ಅಚಾರಿಜೋರದಲ್ಲಿ ಕಾಲುದಾರಿ ಸಮಸ್ಯೆ
Team Udayavani, Jul 7, 2018, 11:42 AM IST
ಎಡಪದವು: ಕುಪ್ಪೆ ಪದವು ಸಮೀಪದ ಅಚಾರಿಜೋರ ಮಸೀದಿ ಪಕ್ಕ ಹಾದುಹೋಗುವ ಪ್ರದೇಶದಲ್ಲಿ ಸೂಕ್ತ ಕಾಲುದಾರಿ ಇಲ್ಲದೆ ಇರುವುದರಿಂದ ಸಂಕಷ್ಟ ಅನುಭವಿಸುತ್ತಿದ್ದು, ಪಂಚಾಯತ್‌ಗೆ ಹದಿನೈದು ವರ್ಷಗಳಿಂದ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ.
ಅಚಾರಿಜೋರದ ಡಾಮರು ರಸ್ತೆಯಿಂದ ಮಸೀದಿ ಪಕ್ಕದಲ್ಲಿ ಹಾದುಹೋಗಿರುವ ಸುಮಾರು 200 ಮೀಟರ್ ಉದ್ದದ ಕಾಲು ದಾರಿ ಕುಸಿದುಹೋಗಿದೆ. ಇದರಿಂದ ಇಲ್ಲಿನವರು ಸಂಚರಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇವಲ 2ರಿಂದ 3 ಅಡಿಯಷ್ಟೇ ಅಗಲವಾಗಿರುವ ಈ ಕಾಲುದಾರಿ ನಾದುರಸ್ಥಿಯಲ್ಲಿದ್ದು, ಅದರ ಪಾರ್ಶ್ವದ ಭಾಗಗಳೆಲ್ಲಾ ಕುಸಿದು ಸರಿನಿಂದ ಆವೃತವಾಗಿದೆ. ಅದರ ಪಕ್ಕ 15 ಅಡಿಯಷ್ಟು ಆಳವಿದ್ದು, ಸ್ವಲ್ಪ ಎಡವಿದರೂ ಕಂದಕಕ್ಕೆ ಬೀಳುವ ಅಪಾಯವಿದೆ.
ಕಿರಿದಾದ ರಸ್ತೆ
ಇಲ್ಲಿನ ಸುಮಾರು 10 ಮನೆಗಳಿಗೆ ಏಕೈಕ ಸಂಪರ್ಕ ದಾರಿ ಇದಾಗಿದ್ದು, ಯಾರಿಗಾದರೂ ಅನಾರೋಗ್ಯ ಕಾಣಿಸಿದರೆ
ಡಾಮರು ರಸ್ತೆಯವರೆಗೆ ಹೊತ್ತುಕೊಂಡೇ ಸಾಗಬೇಕಾಗುತ್ತದೆ. ಕಾಲುದಾರಿ ಅಗಲ ಕಿರಿದಾಗಿರುವುದರಿಂದ ಎದುರುಬದುರು ಸಾಗುವಂತಿಲ್ಲ. ಈ ಕಾಲುದಾರಿಯನ್ನು ಕಾಂಕ್ರೀಟ್ ಮೂಲಕವಷ್ಟೇ ಸರಿಪಡಿಸಲು ಸಾಧ್ಯ. ಮಳೆಗಾಲದಲ್ಲಿ ಕಾಲುದಾರಿ ಕುಸಿದರೆ ಮತ್ತೆ ಸಂಪರ್ಕವೇ ಇಲ್ಲದಂತಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೀಘ್ರ ಕಾಂಕ್ರೀಟ್
ಅಚಾರಿಜೋರದ ಹಲವು ಮನೆಗಳಿಗೆ ಕಾಲುದಾರಿ ಸಮಸ್ಯೆ ಇದೆ. ಈ ದಾರಿ ಕಿರಿದಾಗಿದ್ದು, ಹಲವಾರು ಮನೆಗಳು ಕೂಡಾ ಇವೆ. ಶೀಘ್ರದಲ್ಲೇ ಇಲ್ಲಿಗೆ ತಡೆಗೋಡೆ ಹಾಗೂ ಕಾಂಕ್ರೀಟ್ ಕಾಲುದಾರಿ ನಿರ್ಮಿಸಿಕೊಡಲಾಗುವುದು.
– ಲೀಲಾವತಿ,ಅಧ್ಯಕ್ಷರು, ಕುಪ್ಪೆಪದವು ಗ್ರಾ.ಪಂ.
ಹಲವು ವರ್ಷಗಳ ಸಮಸ್ಯೆ
‘ಕಾಲುದಾರಿ ಇಲ್ಲದೆ ಹಲವಾರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದು, ನಡೆದಾಡಲು ಕಷ್ಟವಾಗುತ್ತಿದೆ. ಆರೋಗ್ಯ ಕೆಟ್ಟರೆ ರೋಗಿಯನ್ನು ಹೊತ್ತುಕೊಂಡು ಹೋಗಬೇಕಾಗುತ್ತದೆ. ರಾತ್ರಿ ಹೊತ್ತಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ.
-ಅಶ್ರಫ್ ಅಶೂರು, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.