Moodabidri ಆಳ್ವರಿಗೆ ಸತ್ಯವೇ ದೇವರು, ಜನರ ಒಡನಾಟವೇ ಉಸಿರು: ಎನ್. ವಿನಯ ಹೆಗ್ಡೆ
ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರಿಗೆ ಶ್ರದ್ಧಾಂಜಲಿ
Team Udayavani, Nov 13, 2023, 11:46 PM IST
ಮೂಡುಬಿದಿರೆ: ನೂರ ಆರು ವರ್ಷ ಆರೋಗ್ಯಪೂರ್ಣ, ಸಾರ್ಥಕ ಬದುಕು ನಡೆಸಿ ಇನ್ನಿಲ್ಲವಾದ ಮಿಜಾರುಗುತ್ತು ಆನಂದ ಆಳ್ವ ಅವರಿಗೆ ಸತ್ಯವೇ ದೇವರು-ಕೃಷಿಯೇ ಪ್ರಯೋಗ ಶಾಲೆ. ಕಂಬಳದ ಶಿಸ್ತು, ಸಂಯಮದ ಸಂಸ್ಕೃತಿ, ಸಂಸ್ಕೃತಿ ಪ್ರೀತಿ, ಜನರ ಒಡನಾಟವೇ ಉಸಿರಾಗಿತ್ತು ಎಂದು ನಿಟ್ಟೆ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ಕೃಷಿಸಿರಿ ವೇದಿಕೆ-ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ನಡೆದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರಿಗೆ “ನುಡಿನಮನ’ ಸಮರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕೂಡುಕುಟುಂಬದ ಆನಂದದ ಬದುಕಿನಲ್ಲಿ ಬೆಳೆದ ಅವರಿಗೆ ಊರೆಲ್ಲಾ ತನ್ನವರು ಎಂಬ ಕೌಟುಂಬಿಕ ಭಾವವಿತ್ತು. ಕುಟುಂಬದ ಜವಾಬ್ದಾರಿಯಿಂದಾಗಿ ಹೆಚ್ಚು ಓದಲಾಗದಿದ್ದರೂ ಸ್ವಯಂ ವಿದ್ಯಾಕ್ಷೇತ್ರಕ್ಕೆ ಕೊಡುಗೆ ನೀಡಿದ ಅವರು ವಿಶ್ವವಿದ್ಯಾನಿಲಯಕ್ಕೆ ಸಮನಾಗಿ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಪುತ್ರ ಡಾ| ಮೋಹನ ಆಳ್ವರಿಗೆ ನೆರಳಾಗಿ ನಿಂತವರು; ಅವರ ವ್ಯಕ್ತಿತ್ವವು ಸಾರ್ವಜನಿಕ ರಂಗಗಳಲ್ಲಿ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯ’ ಎಂದರು.
ನಿಸ್ವಾರ್ಥ ಬದುಕು. ಬಹಿರಂಗದಲ್ಲಿ ಕಠಿನ ಆದರೆ ನಂಬಿದ ಮಾರ್ಗದಲ್ಲಿ ನಿಷ್ಠೆಯಿಂದ ಬದುಕುವ ಮೃದುತ್ವ ಅವರದಾಗಿತ್ತು. ಅವರ ಛಾಯೆಯನ್ನು ನಾಲ್ವರು ಮಕ್ಕಳಲ್ಲೂ ಕಾಣಬಹುದು. ಮಕ್ಕಳ ಸಾಧನೆಗೆ ಅದುವೇ ಪ್ರೇರಣೆ’ ಎಂದು ಅವರು ಮೆಲುಕು ಹಾಕಿದರು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಮಾತನಾಡಿ, ಗರುಡ ಪುರಾಣದಲ್ಲಿ ಧರ್ಮ ನಿಷ್ಠ, ಧ್ಯಾನಿ, ಯೋಗಾದಿ ವಿಚಾರಗಳಿಂದ ಮೋಕ್ಷ ಪಡೆಯುತ್ತಾರೆ ಎಂಬುದಕ್ಕೆ ಸಂವಾದಿಯಾಗುವ ಬದುಕನ್ನು ಆನಂದಿಸಿದವರು ಆನಂದ ಆಳ್ವರು; ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜತೆಗಿನ ಅನುಭಾವ, ನಾಗಪ್ಪ ಆಳ್ವ, ಜೀವರಾಜ ಆಳ್ವ, ಅಮರನಾಥ ಶೆಟ್ಟಿ ಅವರಂಥ ವ್ಯಕ್ತಿತ್ವಗಳೊಂದಿಗಿನ ಅನುಭವ ಅವರದ್ದಾಗಿತ್ತು ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಸ್ಕೌಟ್ಸ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಮೂಡುಬಿದಿರೆ ಚೌಟರ ಅರಮನೆ ಕುಲದೀಪ ಎಂ. ಸೇರಿದಂತೆ ಗಣ್ಯರು, ಅಭಿಮಾನಿಗಳು ಆನಂದ ಆಳ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಮುಂಬಯಿಯಲ್ಲಿರುವ ಡಾ| ಸೀತಾರಾಮ ಆಳ್ವ, ಅಮೆರಿಕದಲ್ಲಿರುವ ಮೀನಾಕ್ಷಿ ಜಯಕರ ಆಳ್ವ, ಕೊಯಮತ್ತೂರಿನಲ್ಲಿರುವ ಉದ್ಯಮಿ ಬಾಲಕೃಷ್ಣ ಆಳ್ವ, ಆಳ್ವಾಸ್ ಪ್ರವರ್ತಕ ಡಾ| ಎಂ. ಮೋಹನ ಆಳ್ವ ಸಹಿತ ಆನಂದ ಆಳ್ವರ ಕುಟುಂಬ ಪರಿವಾರ, ಆತ್ಮೀಯರು ಶ್ರದ್ಧಾಂಜಲಿ ಸಲ್ಲಿಸಿದರು.
ವೇಣುಗೋಪಾಲ ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.