ಉದ್ಯೋಗ ಖಾತರಿ ಮೂಲಕ ಖಾತರಿ ಅರಣ್ಯ!
Team Udayavani, Sep 8, 2017, 12:10 AM IST
ಬೆಳ್ತಂಗಡಿ: ಅರಣ್ಯ ಇಲಾಖೆಯು ಅರಣ್ಯ ಪ್ರದೇಶ ವಿಸ್ತರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, 2017-18ನೇ ಸಾಲಿನ ವನಮಹೋತ್ಸವದಲ್ಲಿ ಕನಿಷ್ಠ 7 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಿದೆ. ಇದಕ್ಕಾಗಿ ಉದ್ಯೋಗ ಖಾತರಿ ಯೋಜನೆಯನ್ನು ಬಳಸಲು ಮುಂದಾಗಿದೆ. ಶೇ. 60ರಷ್ಟು ಗಿಡಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ಇನ್ನೊಂದೆಡೆ ಇಲಾಖೆಯೇ ನೇರವಾಗಿ ಹೆದ್ದಾರಿ ಬದಿ ಮತ್ತು ಆಯ್ದ ಗ್ರಾಮೀಣ ರಸ್ತೆ ಬದಿಗಳಲ್ಲಿ ಸಾಲಾಗಿ ಮತ್ತು ರಸ್ತೆ ಪರಿಸರದ ಖಾಲಿ ಜಾಗಗಳಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಿದೆ. ಈ ಹಿನ್ನೆಲೆಯಲ್ಲೇ ‘ನೀರಿಗಾಗಿ ಅರಣ್ಯ’ ಘೋಷ ವಾಕ್ಯ ಹೊಂದಿದೆ.
ಮಂಗಳೂರು ಹೆದ್ದಾರಿಯ ಗುರುವಾಯನ ಕೆರೆ-ಮದ್ದಡ್ಕ, ಮದ್ದಡ್ಕ- ಸಬರಬೆ„ಲು, ಸಬರ ಬೈಲು-ಪಣಕಜೆ, ಪಣಕಜೆ- ಮಡಂತ್ಯಾರು, ಪರಪ್ಪು- ಎರುಕಡಪು – ಆದೂರ್‌ಪೇರಾಲ್‌ವರೆಗಿನ ರಸ್ತೆ ಬದಿಗಳಲ್ಲಿ ತಲಾ 3 ಕಿ.ಮೀ. ದೂರ ಮತ್ತು ಕೊಯ್ಯೂರು – ಪಿಜಕ್ಕಲ- ದೊಂಪ ದಪಲ್ಕೆವರೆಗಿನ ರಸ್ತೆ ಬದಿ 5 ಕಿ.ಮೀ. ಗುರು ವಾಯನಕೆರೆ- ಪಣೆಜಾಲು- ಮುಂಗೇಲು- ಕರ್ನತೋಡಿವರೆಗಿನ ರಸ್ತೆ ಬದಿ 5.555 ಕಿ.ಮೀ . ಸಹಿತ ಒಟ್ಟು 25.55 ಕಿ.ಮೀ. ಉದ್ದಕ್ಕೂ 2,400 ಸಾಲು ಗಿಡಗಳನ್ನು ನೆಡುವ ಕಾರ್ಯ ಮುಗಿಸಿದೆ.
ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಗುರುವಾಯನಕೆರೆ- ಪೊಟ್ಟುಕೆರೆ- ಶಕ್ತಿನಗರ, ಶಕ್ತಿನಗರ- ದೆ„ಕುಕ್ಕುವರೆಗಿನ ರಸ್ತೆ ಬದಿಗಳಲ್ಲಿ ತಲಾ 3 ಕಿ.ಮೀ. ಹಾಗೂ ಕೆ.ಎಫ್.ಡಿ.ಸಿ. ಶೀರ್ಷಿಕೆಯಡಿ ಪಿಲಿಗೂಡು- ಕಣಿಯೂರು- ರೈತಬಂಧು ರಸ್ತೆ, ಕುಪ್ಪೆಟ್ಟಿ- ಪದ್ಮುಂಜ -ಬಂದಾರು ರಸ್ತೆ, ನಿನ್ನಿಕಲ್ಲು-ನಾರ್ಯ-ಧರ್ಮಸ್ಥಳ ರಸ್ತೆಗಳ ಬದಿಗ ಳಲ್ಲಿ ತಲಾ 3ಕಿ.ಮೀ. ದೂರದವರೆಗೆ ತಲಾ 600 ರಂತೆ 1,800 ಗಿಡಗಳನ್ನು ನೆಡಲಾಗಿದೆ.
ಗಿಡಗಳು
ಸ್ಥಳೀಯ ಹಣ್ಣುಹಂಪಲುಗಳ ಗಿಡಗಳನ್ನೇ ಹೆಚ್ಚು ನೆಡಲಾಗುತ್ತಿದೆ. ಮಾವು, ಹಲಸು, ಪುನರ್ಪುಳಿ, ಬಾದಾಮಿ, ಹೆಬ್ಬಲಸು, ಮಹಾಗನಿ, ಸ್ಪೆಥೋಡಿಯಾ, ಕಾಯಿದೂಪ,ಬಸವನಪಾದ ಮುಂತಾದ ಜಾತಿಯ ಗಿಡಗಳನ್ನು ನೆಡಲಾಗುತ್ತಿದೆ.
ಸಾಲುಗಿಡಗಳ ನೆಡುತೋಪು
ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದಲ್ಲಿ ಈ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಮುಜಾಫರ್ ಜಿಲ್ಲಾ ಮಾದರಿಯಲ್ಲಿ ರಸ್ತೆ ಬದಿಯಲ್ಲಿ 14 x 20 ಗಾತ್ರದ ಸಸಿಗಳನ್ನು ನೆಡುವ ಕಾರ್ಯ ಮುಕ್ತಾಯ ಹಂತದಲ್ಲಿದೆ. ಗುರುತುಚೀಟಿ ಹೊಂದಿರುವ ನರೇಗಾ ಕಾರ್ಮಿಕರನ್ನು ತೊಡಗಿಸಿಕೊಂಡ ಇಲಾಖೆ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದೆ.
ಪರಿಸರವನ್ನು ಕಾಪಾಡಿ
ನಮ್ಮ ಇಲಾಖೆ ಮಾತ್ರವಲ್ಲ, ಜನರೂ ಗಿಡಗಳನ್ನು ನೆಟ್ಟು ಪ್ರೀತಿಸಿ ಪೋಷಿಸಬೇಕು. ನಾವು ಪರಿಸರದ ಸ್ವತ್ಛತೆ ಮತ್ತು ಆರೋಗ್ಯವನ್ನು ಕಾಪಾಡಿದರೆ, ನಮ್ಮ ಆರೋಗ್ಯವನ್ನು ಪರಿಸರವೇ ತಾಯಿಯಾಗಿ ಕಾಪಾಡುತ್ತದೆ.
– ಗಣೇಶ್ ತಂತ್ರಿ, ಪ್ರಭಾರ ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಲಯ ಬೆಳ್ತಂಗಡಿ.
– ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.