ಮಂಗಳೂರು ಜಂಕ್ಷನ್,ಕಾಸರಗೋಡು ನಿಲ್ದಾಣ ಅಭಿವೃದ್ಧಿಗೆ ಶಿಲಾನ್ಯಾಸ
ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಗೆ ಪ್ರಧಾನಿ ಚಾಲನೆ
Team Udayavani, Aug 6, 2023, 11:30 PM IST
ಮಂಗಳೂರು: ಕೇಂದ್ರ ಸರಕಾರದ ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆ (ಎಬಿಎಸ್‌ಎಸ್)ಯಡಿ ಪಡೀಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಸೇರಿದಂತೆ ದೇಶಾದ್ಯಂತ 508 ನಿಲ್ದಾಣಗಳ ಅಭಿವೃದ್ಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಏಕಕಾಲಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೇ, ಕಲ್ಲಿದ್ದಲು ಮತ್ತು ಗಣಿ ಖಾತೆ ರಾಜ್ಯ ಸಚಿವ ರಾವ್ ಸಾಹೇಬ ಪಾಟೀಲ ದಾನ್ವೆ, ಕೇಂದ್ರ ರೈಲ್ವೇ ಮತ್ತು ಜವುಳಿ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ವರ್ಚುವಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಯ ಶಿಲಾಫಲಕವನ್ನು ಸಂದದ ನಳಿನ್ ಕುಮಾರ್ ಕಟೀಲು ಅನಾವರಣಗೊಳಿಸಿದರು. ಬಳಿಕ ಮಾತನಾಡಿ, 19.32 ಕೋ.ರೂ. ವೆಚ್ಚದಲ್ಲಿ ಜಂಕ್ಷನ್ ರೈಲು ನಿಲ್ದಾಣ ಮರುನಿರ್ಮಾಣಗೊಳ್ಳಲಿದ್ದು, ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಕಳೆದ 9 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೇಂದ್ರ ಸರಕಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸ್ಮಾರ್ಟ್ ಸಿಟಿ, ಹೆದ್ದಾರಿ ಪ್ರಾಧಿಕಾರ, ರೈಲು, ಬಂದರು ಸೇರಿದಂತೆ ಜಿಲ್ಲೆಗೆ ಸುಮಾರು 50 ಸಾವಿರ ಕೋ.ರೂ. ಅನುದಾನವನ್ನು ಮೋದಿಯವರು ಒದಗಿಸಿದ್ದಾರೆ ಎಂದು ಹೇಳಿದರು.
ರೈಲ್ವೇ ಅಭಿವೃದ್ಧಿಗೆ ಪ್ರಧಾನಿ ಆದ್ಯತೆ
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ರೈಲ್ವೇ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಸಾಕಷ್ಟು ಬದಲಾವಣೆಗಳು, ಅಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಸ್ವದೇಶಿ ನಿರ್ಮಿತ ವಂದೇ ಭಾರತ್ ಜಗತ್ತಿನ ಗಮನವನ್ನು ಸೆಳೆದಿದೆ. ಜಿಲ್ಲೆಯಲ್ಲಿ ಕೊಂಕಣ ರೈಲ್ವೇ, ಪಾಲಾ^ಟ್ ವಿಭಾಗ, ಮೈಸೂರು ವಿಭಾಗಗಳಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಕೆಲವು ಪ್ರಗತಿಯಲ್ಲಿವೆ ಎಂದರು.
ಬಂಟ್ವಾಳ-ಸುಬ್ರಹ್ಮಣ್ಯ
ನಿಲ್ದಾಣ ಅಭಿವೃದ್ಧಿ
ಅಮೃತ್ ಭಾರತ್ ಯೋಜನೆಯಡಿ ಬಂಟ್ವಾಳ ಮತ್ತು ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನೀಲ ನಕ್ಷೆ ತಯಾರಾಗಿದ್ದು, ಶೀಘ್ರದಲ್ಲಿ ಈ ಕಾಮಗಾರಿಗಳಿಗೂ ಚಾಲನೆ ನೀಡಲಾಗುವುದು. ಬಂಟ್ವಾಳ ನಿಲ್ದಾಣ 26.18 ಕೋ.ರೂ ಮತ್ತು ಸುಬ್ರಹ್ಮಣ್ಯ ರೋಡ್ ನಿಲ್ದಾಣವನ್ನು 23.73 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದರು.
ನಗರಕ್ಕೆ ಹೊಸ ರೂಪ
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಅಭಿವೃದ್ಧಿ ಮಂಗಳೂರಿಗೆ ಹೊಸ ರೂಪ ನೀಡಲಿದೆ. ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇನ್ನೊಂದು ರಸ್ತೆ ಅಭಿವೃದ್ಧಿ ಹಂತದಲ್ಲಿದೆ. ರೈಲು ಹಳಿಗಳ ಸಮೀಪ ಮನೆಗಳು ಇರುವವರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಎನ್‌ಒಸಿಗಾಗಿ ರೈಲ್ವೇ ಡಿಆರ್‌ಎಂ ಅನುಮತಿ ಬೇಕಾಗಿದ್ದು, ಸಂಸದರು ತಿಂಗಳಿಗೊಮ್ಮೆ ಮೂರು ವಿಭಾಗಗಳ ಡಿಆರ್‌ಎಂಗಳ ಸಭೆ ನಡೆಸುತ್ತಿರುವುದು ಹೆಚ್ಚಿನ ಅನುಕೂಲವಾಗಿದೆ ಎಂದರು.
ಶಾಸಕರಾದ ಡಾ| ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಸಿಂಹ ನಾಯಕ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಕಾರ್ಪೊರೇಟರ್ ಶೋಭಾ ಪೂಜಾರಿ, ರೈಲ್ವೇ ಪಾಲಾ^ಟ್‌ವಿಭಾಗದ ಡಿಆರ್‌ಎಂ ಮುಕುಂದ್ ಆರ್. ಮೊದಲಾದವರು ಉಪಸ್ಥಿತರಿ ದ್ದರು. ರಾಜಗೋಪಾಲನ್ ಸ್ವಾಗತಿಸಿ ದರು. ಚೀಫ್ ಟಿಕೆಟ್ ಇನ್‌ಸ್ಪೆಕ್ಟರ್ ಕಿಶನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮಂಗಳೂರು-ಗೋವಾ ನಡುವೆ ವಂದೇ ಭಾರತ್
ಮಂಗಳೂರು-ಬೆಂಗಳೂರು ನಡುವೆ 90 ಕಿ.ಮೀ. ವಿದ್ಯುದೀಕರಣ ಕಾಮಗಾರಿ ಬಾಕಿಯಿದ್ದು, ಪೂರ್ಣಗೊಂಡ ತತ್‌ಕ್ಷಣ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಇದಕ್ಕೂ ಮೊದಲು ಕಾಸರಗೋಡು ವರೆಗೆ ಇರುವ ರೈಲನ್ನು ಮಂಗಳೂರಿಗೆ ವಿಸ್ತರಿಸುವಂತೆ ಬೇಡಿಕೆ ಇಡಲಾಗಿದೆ. ರೈಲ್ವೇ ಸಚಿವರೇ ಮಂಗಳೂರು-ಗೋವಾ ನಡುವೆ ವಂದೇ ಭಾರತ್ ರೈಲು ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
9 ವರ್ಷದಲ್ಲಿ ಜಿಲ್ಲೆಗೆ ಬಂದ ಅನುದಾನ
ಪಾಲಾ^ಟ್ ವಿಭಾಗ: 540.16 ಕೋ.ರೂ.
ಮೈಸೂರು ವಿಭಾಗ: 128.4 ಕೋ.ರೂ.
ಕೊಂಕಣ ರೈಲ್ವೇ: 1189.50 ಕೋ.ರೂ.
ರೈಲ್ವೇ ರಂಗದಲ್ಲಿ ನೂತನ
ಅಧ್ಯಾಯ ಆರಂಭ: ಮೋದಿ
ಕಾಸರಗೋಡು: ಇದೇ ವೇಳೆ ಕಾಸರಗೋಡು ರೈಲು ನಿಲ್ದಾಣ ನವೀಕರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಆನ್‌ಲೈನ್ ಮುಖಾಂತರ ಶಿಲಾನ್ಯಾಸ ನೆರವೇರಿಸಿದರು. ದೇಶದ ರೈಲ್ವೇ ಇತಿಹಾಸದಲ್ಲಿ ನೂತನ ಅಧ್ಯಾಯ ಆರಂಭಗೊಳ್ಳುತ್ತಿದೆ. ಈ ಮೂಲಕ ಜನಸಾಮಾನ್ಯರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಪ್ರಧಾನಿ ತಿಳಿಸಿದರು.
ಕಾಸರಗೋಡು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ. ನೆಲ್ಲಿಕುನ್ನು, ಜನಪ್ರತಿನಿಧಿಗಳು, ರೈಲ್ವೇ ಸಿಬಂದಿ, ವಿದ್ಯಾರ್ಥಿಗಳು, ಅಧ್ಯಾಪಕರು ಮೊದಲಾದವರು ಭಾಗವಹಿಸಿದರು. ರೈಲ್ವೇ ಮ್ಯಾನೇಜರ್ ಡಾ| ಸಕೀರ್ ಹುಸೈನ್ ಸ್ವಾಗತಿಸಿದರು. ಸಂದೀಪ್ ಜೋಸೆಫ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.