ಕ್ಯಾಂಪ್ಕೋಗೆ 4ನೇ ಬಾರಿಗೆ ದ. ವಲಯ ರಫ್ತು ಶ್ರೇಷ್ಠ ಪ್ರಶಸ್ತಿ
Team Udayavani, Jan 19, 2018, 11:05 AM IST
ಮಂಗಳೂರು: ಭಾರತೀಯ ರಫ್ತುಗಾರ ಸಂಸ್ಥೆಗಳ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕಾರ್ಯವನ್ನು ಕೇಂದ್ರ ಸರಕಾರವು ಪ್ರತೀ ವರ್ಷ ಮಾಡುತ್ತಿದೆ. ಕೇಂದ್ರ ಸರಕಾರದ ವಾಣಿಜ್ಯ ಸಚಿವಾಲಯ ಆಶ್ರಯದ ಭಾರತೀಯ ರಫ್ತು ಸಂಸ್ಥೆಗಳ ಫೆಡರೇಶನ್ (ಎಫ್‌ಐಇಒ-ಫಿಯೋ) ಪ್ರತಿವರ್ಷ ವಲಯವಾರು ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು ಘೋಷಿಸುತ್ತಿದ್ದು, 2016-17ನೇ ಸಾಲಿನ ದಕ್ಷಿಣ ವಲಯದ ಈ ಪ್ರಶಸ್ತಿಯನ್ನು ಕ್ಯಾಂಪ್ಕೋ ಪಡೆದುಕೊಂಡಿದೆ.
ಚೆನ್ನೈಯ ಹೊಟೇಲ್ “ಲಿ ರಾಯಲ್ ಮೆರಿಡಿಯನ್’ ಸಭಾ ಭವನದಲ್ಲಿ ಗುರುವಾರ ಜರಗಿದ ಸಮಾರಂಭದಲ್ಲಿ ಪ್ರತಿಷ್ಠಿತ ದಕ್ಷಿಣ ವಲಯ “ಉನ್ನತ ಬಹು ಉತ್ಪನ್ನ ಸಮೂಹ ರಫ್ತುದಾರ’ (ಬೆಳ್ಳಿ) ವಿಭಾಗದ ಪ್ರಶಸ್ತಿಯನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ತ.ನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಂದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸ್ವೀಕರಿಸಿದರು. ತಮಿಳುನಾಡಿನ ಯುವ ಕ್ಷೇಮಾಭಿವೃದ್ಧಿ ಹಾಗೂ ಕ್ರೀಡಾ ಸಚಿವ ಬಾಲಕೃಷ್ಣ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಜ. 21: ಸೌಲಭ್ಯ ಸೌಧ ಉದ್ಘಾಟನೆ
ಈ ಪ್ರತಿಷ್ಠಿತ ರಫ್ತು ಪ್ರಶಸ್ತಿಯನ್ನು ಕ್ಯಾಂಪ್ಕೋ ನಾಲ್ಕನೇ ಬಾರಿ ಪಡೆಯು ತ್ತಿದ್ದು, ಕಾರ್ಖಾನೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ “ಸೌಲಭ್ಯ ಸೌಧ’ದ ಉದ್ಘಾಟನೆಯ ಸಂದರ್ಭದಲ್ಲಿ ಇದು ದೊರಕುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಜ. 21ರಂದು ಪುತ್ತೂರಿನ ಕೆಮ್ಮಿಂಜೆ ಯಲ್ಲಿರುವ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ನೂತನ ಸೌಲಭ್ಯ ಸೌಧವನ್ನು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸುರೇಶ್ ಪ್ರಭು ಹಾಗೂ ಕೇಂದ್ರ ಅಂಕಿ ಅಂಶ ಮತ್ತು ಯೋಜನಾನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ರಫ್ತು ಪ್ರಶಸ್ತಿಯನ್ನು ಪಡೆದಿರುವುದು, ಆ ಮೂಲಕ ಸ್ವದೇಶಿ ಕಾರ್ಖಾನೆಯೆಂದು ಗುರುತಿಸಲ್ಪಟ್ಟಿರುವುದು ಕ್ಯಾಂಪ್ಕೋ ಅಭಿಮಾನವನ್ನು ಹೆಚ್ಚಿಸಿದೆ ಎಂದು ಕ್ಯಾಂಪ್ಕೋ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.