾದಚಾರಿಗಳನ್ನು ಕೇಳುವವರೇ ಇಲ್ಲ. ಬಂಟ್ವಾಳದ ಪರಿಸ್ಥಿತಿ ದಕ್ಕೋ ಮದು ನಿದರ್ಶನ. ಬಂಟ್ವಾಳ, ಬಿ.ಸಿ. ರೋಡ್, ಪಾಣೆಮಂಗಳೂರು ಪೇಟೆಗಳಲ್ಲಿ ಅಡ್ಡಾಡಿದರೆ ಫುಟ್ ಫಾತ್ ಕಾಣಲು ಸಿಗುವುದೇ ಇಲ್ಲ. ಬಂಟ್ವಾಳ ಪೇಟೆ ಮತ್ತು ಪಾಣೆಮಂಗಳೂರು ಪೇಟೆಯಂತೂ ಶತಮಾನದಷ್ಟು ಹಿಂದಿನ ಸ್ಥಿತಿಯಲ್ಲಿ ಇದ್ದಂತಿದೆ. ಬಂಟ್ವಾಳ -ಬಿ.ಸಿ. ರೋಡ್ ಪೇಟೆಗಳಲ್ಲಿ ನಡೆದುಕೊಂಡು ಹೋಗುವುದೇ ದೊಡ್ಡ ಸವಾಲು. ಪಾದಚಾರಿಗಳು ನಿರ್ಭೀತಿಯಿಂದ ಹೆಜ್ಞೆ ಹಾಕುವ ಸ್ಥಿತಿ ಇಲ್ಲ.
ನಿರ್ಮಾಣವಾಗಲಿ ಫುಟ್ ಪಾತ್
ಬಡ್ಡಕಟ್ಟೆ, ಜಕ್ರಿಬೆಟ್ಟು, ಬಂಟ್ವಾಳ ಪೇಟೆ, ಬಂಟ್ವಾಳ ಪುರಸಭೆ ಎದುರು, ಪೊಲೀಸ್ ಠಾಣೆ ಎದುರು, ಬಿ.ಸಿ. ರೋಡ್ ನ ಸರ್ವೀಸ್ ರಸ್ತೆ, ಕೈಕುಂಜೆ ರಸ್ತೆ, ಸಂಚಯಗಿರಿ ರಸ್ತೆಗಳ ಸಹಿತ ಹಲವು ರಸ್ತೆಗಳಲ್ಲಿ ಫುಟ್ ಪಾತ್ ವ್ಯವಸ್ಥೆ ಇಲ್ಲ. ನಗರ ಅಭಿವೃದ್ಧಿ ಎಂದರೆ ವಾಹನ ಸೌಕರ್ಯ, ರಸ್ತೆ ಅಭಿವೃದ್ಧಿ ಮಾತ್ರ ಅಲ್ಲ, ಪಾದಚಾರಿಗಳಿಗೂ ಅನುಕೂಲ ಕಲ್ಪಿಸುವ ಯೋಜನೆಗಳಾಗಬೇಕಿದೆ. ಸಮರ್ಪಕ ಫುಟ್ ಪಾತ್ ನಿರ್ಮಿಸಲು ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.
ನಿರ್ಮಾಣಕ್ಕೆ ಕ್ರಮ
ಯೋಜನೆ ರೂಪಿಸುವಾಗ ಫುಟ್ ಪಾತ್ ನಿರ್ಮಾಣವನ್ನು ತೋರಿಸಲಾಗುತ್ತದೆ. ಚರಂಡಿಯನ್ನು ಸಮರ್ಪಕ ನಿರ್ಮಾಣ ಮಾಡದಿರುವ ಗುತ್ತಿಗೆ ವ್ಯವಸ್ಥೆಗಳು ಸಂದರ್ಭದ ಸದುಪಯೋಗ ಪಡೆದು ಮರೆಯಾಗಿ ಬಿಡುತ್ತವೆ. ನಗರ ವ್ಯವಸ್ಥೆಯಲ್ಲಿ ಜನ ಸಂಚಾರಕ್ಕೆ ಹೆದ್ದಾರಿ ಬದಿಯಲ್ಲಿ ಫುಟ್ ಪಾತ್ ನಿರ್ಮಾಣ ಅವಶ್ಯ. ಬಿ.ಸಿ. ರೋಡ್ ನಲ್ಲಿ ಅಸ್ತವ್ಯಸ್ತಗೊಂಡಿರುವ ಚರಂಡಿಯನ್ನು ಪುರಸಭೆಯಿಂದ ನಿರ್ಮಿಸಿ ಅಲ್ಲಿ ಫುಟ್ ಪಾತ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
– ಪಿ. ರಾಮಕೃಷ್ಣ ಆಳ್ವ, ಅಧ್ಯಕ್ಷರು, ಬಂಟ್ವಾಳ ಪುರಸಭೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.