ರೇಬಿಸ್ ಗೆ ನಾಟಿ ಔಷಧ ರಾಮಬಾಣ ; 5,000 ಜನರಿಗೆ ಚಿಕಿತ್ಸೆ
Team Udayavani, Jun 2, 2018, 4:40 AM IST
ಆಲಂಕಾರು: ಹುಚ್ಚುನಾಯಿ ಕಚ್ಚಿದರೆ ರೇಬಿಸ್ ರೋಗದ ಸಾಧ್ಯತೆ ಹೆಚ್ಚು. ಅದರಿಂದ ಪಾರಾಗಲು ರೇಬಿಸ್ ನಿರೋಧಕ ಚುಚ್ಚುಮದ್ದಿನ ಮೊರೆಹೋಗುತ್ತಾರೆ. ಇದರ ಮಧ್ಯೆ ಪುತ್ತೂರು ತಾಲೂಕು ಆಲಂಕಾರು ಗ್ರಾಮದ ಕೇಪುಳು ನಿವಾಸಿ ಅಣ್ಣಿ ಪೂಜಾರಿ ಎಂಬ ಪಂಡಿತರು 37 ವರ್ಷಗಳಿಂದ ಗಿಡಮೂಲಿಕೆಗಳನ್ನು ಬಳಸಿ ಔಷಧ ನೀಡುತ್ತಿದ್ದಾರೆ. ಈ ಔಷಧವನ್ನು ಒಂದು ಸಲ ತೆಗೆದುಕೊಂಡರೆ, ರೇಬಿಸ್ ವೈರಾಣು ನಿವಾರಣೆಯಾಗುತ್ತದೆ ಎಂದು ಇವರಿಂದ ಚಿಕಿತ್ಸೆ ಪಡೆದ ಅನೇಕರು ಹೇಳಿದ್ದಾರೆ.
ತಮ್ಮ ತಾಯಿಯ ತಾಯಿಯಿಂದ (ಅಜ್ಜಿ) ಈ ಔಷಧ ಕ್ರಮ ಕಲಿತ ಅಣ್ಣಿ ಪೂಜಾರಿ (66) ಈ ತನಕ 5 ಸಾವಿರಕ್ಕೂ ಅಧಿಕ ಜನರಿಗೆ ಹುಚ್ಚು ನಾಯಿ ಕಡಿತಕ್ಕೆ ಔಷಧ ಕೊಟ್ಟಿದ್ದಾರೆ. ಮನುಷ್ಯರಿಗೆ ಮಾತ್ರವಲ್ಲದೆ, ಜಾನುವಾರು, ನಾಯಿ, ಕೋಳಿ, ಸಾಕು ಹಂದಿಗಳಿಗೂ ನಾಟಿ ಪದ್ಧತಿಯ ಔಷಧ ನೀಡಿ, ಗುಣಪಡಿಸಿದ್ದಾರೆ. ಅವರ ಈ ಸಾಧನೆಗೆ ಆಲಂಕಾರು ಸಿ.ಎ. ಬ್ಯಾಂಕ್, ಮೂರ್ತೆದಾರರ ಸೇವಾ ಸಹಕಾರಿ ಸಂಘ, ಬಿಲ್ಲವ ಸಂಘ ಮುಂತಾದವು ಅವರನ್ನು ಸಮ್ಮಾನಿಸಿ, ಗೌರವಿಸಿವೆ. ಹುಚ್ಚು ನಾಯಿ ಕಚ್ಚಿದ ಮೇಲೆ ಮನುಷ್ಯರಿಗಾದರೆ 42ನೇ ದಿನ, ಪ್ರಾಣಿಗಳಿಗೆ ಕೇವಲ 20 ದಿನಗಳಲ್ಲಿ ರೇಬಿಸ್ ರೋಗ ಶುರುವಾಗುತ್ತದೆ. ಉಲ್ಬಣಿಸಿದ ಮೇಲೆ ಯಾವ ಚಿಕಿತ್ಸೆಯೂ ಫಲ ನೀಡುವುದಿಲ್ಲ. ಆಮೇಲೆ ಮೂರು ದಿನಗಳಷ್ಟೇ ಆಯಸ್ಸು.
ಅಣ್ಣಿ ಪೂಜಾರಿ ಅವರು ಕೊಡುವ ಔಷಧಕ್ಕೆ ದರ ನಿಗದಿಯಿಲ್ಲ. ಚಿಕಿತ್ಸೆ ಪಡೆದವರು ತಮಗೆ ತೋಚಿದಷ್ಟು ಹಣ ಕೊಡುತ್ತಾರೆ. ಹಲವು ಜನರಿಗೆ ಉಚಿತವಾಗಿ ಔಷಧ ವಿತರಿಸಿದ್ದೂ ಇದೆ. ಈ ಔಷಧಕ್ಕೆ ಯಾವುದೇ ಪಥ್ಯವಿಲ್ಲ. ಆದರೆ. ಚಿಕಿತ್ಸೆ ಪಡೆದ ದಿನ ಮದ್ಯ ಸೇವಿಸುವಂತಿಲ್ಲ. ರಾತ್ರಿ ಊಟ ಮಾಡಿದ ಮೇಲೆ ಔಷಧ ಸೇವಿಸಿ ನಿದ್ರಿಸಬೇಕು. ಬೆಳಗ್ಗೆ ತಲೆಯ ಮೇಲೆ ತಣ್ಣೀರು ಸ್ನಾನ ಮಾಡಿ, ತಣ್ಣೀರನ್ನೇ ಕುಡಿಯಬೇಕು. ಆಮೇಲೆ ದೈನಂದಿನ ಕೆಲಸಗಳಿಗೆ ಹೋಗಲು ಯಾವುದೇ ಅಡ್ಡಿಯಿಲ್ಲ.
ಶೀಘ್ರ ಗುಣಮುಖ
ಕೇಪುಳು ಅಣ್ಣಿ ಪೂಜಾರಿ ಅವರ ಸಹೋದರಿ ರಾಮಕುಂಜದಲ್ಲಿ ಔಷಧ ನೀಡುತ್ತಾರೆ. ಈಗ ಎಲ್ಲ ಕಡೆಗಳಲ್ಲಿ ರಬ್ಬರ್ ಕೃಷಿಯಿಂದಾಗಿ ಗಿಡ ಮೂಲಿಕೆಗಳು ನಾಶವಾಗಿವೆ. ಗಿಡಮೂಲಿಕೆಗಳಿಗಾಗಿ ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯದ ವರೆಗೆ ಅಲೆದಾಡಬೇಕಾಗುತ್ತದೆ ಎನ್ನುತ್ತಾರೆ, ಅಣ್ಣಿ ಪೂಜಾರಿ (ಮೊ. 9880140030). ರೇಬಿಸ್‌ಗೆ ಮಾತ್ರವಲ್ಲದೆ ವಿಷಕಾರಿ ಜೇಡ ಕಚ್ಚಿದರೂ ಮೂರು ದಿನಗಳ ಔಷಧ ನೀಡಿ, ಗುಣಪಡಿಸುತ್ತಾರೆ. ಮೂಲವ್ಯಾಧಿಗೂ ಚಿಕಿತ್ಸೆ ನೀಡುತ್ತಾರೆ.
— ಸದಾನಂದ ಆಲಂಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.