ಆನೆ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ
Team Udayavani, Apr 24, 2018, 1:35 PM IST
ಸುಳ್ಯ : ಮೇದಿನಡ್ಕ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಆಲೆಟ್ಟಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಹಿಂಡಾನೆ ಗುಂಪನ್ನು ಮರಳಿ ಕಾಡಿಗೆ ಅಟ್ಟಲು 15 ದಿನಗಳಿಂದ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಸುಳ್ಯ ನಗರ ಸಮೀಪದ ಭಸ್ಮಡ್ಕ, ತುದಿಯಡ್ಕ, ಆಲೆಟ್ಟಿ ಗ್ರಾಮದ ವಿವಿಧ ಭಾಗಗಳಲ್ಲಿ ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ಹಾನಿ ಉಂಟು ಮಾಡಿತ್ತು. ಎಂಟು ಆನೆಗಳ ಹಿಂಡು ಪಯಸ್ವಿನಿ ನದಿ ಕಿನಾರೆ ಆಸುಪಾಸಿನ ಕೃಷಿ ತೋಟದಲ್ಲಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿತ್ತು.
ನಿರಂತರ ಕಾರ್ಯಾಚರಣೆ ಬಳಿಕ ಆನೆಗಳನ್ನು ಹಾಸ್ಪಾರೆ ಅರಣ್ಯಕ್ಕೆ ಅಟ್ಟಲು ಸಾಧ್ಯವಾಗಿದೆ. ಮುಂದೆ ಅಲ್ಲಿಂದ ಕೇರಳ ಭಾಗದ ಅರಣ್ಯಕ್ಕೆ ದಾಟಿಸುವ ಪ್ರಯತ್ನ ನಡೆಯಲಿದೆ. ಸುಳ್ಯ, ಸುಬ್ರಹ್ಮಣ್ಯ, ಪಂಜ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ 25 ಸಿಬಂದಿಯ ಐದು ತಂಡ ರಚಿಸಿ, ಆನೆಗಳನ್ನು ಅಟ್ಟುವ ಪ್ರಯತ್ನ ನಡೆಸಲಾಗಿತ್ತು. ನಾಗರಹೊಳೆಯಿಂದ ಆಗಮಿಸಿದ ಐವರು ಸಿಬಂದಿ, ಸ್ಥಳೀಯರು ಪಾಲ್ಗೊಂಡಿದ್ದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್. ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ಸುಳ್ಯ, ಪಂಜ, ಸುಬ್ರಹ್ಮಣ್ಯ, ವಲಯ ಅರಣ್ಯಾಧಿಕಾರಿಗಳಾದ ಎನ್. ಮಂಜುನಾಥ್, ಪ್ರವೀಣ್ ಶೆಟ್ಟಿ, ತ್ಯಾಗರಾಜ್ ನೇತೃತ್ವದಲ್ಲಿ ತಂಡ ಪಾಲ್ಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.