ಪ್ಲೈನ್ ಸಿಂಗಲ್ ಕಲರ್ ಸಾರಿಗೆ ಡಾರ್ಕ್ ಬಣ್ಣದ ಬ್ಲೌಸ್ ಟ್ರೆಂಡ್
Team Udayavani, Apr 13, 2018, 5:20 PM IST
ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ. ಮಹಿಳೆಯರು ಕಡ್ಡಾಯವಾಗಿ ಉಡಬೇಕಿದ್ದ ಸೀರೆ ಈಗ ಫ್ಯಾಷನ್ ಆಗಿ ಬದ
ಲಾಗಿದೆ. ಕಾಲೇಜಿಗೆ ಹೋಗುವ ಯುವತಿಯರು ಸಮಾರಂಭಗಳಿಗೆ ಆಕರ್ಷಕವಾಗಿ ಕಾಣಲು ಬೇರೆ ಎಲ್ಲ ಬಟ್ಟೆಗಳನ್ನು ಬದಿಗಿಟ್ಟು ಸೀರೆಗೆ ಮೊರೆ ಹೋಗುವ ದಿನ ಬಂದಿದೆ.
ಸೀರೆ ಖರೀದಿಸುವಾಗ ಅದರಲ್ಲೇ ಸಿಗುವ ಬ್ಲೌಸ್ ಪೀಸ್ ಈಗ ಯಾರಿಗೂ ಬೇಡವಾಗಿದೆ. ಸುಂದರ ಫ್ಲೆಯಿನ್ ಸೀರೆಗಳನ್ನು ಖರೀದಿಸಿ ಅದಕ್ಕೆ ಒಪ್ಪುವ ಡಾರ್ಕ್ ಬಣ್ಣದ ಸುಂದರ ಡಿಸೈನ್‌ನ ಬ್ಲೌಸ್‌ಗಳನ್ನು ಖರೀದಿಸುವ ಟ್ರೆಂಡ್ ಹೆಚ್ಚಾಗಿದೆ. ಸೀರೆ ಅದೆಷ್ಟೇ ಆಕರ್ಷಕವಾಗಿರಲಿ, ದುಬಾರಿ ಬೆಲೆಯದ್ದಾಗಿರಲಿ ಆದರೆ ಅದರ ಅಂದ ಹೆಚ್ಚುವುದು
ಧರಿಸುವ ಬ್ಲೌಸ್‌ನಿಂದ ಎಂಬುದು ಮಾನಿನಿಯರಿಗೆ ಮನವರಿಕೆಯಾಗಿದೆ. ಪ್ರಸ್ತುತ ಸೀರೆಗಿಂತ ಆಕರ್ಷಕ ರವಿಕೆ
ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕಾಗಿ ಮಹಿಳೆಯರು, ಯುವತಿಯರು ಸಣ್ಣಪುಟ್ಟ ಸಮಾರಂಭಗಳಿಗೂ ಪ್ಲೆ„ನ್ ಸಿಂಗಲ್ ಕಲರ್ ಸಾರಿಗೆ ಡಾರ್ಕ್ ಬಣ್ಣದ ಬ್ಲೌಸ್ ಧರಿಸುತ್ತಿದ್ದಾರೆ. ಅದರೊಂದಿಗೆ ಹಿಂದಿನ ಕಾಲದಲ್ಲಿ ಚಾಲ್ತಿಯಲ್ಲಿದ್ದು ಮೂಲೆ ಗುಂಪಾದ ಬ್ಲೌಸ್ ಡಿಸೈನ್‌ಗಳು ಸಹ ಈಗ ಮತ್ತೆ ಟ್ರೆಂಡ್ ಆಗಿದೆ.
ಸಿಂಗಲ್ ಕಲರ್ ಸಾರಿ ಮೋಹ
ಪ್ರಸ್ತುತ ಬಹುತೇಕ ಬಟ್ಟೆ ಮಳಿಗೆಗಳಲ್ಲಿ ಸಿಂಗಲ್ ಕಲರ್ ಸಾರಿಗೆ ಬೇಡಿಕೆ ಹೆಚ್ಚಾಗಿದೆ. ಕಾಲೇಜು ಹುಡುಗಿಯರಿಂದ ಹಿಡಿದು ಮಹಿಳೆಯರು ಕೂಡ ಸಿಂಗಲ್ ಕಲರ್ ಸಾರಿಗೆ ಫಿದಾ ಆಗುತ್ತಿದ್ದಾರೆ. ಉದಾಹರಣೆಗೆ ಪಿಂಕ್ ಕಲರ್ ಪ್ಲೈನ್ ಸಾರಿಗೆ ಹಸುರು ಬಣ್ಣದ ಗ್ರ್ಯಾಂಡ್ ಬ್ಲೌಸ್ ಆಕರ್ಷಕವಾಗಿ ಕಾಣುತ್ತದೆ.
ಆಕರ್ಷಕ ಬ್ಲೌಸ್‌ಗಳು
ಸೀರೆ ಎಷ್ಟೇ ಸಿಂಪಲ್ ಆಗಿದ್ದರೂ ಅದರ ಬ್ಲೌಸ್ ಗ್ರ್ಯಾಂಡ್ ಇದ್ದರೆ ಉಡುವವರ ಲುಕ್ ಬದಲಾಗುತ್ತದೆ. ಇದಕ್ಕಾಗಿಯೇ ಪ್ರಸ್ತುತ ಮಾನಿನಿಯರು ಸೀರೆ ಗ್ರ್ಯಾಂಡ್ ಇರಬೇಕು ಎಂದು ಬಯಸುವುದಿಲ್ಲ. ಅದರಲ್ಲೂ ಬ್ಲೌಸ್‌ಗಳ ಡಿಸೈನ್‌ಗಳು ನೆಕ್ ಲೈನ್ ಮತ್ತು ಸ್ಲೀವ್‌ಗಳನ್ನೇ ಆಧರಿಸಿರುತ್ತದೆ. ಬ್ಲೌಸ್ ಗಳಲ್ಲಿ ಕೈಯಲ್ಲಿ ಬಿಡಿಸುವ ಎಂಬ್ರಾಯಿಡರಿ, ಕನ್ನಡಿ, ಹರಳು ಜೋಡಣೆ, ಕುಂದನ್ ಕುಸುರಿ, ಮುತ್ತು ಜೋಡಣೆ ಕೂಡ ಬ್ಲೌಸ್ ವ್ಯಾಲ್ಯೂ ಹೆಚ್ಚಿಸುತ್ತದೆ. ಪ್ರಸ್ತುತ ಜಾಕೆಟ್ ಸಾರಿ ಬ್ಲೌಸ್, ಪ್ರಿನ್ಸೆಸ್ ಕಟ್ ಬ್ಲೌಸ್, ಪ್ರಿನ್ಸೆಸ್ ಕಟ್ ಬ್ಲೌಸ್ ವಿಥ್ ಜಾಕೆಟ್, ಫುಲ್ ಸೆಕ್ವಿನ್ ವರ್ಕ್ ಬ್ಲೌಸ್, ಫಾರ್ಮಲ್ ಸಾರಿ ಬ್ಲೌಸ್ ಡಿಸೈನ್ಸ್, ಹೈ ಕಾಲರ್ ನೆಕ್, ನೆಟೆಡ್, ಸ್ಟ್ರಾಪ್‌ಲೆಸ್, ಬ್ಯಾಕ್‌ಲೆಸ್, ಬೋಟ್ ನೆಕ್ ಮೊದಲಾದವುಗಳು ಇತ್ತೀಚಿಗಿನ ದಿನಗಳಲ್ಲಿ ಜನಪ್ರಿಯವಾಗಿರುವ ಸಾರಿ ಬ್ಲೌಸ್‌ಗಳು.
ತೊಡುವಾಗ ಆರಾಮವಾಗಿರಲಿ
ಸೀರೆ ರವಿಕೆಯ ಅಂದ ಹೆಚ್ಚಿಸುತ್ತದೆ ಎಂದು ಹೇಳುವ ಹಾಗಿಲ್ಲ. ಆದರೆ ಡಿಸೈನ್‌ಡ್ ಬ್ಲೌಸ್‌ನಿಂದ ಸೀರೆಯ ಸೌಂದರ್ಯ ಹೆಚ್ಚುತ್ತದೆ. ಬ್ಲೌಸ್ ಕೇವಲ ಡಿಸೈನ್, ಕಲರ್ ಕಾಂಬಿನೇಷನ್‌ನಿಂದ ಮಾತ್ರ ಆಕರ್ಷವಾಗಿ ಕಂಡರೆ ಸಾಲದು. ಜತೆಗೆ ಆ ಬ್ಲೌಸ್ ನಿಮಗೆ ಕಂಫರ್ಟ್‌ಫೀಲ್ ನೀಡಬೇಕು.
ಡಿಸೈನ್‌ಡ್ ಬ್ಲೌಸ್‌ಗಳಿಗೆ ಬೇಡಿಕೆ
ಸೀರೆ ಖರೀದಿಗೆ ಬರುವ ಗ್ರಾಹಕರು ಹೆಚ್ಚಾಗಿ ಪ್ಲೆ„ನ್ ಸಾರಿಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ಅದರೊಂದಿಗೆ ಬರುವ ಬ್ಲೌಸ್ ಬಗ್ಗೆ ಹೆಚ್ಚು ಆಸಕ್ತರಾಗಿರುವುದಿಲ್ಲ. ಅದಕ್ಕೆ ಒಪ್ಪುವ ದುಬಾರಿ ಬೆಲೆಯ ಬ್ಲೌಸ್‌ಗಳನ್ನು ಖರೀದಿಸುತ್ತಾರೆ. ಪ್ರಸ್ತುತ ಪ್ಲೆ„ನ್ ಸೀರೆಯ ಬೆಲೆ 700 ರೂ. ನಿಂದ ಆರಂಭಗೊಂಡರೆ 2,000 ರೂ. ವರೆಗಿನ ವಿವಿಧ ರೀತಿಯ ಸೀರೆಗಳಿದೆ. ಆದರೆ ಸೀರೆಗಿಂತ ಗ್ರ್ಯಾಂಡ್ ಬ್ಲೌಸ್‌ಗಳು ತುಂಬಾನೆ ದುಬಾರಿ. ಅದರ ಬೆಲೆ 1,300ರಿಂದ ಆರಂಭಗೊಂಡು 3,000 ರೂ.ವರೆಗೆ ಇರುತ್ತದೆ ಎಂದು ಮಳಿಗೆಯ ಮಾಲಕರು ತಿಳಿಸುತ್ತಾರೆ.
ಆಕರ್ಷಕ ಲುಕ್
ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು 750 ರೂ. ನ ಪಿಂಕ್ ಕಲರ್ ಸಾರಿ ಖರೀದಿಸಿದ್ದೆ. ಈ ಹಿಂದೆ ಮದುವೆ ಸಮಾರಂಭಕ್ಕಾಗಿ ಖರೀದಿಸಿದ ಡಿಸೈನ್‌ಡ್ ಬ್ಲೌಸ್‌ಗೆ ಇತ್ತು. ಅದನ್ನು ಮ್ಯಾಚ್ ಮಾಡಿ ಧರಿಸಿದೆ. ಆಕರ್ಷಕವಾಗಿ ಕಾಣುತ್ತಿದ್ದೆ. ಇದೇ ರೀತಿ ಕಾಲೇಜಿನ ಬಹುತೇಕ ಹುಡುಗಿಯರು ಮಾಡಿದ್ದರು.
– ಸೀಮಾ ಬೋಪಣ್ಣ, ಕಾಲೇಜು ವಿದ್ಯಾರ್ಥಿನಿ
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.