ನಗರದಲ್ಲಿ ವರ್ಷಧಾರೆ ಮುಂದುವರಿಯುವ ಮುನ್ಸೂಚನೆ
ಉರ್ವಸ್ಟೋರ್‌ನಲ್ಲಿ ಆವರಣ ಗೋಡೆ ಕುಸಿತ
Team Udayavani, Jul 21, 2019, 5:34 AM IST
ಮಹಾನಗರ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಬಂದಿದ್ದು, ಶನಿವಾರ ಕಡಿಮೆಯಾಗಿದೆ. ಜು. 22ರ ವರೆಗೆ ಕರಾವಳಿ ಭಾಗದಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ, ಎರಡು ದಿನ ಸುರಿದ ಮಳೆ ಸದ್ಯ ಬಿಡುವು ಪಡೆದುಕೊಂಡಿದೆ.
ಮಳೆಗಾಲವಾದರೂ ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಾರ್ಧದವರೆಗೂ ಮಳೆಯಾಗಿರಲಿಲ್ಲ. ದಿನಕ್ಕೆ ಒಂದೆರಡು ಬಾರಿ ಸ್ಪಲ್ಪ ಮಳೆಯಾಗಿ ಮತ್ತೆ ಬಿಸಿಲಿನ ಕಾವು ಏರುತ್ತಿದ್ದುದರಿಂದ ಭವಿಷ್ಯದಲ್ಲಿ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ಎದುರಾಗಲಿದೆ ಎಂಬ ಆತಂಕವೂ ಜನರಲ್ಲಿ ಉಂಟಾಗಿತ್ತು. ಆದರೆ ಗುರುವಾರ, ಶುಕ್ರವಾರ ದಿನವಿಡೀ ಮಳೆಯಾಗುವುದರ ಮೂಲಕ ಜನರಲ್ಲಿ ಸಮಾಧಾನ ತಂದಿತ್ತು. ಮುಂದಿನ ದಿನಗಳಲ್ಲಿ ನಿರಂತರ ಮಳೆ ಸುರಿಯುವ ಮುನ್ಸೂಚನೆ ಈ ಎರಡು ದಿನಗಳ ಮಳೆಯಿಂದಾಗಿ ಸಿಕ್ಕಿತ್ತಾದರೂ, ಶನಿವಾರ ಮಳೆ ಕಡಿಮೆಯಾಗಿ ಜನರಲ್ಲಿ ಮತ್ತೆ ನಿರಾಸೆ ಮೂಡಿಸಿದೆ. ಮಳೆ ನಿರಂತರವಾಗಿ ಜು. 23ರ ವರೆಗೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಶಾಲೆಗೆ ರಜೆ: ಮಳೆಗೂ ರಜೆ
ಜು. 22ರ ವರೆಗೆ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಿ ಡಿಸಿ ಶಶಿಕಾಂತ್ ಸೆಂಥಿಲ್ ಶುಕ್ರವಾರ ಆದೇಶಿಸಿದ್ದರು.
ಉರ್ವ ಸ್ಟೋರ್: ಆವರಣಗೋಡೆ ಕುಸಿತ
ಉರ್ವಸ್ಟೋರ್ ಆಕಾಶವಾಣಿ ಕ್ವಾಟ್ರಸ್ ಬಳಿ ಆವರಣಗೋಡೆ ಕುಸಿದು ಬಿದ್ದಿದ್ದು, ಆಕಾಶವಾಣಿ ಸಿಬಂದಿಗಳ ವಸತಿಗೃಹ ಅಪಾಯದ ಸ್ಥಿತಿಯಲ್ಲಿದೆ. ನಿರ್ಮಾಣ ಹಂತದ ಕಟ್ಟಡವೊಂದರ ಸನಿಹದಲ್ಲೇ ಈ ಆವರಣಗೋಡೆ ಇರುವುದರಿಂದ ಕಟ್ಟಡದ ಸನಿಹದಲ್ಲಿಡೀ ಮಣ್ಣು ತುಂಬಿಕೊಂಡಿದ್ದು ದುರಸ್ತಿ ಕಾರ್ಯಾಚ ರಣೆ ಪ್ರಗತಿಯಲ್ಲಿದೆ.
ವಿದ್ಯುತ್ ಕಂಬ ಧರೆಗೆ
ಬಿಜೈ ನ್ಯೂರೋಡ್‌ನಲ್ಲಿ ಕಾಂಕ್ರಿಟ್ ಮಿಕ್ಸರ್ ವಾಹನವು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಧರೆಗೆ ಉರುಳಿದೆ.
ಶನಿವಾರ ಮಳೆ ಬಾರದಿದ್ದರೂ, ಮಳೆ ನೆಪ ದಲ್ಲಿ ಮಕ್ಕಳಿಗೆ ಎರಡು ದಿನಗಳ (ಶನಿವಾರ, ರವಿವಾರ) ಸರಣಿ ರಜೆ ಸಿಕ್ಕಂತ್ತಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೆಡ್ ಅಲರ್ಟ್‌ನ್ನೂ ಘೋಷಿಸಲಾಗಿತ್ತು. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸ ಲಾಗಿತ್ತು. ಶುಕ್ರವಾರ ಸುರಿದ ಭಾರೀ ಮಳೆಗೆ ಸಜಿಪನಡು ಗ್ರಾಮದ ಶಶಿಕಲಾ ಅವರ ವಾಸ್ತವ್ಯದ ಕಚ್ಚಾಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಸುಮಾರು 2300 ರೂ. ನಷ್ಟ ಉಂಟಾಗಿದೆ ಎಂಬುದಾಗಿ ಜಿಲ್ಲಾಧಿಕಾರಿ ಕಂಟ್ರೋಲ್ ರೂಂನಿಂದ ಮಾಹಿತಿ ದೊರಕಿದೆ.
ಕೃತಕ ನೆರೆ
ಗುರುವಾರ ಮತ್ತು ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ನಗರದಲ್ಲಿ ಕೃತಕ ನೆರೆಯೇ ಸೃಷ್ಟಿಯಾಗಿತ್ತು. ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದೆ, ಫ್ಲಾಟ್‌ಫಾರ್ಮ್ ಒಳಗಡೆಯೇ ನೀರು ನುಗ್ಗಿತ್ತು. ನಗರದ ಅಲ್ಲಲ್ಲಿ ರಸ್ತೆಯಲ್ಲೇ ನೀರು ನಿಂತು ಹೊಳೆಯಂತಾಗಿ ವಾಹನ ಸವಾರರು, ಸಾರ್ವಜನಿಕರು ಪರದಾಟ ನಡೆಸಿದ್ದರು. ಆದರೆ, ಕಳೆದೆರಡು ದಿನಗಳಲ್ಲಿ ಇದ್ದ ಸ್ಥಿತಿ ಶನಿವಾರ ಇರಲಿಲ್ಲ. ಜನಜೀವನ ಯಥಾಪ್ರಕಾರ ಇತ್ತು.
ಭಾರೀ ಮಳೆ ಸಾಧ್ಯತೆ
ಕರಾವಳಿ ಭಾಗದಲ್ಲಿ ಶನಿವಾರ ಮಳೆ ಬಾರದಿದ್ದರೂ, ಮಳೆ ಮುಂದುವರಿಯಲಿದೆ. ಶನಿವಾರ ರಾತ್ರಿಯಿಂದಲೇ ಭಾರೀ ಮಳೆ ಯಾಗುವ ಸಾಧ್ಯತೆ ಇದ್ದು, ಜು. 23ರವರೆಗೆ ಮುಂದುವರಿಯುವ ಸಾಧ್ಯತೆ ಇದೆ.
-ಸುನಿಲ್ ಗವಾಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.