ಹಳೆ ಯೋಜನೆಗಳಿಗೆ ಶೀಘ್ರದಲ್ಲೇ  ಸಿಗಲಿ ಕಾಯಕಲ್ಪ


Team Udayavani, May 20, 2018, 3:25 PM IST

20-may-15.jpg

ಮಂಗಳೂರು ನಗರದ ಎರಡೂ ಕ್ಷೇತ್ರಗಳಿಗೆ ಹೊಸ ಶಾಸಕರು ಆಯ್ಕೆಯಾಗಿದ್ದಾರೆ. ನಗರದ ಅಭಿವೃದ್ಧಿಯ ಬಗ್ಗೆ ಚುನಾವಣೆ ಪೂರ್ವದಲ್ಲಿ ಅಭ್ಯರ್ಥಿಗಳಾಗಿ ಈ ಶಾಸಕರು ಒಂದಷ್ಟು ಕನಸುಗಳನ್ನು ಬಿಚ್ಚಿಟ್ಟು ಹೊಸ ಭರವಸೆಗಳನ್ನು ನಗರದ ಜನತೆಯಲ್ಲಿ ತುಂಬಿದ್ದಾರೆ.

ಮಂಗಳೂರು ನಗರದ ಅಭಿವೃದ್ಧಿಯ ದಿಶೆಯಲ್ಲಿ ಪ್ರಸ್ತುತ ಹಾಗೂ ಭವಿಷ್ಯದ ಆವಶ್ಯಕತೆಗಳನ್ನು ಮುಂದಿಟ್ಟುಕೊಂಡು ಪೂರಕ ಯೋಜನೆಗಳನ್ನು ರೂಪಿಸುವುದು ಅತ್ಯವಶ್ಯ. ಆದರೆ ಹೊಸ ಯೋಜನೆಗಳು ಜತೆಗೆ ಈಗಾಗಲೇ ಮಂಗಳೂರಿಗೆ ಮಂಜೂರಾಗಿ ಅನುಷ್ಠಾನಕ್ಕೆ ಬಾರದ ಹಳೆ ಯೋಜನೆಗಳನ್ನು ದಡ ಸೇರಿಸುವ ಮಹತ್ತರ ಸವಾಲು ಕೂಡ ಹೊಸ ಶಾಸಕರ ಮುಂದಿದೆ.

ಮಂಗಳೂರು ನಗರಕ್ಕೆ ಈ ಹಿಂದಿನ ವರ್ಷಗಳಲ್ಲಿ ಮಂಜೂರು ಆಗಿರುವ ಮತ್ತು ಅನುದಾನಗಳು ಬಿಡುಗಡೆಯಾಗಿರುವ ಹಲವು ಯೋಜನೆಗಳು ಇನ್ನೂ ಕಾರ್ಯಗತಗೊಂಡಿಲ್ಲ. ಶಿಲಾನ್ಯಾಸಗೊಂಡಿದ್ದರೂ ಇನ್ನೂ ಆರಂಭಗೊಳ್ಳದ ಹಲವು ಕಾಮಗಾರಿಗಳಿವೆ. ಪ್ರಸ್ತಾವನೆ ಸಲ್ಲಿಸಿರುವ ಯೋಜನೆಗಳು ಅಂಗೀಕಾರದ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿಲ್ಲ. ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ವಿಳಂಬದ ಪರಿಣಾಮ ವೆಚ್ಚದಲ್ಲೂ ಏರಿಕೆಯಾಗಿದೆ. ಇವುಗಳಲ್ಲಿ ಒಂದಷ್ಟು ಯೋಜನೆಗಳನ್ನು ಉದಾಹರಣೆಯಾಗಿ ನೀಡಬಹುದಾಗಿದೆ. ಬಾಕಿ ಯಾಗಿರುವ ಕೆಲವು ಯೋಜನೆಗಳಿಗೆ ದಶಕದ ಇತಿಹಾಸವೂ ಇದೆ.

ಈಜುಕೊಳ ನಿರ್ಮಾಣ
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಂಗಳೂರು ನಗರದ ಎಮ್ಮೆಕೆರೆಯಲ್ಲಿ 2 ಎಕ್ರೆ ಜಮೀನಿನಲ್ಲಿ 5 ಕೋ. ರೂ. ಅಂದಾಜು ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಯೋಜನೆ ಸಿದ್ಧವಾಗಿ ವರ್ಷಗಳೇ ಕಳೆದಿವೆ. ಮೊದಲ ಹಂತದ ಅನುದಾನವೂ ಬಿಡುಗಡೆಯಾಗಿದೆ. ಶಂಕುಸ್ಥಾಪನೆ ನೆರವೇರಿದೆ. ಆದರೆ ಯೋಜನೆ ಇನ್ನೂ ಆರಂಭವಾಗಿಲ್ಲ. ಪರಿಣಾಮ ಇದರ ಯೋಜನಾ ವೆಚ್ಚದಲ್ಲಿ ಏರಿಕೆಯಾಗಿದ್ದು ಇದನ್ನು ಪರಿಷ್ಕರಿಸುವ ಅನಿವಾರ್ಯತೆ ಎದುರಾಗಿದೆ. 

ಫ‌ುಟ್‌ ಬಾಲ್‌ ಮೈದಾನ
ಮಂಗಳೂರು ನೆಹರೂ ಮೈದಾನದಲ್ಲಿರುವ ಫ‌ುಟ್‌ಬಾಲ್‌ ಮೈದಾನವನ್ನು ಅಂತಾರಾಷ್ಟ್ರೀಯ ಮಟ್ಟದ ಫ‌ುಟ್‌ಬಾಲ್‌ ಅಂಗಳವಾಗಿ ಅಭಿವೃದ್ಧಿಪಡಿಸಲು 25 ಲಕ್ಷ ರೂ. ಬಿಡುಗಡೆಯಾಗಿ ಬಹಳಷ್ಟು ಸಮಯವಾಗಿದೆ. ಆದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ . 

ರಂಗ ಮಂದಿರ
ಮಂಗಳೂರಿನಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣದ ಕನಸು ಸುಮಾರು 25 ವರ್ಷಗಳಿಂದ ಇದೆ. ಹಲವು ಬಾರಿ ಶಿಲಾನ್ಯಾಸವಾಗಿದೆ. ಪ್ರಸ್ತುತ ಬೊಂದೇಲ್‌ ನಲ್ಲಿ ಜಾಗ ಗುರುತಿಸಿ, ರಂಗಮಂದಿರಕ್ಕೆ ಮೀಸಲಿಡಲಾಗಿದೆ. ಕೇಂದ್ರದ ನೆರವಿಗಾಗಿ ಒಂದಷ್ಟು ವರ್ಷ ಕಾದು ಬಳಿಕ ರಾಜ್ಯ ಸರಕಾರದ ವತಿಯಿಂದಲೇ ನಿರ್ಮಿಸಲು ತೀರ್ಮಾನಿಸಲಾಯಿತು.

ಇದಕ್ಕೆ ಹೊಸ ಪ್ರಸ್ತಾವನೆ ರೂಪಿಸಿ ಈಗ ಸುಮಾರು ಎರಡು ವರ್ಷಗಳಾಗಿವೆ. ಆದರೆ ಯೋಜನೆ ಯೋಜನೆಯಾಗಿಯೇ ಉಳಿದುಕೊಂಡಿದ ವಿನಾ ಅನುಷ್ಠಾನಕ್ಕೆ ಬಂದಿಲ್ಲ. 

ಡೆಡಿ ಕೇಟೆಡ್‌ ಜೆಟ್ಟಿ
ಮಂಗಳೂರು ಹಳೆ ಬಂದರಿನಲ್ಲಿ ಸುಮಾರು 65 ಕೋಟಿ ರೂ. ವೆಚ್ಚದಲ್ಲಿ ಲಕ್ಷದ್ವೀಪದ ಆಡಳಿತದ ನೆರವಿನೊಂದಿಗೆ ಕರ್ನಾಟಕ ಸರಕಾರದ ಸಹಭಾಗಿತ್ವದಲ್ಲಿ ಸುಸಜ್ಜಿತವಾದ ಡೆಡಿಕೇಟೆಡ್‌ ಜೆಟ್ಟಿಯೊಂದರ ನಿರ್ಮಾಣ ಯೋಜನೆ ಸಿದ್ಧವಾಗಿ ಎರಡು ವರ್ಷ ಕಳೆದರೂ ಸಾಕಾರದ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ.

ಸೋಮೇಶ್ವರ, ಉಳ್ಳಾಲ, ಸುರತ್ಕಲ್‌, ತಲಪಾಡಿ ಮತ್ತು ಸುಲ್ತಾನ್‌ ಬತ್ತೇರಿ ಬೀಚ್‌ಗಳ ಅಭಿವೃದ್ಧಿಗೆ 13.72 ಕೋ.ರೂ. ಮಂಜೂರು ಆಗಿದೆ. ಅನುಷ್ಠಾನ ಆಮೆಗತಿಯಲ್ಲಿ ಸಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ನಂತೂರಿನಲ್ಲಿ ಓವರ್‌ಪಾಸ್‌ ಅಥವಾ ಅಂಡರ್‌ ಪಾಸ್‌ ನಿರ್ಮಾಣ ಹಲವು ವರ್ಷದ ಬೇಡಿಕೆ. ಇದು ಕಾರ್ಯರೂಪಕ್ಕೆ ಈವರೆಗೂ ಬಂದಿಲ್ಲ.

ಹಂಪನಕಟ್ಟೆಯಲ್ಲಿ ಈ ಹಿಂದಿನ ಸರ್ವಿಸ್‌ ಬಸ್‌ ನಿಲ್ದಾಣ ಜಾಗದಲ್ಲಿ ಬಹು ಅಂತಸ್ತು ವಾಹನ ನಿಲುಗಡೆ ಸಂಕೀರ್ಣ ನಿರ್ಮಿಸುವ ಪ್ರಸ್ತಾವನೆ ರೂಪಿಸಲ್ಪಟ್ಟು ದಶಕ ಕಳೆದಿದೆ. ಆದರೆ ಅನುಷ್ಠಾನದ ನಿಟ್ಟಿನಲ್ಲಿ ಇನ್ನೂ ಚರ್ಚೆಗಳ ಹಂತದಲ್ಲೇ ಇದೆ. ಈಗ ಈ ಯೋಜನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

 ಮಂಗಳೂರಿಗೆ ಸುಸಜ್ಜಿತ ಕೇಂದ್ರ ಬಸ್‌ ನಿಲ್ದಾಣ ನಿರ್ಮಾಣ ಯೋಜನೆ ಹಲವು ವರ್ಷಗಳಿಂದ ನನೆಗುದಿಯಲ್ಲಿದೆ. ಪಂಪ್‌ ವೆಲ್‌ನಲ್ಲಿ ಜಾಗ ಸ್ವಾಧೀನಪಡಿಸಿದ್ದರೂ ಬಸ್‌ ನಿರ್ಮಾಣದ ವಿನ್ಯಾಸ, ಮಾದರಿಯ ನಿರ್ಧಾರದಲ್ಲೇ ಯೋಜನೆ ಕೆಲವು ವರ್ಷಗಳಿಂದ ಸಾಗಿ ಬಂದಿದೆ.

ಸೆಂಟ್ರಲ್‌ ಮಾರುಕಟ್ಟೆ ಅಭಿವೃದ್ಧಿಯ ಆಶ್ವಾಸನೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಮಾರುಕಟ್ಟೆ ಅಭಿವೃದ್ಧಿಯ ಬಗ್ಗೆ ಈಗಾಗಲೇ ಹೊಸ ವಿನ್ಯಾಸವನ್ನು ತಯಾರಿಸಲಾಗಿದ್ದರೂ ಇದರ ಅನುಷ್ಠಾನದಲ್ಲಿ ಪ್ರಗತಿಯಾಗಿಲ್ಲ.

ಹೀಗೆ ಪ್ರಸ್ತಾವನೆಯಲ್ಲಿರುವ ಯೋಜನೆಗಳು ಮಂಜೂರುಗೊಳ್ಳಲು ತಾಂತ್ರಿಕ ಮತ್ತು ಆಡಳಿತಾತ್ಮಕವಾಗಿ ಕೆಲವು ಕಾರಣಗಳಿರುತ್ತವೆ. ಆದರೆ ಮಂಜೂರುಗೊಂಡು ಅನುದಾನ ಬಿಡುಗಡೆಯಾದ ಯೋಜನೆಗಳು ಅನುಷ್ಠಾನವಾಗದೆ ಬಿಡುಗಡೆಯಾದ ಹಣ ಇಲಾಖೆಯಲ್ಲೇ ವರ್ಷಾನುಗಟ್ಟಲೇ ಉಳಿದುಕೊಂಡಿರುವುದು ನಗರದ ಅಭಿವೃದ್ಧಿಯ ನಿಟ್ಟಿನಲ್ಲಿ ಆಗಿರುವ ನಷ್ಟ. ಕಾಮಗಾರಿಗಳ ಅನುಷ್ಠಾನ ವಿಳಂಬವಾದಷ್ಟು ಅವುಗಳ ವೆಚ್ಚದಲ್ಲೂ ಏರಿಕೆಯಾಗುತ್ತವೆ. ಇದರ ಜತೆಗೆ ಒಂದಷ್ಟು ಹೊಸ ಸಮಸ್ಯೆಗಳು ಹುಟ್ಟಿಕೊಂಡು ಅನುಷ್ಠಾನದಲ್ಲಿ ತೊಡಕುಗಳಾಗುತ್ತಿವೆ. ಆದ್ದರಿಂದ ಹೊಸ ಯೋಜನೆಗಳ ಜತೆಗೆ ಮಂಜೂರಾಗಿರುವ ಯೋಜನೆಗಳು ಶೀಘ್ರವಾಗಿ ಕಾರ್ಯಗತಗೊಳ್ಳುವ ನಿಟ್ಟಿನಲ್ಲೂ ನೂತನವಾಗಿ ಆಯ್ಕೆಯಾಗಿರುವ ಶಾಸಕರು ಗಮನ ಹರಿಸಿ ಇವುಗಳನ್ನು ಒಂದು ಅಂತಿಮ ಘಟ್ಟಕ್ಕೆ ತಲುಪಿಸಬೇಕಾಗಿದೆ. 

ರನ್‌ ವೇ ವಿಸ್ತರಣೆ 
ಮಂಗಳೂರು ವಿಮಾನ ನಿಲ್ದಾಣ ನಿಜಾರ್ಥದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ವರೂಪವನ್ನು ಪಡೆಯಬೇಕಾದರೆ ದೊಡ್ಡ ಗಾತ್ರದ ವಿಮಾನಗಳು ಇಳಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ 2013ರಲ್ಲಿ ರನ್‌ವೇಯನ್ನು 11,600 ಅಡಿಗೆ ವಿಸ್ತರಿಸುವ ಪ್ರಸ್ತಾವನೆ
ರೂಪಿಸಲಾಯಿತು. ವಿಮಾನ ನಿಲ್ದಾಣದ ಪಕ್ಕದ ಕಂದಾವರ ಗ್ರಾ.ಪಂ. ವ್ಯಾಪ್ತಿಯ ಕೊಳಂಬೆ ಹಾಗೂ ಅದ್ಯಪಾಡಿ ಗ್ರಾಮದಲ್ಲಿ ಇದಕ್ಕೆ ಪೂರಕವಾಗಿ ಜಮೀನು ಗುರುತಿಸಿ, ಸ್ವಾಧೀನಕ್ಕೆ ಅವಶ್ಯವಿರುವ ಹಣದ ಅಂದಾಜು ಪಟ್ಟಿ ಕೂಡ ಸಲ್ಲಿಕೆಯಾಗಿದೆ. ಬಜೆಟ್‌ನಲ್ಲೂ ಪ್ರಸ್ತಾವನೆಯಾಗಿದೆ. ಅದರೂ ಯೋಜನೆ ಬಗ್ಗೆ ಮೀನಮೇಷ ಎಣಿಸಲಾಗುತ್ತಿದೆ. 

ಕ್ರಿಕೆಟ್‌ ಮೈದಾನ
ಸ್ಮಾರ್ಟ್‌ಸಿಟಿಯಾಗುತ್ತಿರುವ ಮಂಗಳೂರಿನಲ್ಲಿ ಇನ್ನೂ ಕೂಡ ಪರಿಪೂರ್ಣ ಕ್ರೀಡಾಂಗಣವನ್ನು ಹೊಂದಿಲ್ಲ. ಮಂಗಳೂರಿನಲ್ಲಿ ಸುಸಜ್ಜಿತ ಕ್ರಿಕೆಟ್‌ ಮೈದಾನವನ್ನು ನಿರ್ಮಿಸುವ ಪ್ರಸ್ತಾವ 1999ರಿಂದಲೂ ಇದೆ. 15 ಎಕ್ರೆ ಜಾಗವನ್ನು ಜಿಲ್ಲಾಡಳಿತ ನೀಡಿದರೆ ಮೈದಾನ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿತ್ತು. ಕರ್ನಾಟಕ ಕ್ರಿಕೆಟ್‌ ಅಸೋಸಿಯೇಶನ್‌ ಪ್ರಸ್ತಾವ ಮುಂದಿರಿಸಿ 17 ವರ್ಷಗಳಾಗಿವೆ. ಕೆಲವು ಕಡೆ ಜಾಗ ನೋಡಲಾಗಿದೆ. ಇದರ ಬಗ್ಗೆ ಒಂದೆರಡು ಬಾರಿ ಸಭೆಗಳು ನಡೆದಿರುವುದು ಬಿಟ್ಟರೆ ಈವರೆಗೆ ಹೆಚ್ಚಿನ ಪ್ರಗತಿಯಾಗಿಲ್ಲ. 

ಕೇಶವ ಕುಂದರ್‌

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.