ಮರು ಪಾವತಿಸಿದವರಿಗೂ ಸಾಲ ಮನ್ನಾ ಸೌಲಭ್ಯ ಸಿಗಲಿ


Team Udayavani, Oct 14, 2017, 4:37 PM IST

14-Mng–12.jpg

ಪುತ್ತೂರು : ಸಾಲ ಮರುಪಾವತಿ ಮಾಡಿದ ಕೃಷಿಕರಿಗೂ 50 ಸಾವಿರ ರೂ. ಸಾಲ ಮನ್ನಾ ಸೌಲಭ್ಯ ನೀಡುವಂತೆ ಸರಕಾರದ ಗಮನ ಸೆಳೆಯಲು ತಾ.ಪಂ. ಕೆಡಿಪಿ ತ್ತೈಮಾಸಿಕ ಸಭೆ ನಿರ್ಣಯಿಸಿತ್ತು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತಾ.ಪಂ. ಸಭಾಭವನದಲ್ಲಿ ಕೆಡಿಪಿ ತ್ತೈಮಾಸಿಕ ಸಭೆ ನಡೆಯಿತು.

ಕೆಡಿಪಿ ಸದಸ್ಯರಾದ ಕೃಷ್ಣ ಪ್ರಸಾದ್‌ ಆಳ್ವ, ಅಶೋಕ್‌ ಸಂಪ್ಯ ವಿಷಯ ಪ್ರಸ್ತಾಪಿಸಿದರು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಸಾಲ ಮನ್ನಾ ಪ್ರಯೋಜನ ಪಡೆದ ಫಲಾನುಭವಿಗಳ ವಿವರ ನೀಡುವಂತೆ ಅಧಿಕಾರಿಗೆ ಸೂಚಿಸಿ ಚರ್ಚೆ ನಡೆದು, ನಿರ್ಣಯ ಕೈಗೊಳ್ಳಲಾಯಿತು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಉತ್ತರಿಸಿ, ತಾಲೂಕಿನಲ್ಲಿ 17,502 ಮಂದಿ ರೈತರು ಸಾಲಮನ್ನಾದ ಪ್ರಯೋಜನ ಪಡೆದುಕೊಂಡಿದ್ದಾರೆ. 1,813 ಮಂದಿ ರೈತರು ಸಾಲಮನ್ನಾಕ್ಕೆ ಮುಂಚೆ 9.6 ಕೋ. ರೂ. ಪಾವತಿಸಿದ್ದು, ಈ ಫಲಾನುಭವಿಗಳಿಗೂ ಸೌಲಭ್ಯ ಒದಗಿಸುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಇದಕ್ಕೆ ಶಾಸಕಿ, ಈ ಬಗ್ಗೆ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಲು ಪ್ರಸ್ತಾವಿಸಿ, ಒಪ್ಪಿಗೆ ಸೂಚಿಸಲಾಯಿತು.

ಮಾತೃಪೂರ್ಣ ಯೋಜನೆ ಸರಳಗೊಳಿಸಲು ಮನವಿ
ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆಯ ನಿಯಮವನ್ನು ದ.ಕ. ಜಿಲ್ಲೆಗೆ ಅನ್ವಯವಾಗುವಂತೆ ಸರಳ ಗೊಳಿಸುವಂತೆ ಸರಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಿಡಿಪಿಒ ಶಾಂತಿ ಹೆಗ್ಡೆ ಮಾತನಾಡಿ, ಮಾತೃ ಪೂರ್ಣ ಯೋಜನೆ ಅನ್ವಯ ಗರ್ಭಿಣಿಯರು, ಬಾಣಂತಿಯರು ಅಂಗನ ವಾಡಿಗೆ ಬಂದು ಈ ಪೌಷ್ಟಿಕ ಆಹಾರ ಪಡೆದುಕೊಳ್ಳಬೇಕು. ಇದು ಕಡ್ಡಾಯ. ಈ ಹಿಂದಿನಂತೆ ಮನೆಗೆ ಕೊಂಡು ಹೋಗುವಂತಿಲ್ಲ. ಆದರೆ ಗರ್ಭಿಣಿಯರಿಗೆ, ಬಾಣಂತಿಯರಿಗೆ ಕಿ.ಮೀ. ದೂರ ನಡೆದುಕೊಂಡು ಬರುವುದು ಕಷ್ಟವಾಗುತ್ತಿದೆ ಎಂದರು.

ಉತ್ತರಿಸಿದ ಶಾಸಕಿ, ಇಲ್ಲಿ ಗರ್ಭಿಣಿ, ಬಾಣಂತಿಯರನ್ನು ಮನೆಯಿಂದ ಹೊರಗೆ ಕಳಿಸುವುದಿಲ್ಲ. ಮಧ್ಯಾಹ್ನ ಹೊತ್ತು ಒಂಟಿಯಾಗಿ ಹೋಗುವುದು ಕಷ್ಟ. ಹಾಗಾಗಿ ಈ ಜಿಲ್ಲೆಯ ಮಟ್ಟಿಗೆ ನಿಯಮದಲ್ಲಿ ಸರಳಗೊಳಿಸಲು ಸರಕಾರದ ಗಮನ ಸೆಳೆಯೋಣ. ಈ ಬಗ್ಗೆ ನಿರ್ಣಯ ಕೈಗೊಳ್ಳಿ ಎಂದು ಸೂಚಿಸಿದರು. 

ಪುತ್ತೂರು-ಪಾಣಾಜೆ-ಕಾಸರಗೋಡು ಬಸ್‌ ಓಡಾಟ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಬಸ್‌ ಸಂಚರಿಸದೇ ಇರುವುದನ್ನು ಶಾಸಕಿ ಪ್ರಶ್ನಿಸಿದರು. ಪುತ್ತೂರು- ಸುಳ್ಯ- ಬಂದ್ಯಡ್ಕ ಮೂಲಕ ಕಾಸರ ಗೋಡಿಗೆ ಬಸ್‌ ಓಡಾಟ ನಡೆಸುವಂತೆ ಸೂಚಿಸಿದ್ದರೂ 3 ದಿನಗಳಲ್ಲಿ ನಿಂತಿದೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ನಗರಕ್ಕೆ ಅವಕಾಶ ನೀಡಿ
ಕುಂಬ್ರದಿಂದ -ದರ್ಬೆ ಹಾಗೂ ಮಾಣಿ ಯಿಂದ ನೆಹರೂನಗರಕ್ಕೆ ಬಸ್‌ ಪಾಸ್‌ ಮೂಲಕ ಬರುವ ವಿದ್ಯಾರ್ಥಿಗಳಿಗೆ ಬಸ್‌ ನಿಲ್ದಾಣಕ್ಕೆ ಬರಲು ಅವಕಾಶ ನೀಡುತ್ತಿಲ್ಲ. ಅಲ್ಲಿಂದ ಹಣ ಕೊಟ್ಟು ಬಸ್‌ ಹತ್ತಬೇಕು. ಇಂತಹ ನಿಯಮ ಏಕೆ ಎಂದು ಕೃಷ್ಣಪ್ರಸಾದ್‌ ಆಳ್ವ ಪ್ರಶ್ನಿಸಿದರು. ಇದನ್ನು ಶಾಸಕರು ಪ್ರಶ್ನಿಸಿದರಲ್ಲದೇ ಅವಕಾಶ ನೀಡುವಂತೆ ಸೂಚಿಸಿದರು.

ರಾತ್ರಿ ವೇಳೆ ಕೊಳವೆಬಾವಿ?
ಸರಕಾರದ ವತಿಯಿಂದ ತೆಗೆಯುವ ಕೊಳವೆಬಾವಿ ಗಳನ್ನು ಕೆಲವೆಡೆ ರಾತ್ರಿ ವೇಳೆ ಕೊರೆಸಲಾಗುತ್ತಿದೆ. ಹಗಲು ಹೊತ್ತಿನಲ್ಲಿ ಬೋರ್‌ವೆಲ್‌ ಗಾಡಿ ಯಾಕೆ ಬರುತ್ತಿಲ್ಲ ಎಂದು ಅನಿತಾ ಹೇಮನಾಥ ಶೆಟ್ಟಿ ಪ್ರಶ್ನಿಸಿದರು. ಶಾಸಕಿ ಇದಕ್ಕೆ ಧ್ವನಿಗೂಡಿಸಿ, ಇದರ ಹಿಂದಿನ ಉದ್ದೇಶ ಏನು? 100ಫೀಟ್  ಆಗಿರುವುದನ್ನು 300 ಫೀಟ್  ಎಂದು ಲೆಕ್ಕ ಕೊಡುವುದಕ್ಕೋ? ಅಥವಾ ನೀರಿಲ್ಲ ಎಂದ ಮುಚ್ಚಿ ಬಿಡುವುದಕ್ಕೋ ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಉತ್ತರಿಸಲು ಪ್ರಯತ್ನಿಸಿದರೂ ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು ಎಂದು ಶಾಸಕಿ ಸೂಚಿಸಿದರು.

ಹಂದಿ ಫಾರಂ ವಾಸನೆ
ಕಾಣಿಯೂರು ಗ್ರಾಮದ ಬಂಡಾಜೆ ಪರಿಸರದಲ್ಲಿ ಹಂದಿ ಫಾರಂನಿಂದ ವಾಸನೆ ಹಬ್ಬಿ ಜನರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅದನ್ನು ತನಿಖೆ ನಡೆಸಲು ಬಂದ ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕಿ ಅಲ್ಲಿ ವಾಸನೆ ಬರುತ್ತಿಲ್ಲ ಎಂದು ವರದಿ ನೀಡಿದ್ದಾರೆ. ಇಂತಹ ಕಾಟಚಾರದ ತನಿಖೆ ನಡೆಸುವುದು ಏತಕ್ಕೆ ಎಂದು ಕೆಡಿಪಿ ಸದಸ್ಯ ಅಶೋಕ್‌ ಸಂಪ್ಯ ಪ್ರಶ್ನಿಸಿದರು.

ಶಾಸಕಿ ಶಕುಂತಳಾ ಟಿ. ಶೆಟ್ಟಿ, ವಾಸನೆಯೇ ಬರುತ್ತಿಲ್ಲ ಅನ್ನುವ ವರದಿ ಅಚ್ಚರಿ ಸಂಗತಿ. ಅದಕ್ಕೆ ಪರಿಹಾರ ಸೂಚಿಸುವ ಬದಲು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಗೌಡ, ತಹಶೀಲ್ದಾರ್‌ ಅನಂತಶಂಕರ, ಪ್ರಕಾಶ್‌ ರೊಡ್ರಿಗಸ್‌, ತಾ.ಪಂ. ಇ.ಒ. ಜಗದೀಶ್‌ ಮೊದಲಾದವರು ಉಪಸ್ಥಿತರಿದ್ದರು.

ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪುತ್ತೂರು ತಾಲೂಕು ಪಂಚಾಯತ್‌ ಕೆಡಿಪಿ ತ್ತೈಮಾಸಿಕ ಸಭೆ ಜರಗಿತು.

ಕಿರುಕುಳ ಬೇಡ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿನಿಯರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಬಗ್ಗೆ ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೃಷ್ಣ ಪ್ರಸಾದ್‌ ಆಳ್ವ ಗಮನ ಸೆಳೆದರು. ಕುಂಬ್ರದಲ್ಲಿ ವಿದ್ಯಾರ್ಥಿನಿಯ ಕೈಯಲ್ಲಿ ಪಾಸ್‌ ಇಲ್ಲದ್ದಕ್ಕೆ ನಿರ್ವಾಹಕ ಕೆಟ್ಟ ಪದಗಳಿಂದ ಬೈದಿದ್ದಾರೆ. ಕೆಲವಡೆ ಬಸ್‌ ನಿಲ್ಲಿಸುತ್ತಿಲ್ಲ. ಇಂತಹ ಅನೇಕ ಉದಾಹರಣೆಗಳು ಇವೆ ಎಂದು ಸಭೆಯಲ್ಲಿ ಆಕ್ಷೇಪ ಕೇಳಿ ಬಂತು. ಶಾಸಕಿ ಮಾತನಾಡಿ, ಇಂತಹ ದೂರು ನನ್ನ ಗಮನಕ್ಕೂ ಬಂದಿದೆ.ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅಂಥ ಕಂಡೆಕ್ಟರ್‌, ಚಾಲಕರನ್ನು ಕರೆದು ಮಾತನಾಡಿಸಿ ತಿಳಿವಳಿಕೆ ಹೇಳಿ. ಸಂಜೆ ವೇಳೆ ವಿದ್ಯಾರ್ಥಿಗಳನ್ನು ಅವರು ಹೇಳಿದ ಸ್ಥಳದಲ್ಲೇ ಇಳಿಸಬೇಕು. ಮುಖ್ಯವಾಗಿ ವಿದ್ಯಾರ್ಥಿನಿಯರನ್ನು ಸಂಜೆ 6 ಗಂಟೆಗೆ ಕತ್ತಲು ಆಗುವುದರಿಂದ ಮನೆ ತಲುಪಲು ಸಮಸ್ಯೆ ಉಂಟಾಗುತ್ತದೆ. ತತ್‌ಕ್ಷಣ ಈ ಬಗ್ಗೆ ಗಮನ ಹರಿಸುವಂತೆ ಕೆಎಸ್‌ಆರ್‌ ಟಿಸಿ ಅಧಿಕಾರಿಗೆ ಸೂಚಿಸಿದರು.

ಟಾಪ್ ನ್ಯೂಸ್

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

KN-Rajaanna

Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(1

Sullia: ಜಾಕ್‌ವೆಲ್‌ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್‌

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

KN-Rajaanna

Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ

2

Kasaragod: ಯುವತಿ ನಾಪತ್ತೆ; ದೂರು ದಾಖಲು

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.