ಅಮರನಾಥ ಶೆಟ್ಟಿ ನಿಧನ: ಗಣ್ಯರಿಂದ ಅಂತಿಮ ದರ್ಶನ, ಸಂತಾಪ
ಇಂದು ಮುಂಡ್ರುದೆಗುತ್ತುವಿನಲ್ಲಿ ಅಂತ್ಯಕ್ರಿಯೆ
Team Udayavani, Jan 28, 2020, 2:06 AM IST
ಮೂಡುಬಿದಿರೆ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಹಿತ ಗಣ್ಯರು ಮೂಡುಬಿದಿರೆಯ ಅಮರನಾಥ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಮೃತರ ಅಂತಿಮದರ್ಶನಗೈದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ ಕೋಟ್ಯಾನ್, ವಿ. ಸುನಿಲ್ ಕುಮಾರ್, ರಾಜೇಶ್ ನಾಯಕ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ರಘುಪತಿ ಭಟ್, ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಸದಸ್ಯರಾದ ಐವನ್ ಡಿ’ಸೋಜಾ, ಎಸ್.ಎಲ್. ಬೋಜೇಗೌಡ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ, ಸಂಸದೆ ಶೋಭಾ ಕರಂದ್ಲಾಜೆ, ರಾಜೀವ್ ಗಾಂಧಿ ವಿ.ವಿ. ಮಾಜಿ ಕುಲಪತಿ ಡಾ| ರಮಾನಂದ ಶೆಟ್ಟಿ, ಗಣ್ಯರಾದ ಬಲಿಪ ನಾರಾಯಣ ಭಾಗವತ, ಮಾಲಾಡಿ ಅಜಿತ್ ಕುಮಾರ್ ರೈ, ಡಾ| ಎಂ.ಎನ್. ರಾಜೇಂದ್ರ ಕುಮಾರ್, ಜಯಪ್ರಕಾಶ್ ಹೆಗ್ಡೆ, ಕೆ. ಅಭಯಚಂದ್ರ, ವಿನಯ ಕುಮಾರ್ ಸೊರಕೆ, ಬಿ.ಬಿ. ನಿಂಗಯ್ಯ ಮೂಡಿಗೆರೆ, ಜೆ.ಆರ್. ಲೋಬೋ, ವಸಂತ ಬಂಗೇರ, ಮಲ್ಲಿಕಾ ಪ್ರಸಾದ್, ಡಾ| ಎಂ. ಮೋಹನ ಆಳ್ವ, ಯಶ್‌ಪಾಲ್ ಸುವರ್ಣ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.
ಅಮರನಾಥ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗಳು ಪಾಲಡ್ಕದ ಮುಂಡ್ರುದೆಗುತ್ತುವಿನಲ್ಲಿ ಮಂಗಳವಾರ 10.30ಕ್ಕೆ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಲಿದೆ.
ಮಂಗಳೂರು/ಉಡುಪಿ: ಮಾಜಿ ಸಚಿವ, ಸಹಕಾರಿ ಧುರೀಣ ಕೆ. ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಹಿತ ಎಲ್ಲ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.
ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಟuಲದಾಸ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಆದರ್ಶ ಅಮರವಾಗಲಿ
ಧರ್ಮಸ್ಥಳ ಕ್ಷೇತ್ರಕ್ಕೆ ಆತ್ಮೀಯರಾಗಿದ್ದ ಅಮರನಾಥ ಶೆಟ್ಟಿ ಅವರು ನೇರ ನಡೆ-ನುಡಿ ಹಾಗೂ ಸತ್ಯ, ನ್ಯಾಯಕ್ಕಾಗಿ ಶಿಸ್ತು ಪಾಲನೆಯ ಅಪೂರ್ವ ವ್ಯಕ್ತಿತ್ವವನ್ನು ಹೊಂದಿದವರು. ಅವರ ನಿಧನದಿಂದ ಆತ್ಮೀಯರೊಬ್ಬರನ್ನು ಕಳೆದುಕೊಂಡಂತಾಗಿದೆ. ರಾಜಕೀಯ ಅಧಿಕಾರವಿದ್ದರೂ ಇಲ್ಲದಿದ್ದರೂ ಅವರು ಸದಾ ಜನಪರ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ಅವರ ಆದರ್ಶ ಸದಾಜಾಗೃತವಾಗಿರಲಿ ಎಂದು ಆಶಿಸುತ್ತಾ, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅಗಲುವಿಕೆಯಿಂದ ಕುಟುಂಬದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ,
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ
ಸಹಕಾರಿ ರಂಗದ ಆದರ್ಶ
ಸಹಕಾರ ರಂಗದ ಹಿರಿಯ ಮುತ್ಸದ್ಧಿಯಾಗಿ ಆದರ್ಶ ಸೇವೆ ಸಲ್ಲಿಸಿರುವ ಅಮರನಾಥ ಶೆಟ್ಟಿ ಅವರು ಸರಳ ಸಜ್ಜನ ವ್ಯಕ್ತಿ. ಎಲ್ಲರಿಗೂ ಆತ್ಮೀಯರಾಗಿರುವ ಅವರು ಅಜಾತಶತ್ರು. ಸಹಕಾರ ಕ್ಷೇತ್ರದಲ್ಲಿ ಅವಿರತ ಸೇವೆ ಗೈದಿರುವ ಅವರು ಮೂಡುಬಿದಿರೆ ಸೇವಾ ಸಹಕಾರಿ ಬ್ಯಾಂಕನ್ನು ಸದೃಢವಾಗಿ ಬೆಳೆಸಿದ್ದು ಮಾತ್ರವಲ್ಲ, ಸಹಕಾರ ರಂಗಕ್ಕೆ ಆದರ್ಶವಾಗಿದ್ದರು. ಅವರ ನಿಧನ ಸಹಕಾರ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
– ಡಾ| ಎಂ.ಎನ್. ರಾಜೇಂದ್ರ ಕುಮಾರ್,
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.