ಚತುಷ್ಪಥ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಗ್ರಹಣ?
Team Udayavani, Nov 26, 2018, 9:13 AM IST
ಬಂಟ್ವಾಳ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್ -ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್ ರಸ್ತೆ ಕಾಮಗಾರಿ ತಾತ್ಕಾಲಿಕ ನಿಲುಗಡೆ ಆಗಿದೆಯೇ ಎಂಬ ಸಂದೇಹ ಮೂಡಿದೆ. ಗುತ್ತಿಗೆದಾರ ಕಂಪೆನಿಯು ಶೇ.60ರಷ್ಟು ಯಂತ್ರೋಪಕರಣ, ಸರಕು ಸಾಮಗ್ರಿ ಗಳನ್ನು ಸ್ಥಳಾಂತರಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತಿರುವ ಅಂಶ.
ಎಲ್ ಆ್ಯಂಡ್ ಟಿ ಕಂಪೆನಿಯು ಈ ಕಾಮಗಾರಿ ವಹಿಸಿಕೊಂಡ ಬಳಿಕ ಪಾಣೆಮಂಗಳೂರು ಸೇತುವೆ ಸನಿಹ ಪರಕೇರಿಯ ಸುಮಾರು ಹತ್ತು ಎಕರೆಯಲ್ಲಿ ಸರಕು ಸಾಮಗ್ರಿಗಳ ಸಂಗ್ರಹ ಮಾಡಿತ್ತು. ಈಗ ಅಲ್ಲಿನ ಬಹು
ತೇಕ ಕಾರ್ಮಿಕರು, ಯಂತ್ರೋಪಕರಣಗಳನ್ನು ತೆರವುಗೊಳಿಸಲಾಗಿದೆ.
ನನೆಗುದಿಗೆ ಬಿದ್ದ ಕಾಮಗಾರಿ
ಎಲ್ ಆ್ಯಂಡ್ ಟಿ ಕಂಪೆನಿಗೆ ಈ ರಸ್ತೆ ಕಾಮಗಾರಿ ನಿರ್ವಹಿಸಲು ಎನ್‌ಎಚ್
ಎಐ ಜತೆಗೆ 2017ರಲ್ಲಿ ಒಪ್ಪಂದ ಆಗಿತ್ತು. ಎಂಜಿನಿಯರಿಂಗ್, ಪ್ರೊಕ್ಯೂರ್‌ವೆುಂಟ್ ಮತ್ತು ಕನ್‌ಸ್ಟ್ರಕ್ಷನ್ (ಇಪಿಸಿ) ಮಾದರಿಯಲ್ಲಿ 30 ತಿಂಗಳ ಒಳಗೆ ನಾಲ್ಕು ಲೇನ್ ಕಾಂಕ್ರೀಟ್ ರಸ್ತೆಯನ್ನು ಪೂರ್ಣಗೊಳಿಸಬೇಕಿತ್ತು. ಅದು ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದೆ. ಈಗಾಗಲೇ 20 ತಿಂಗಳು ಮುಕ್ತಾಯ ಆಗಿದ್ದು, ಇನ್ನುಳಿದ ಹತ್ತು ತಿಂಗಳಲ್ಲಿ ಕೆಲಸ ನಿರ್ವಹಿಸುವುದು ಅಸಾಧ್ಯ ಎಂಬ ನೆಲೆಯಲ್ಲಿ ಕಂಪೆನಿಯು ಒಪ್ಪಂದ
ದಿಂದ ನಿರ್ಗಮಿಸಲು ಯೋಜಿಸಿರುವು
ದಾಗಿ ಮಾಹಿತಿ ಲಭ್ಯವಾಗಿದೆ.
ಹೊಂದಾಣಿಕೆ ಕೊರತೆ?
ಯೋಜನೆಗೆ ಜಿಲ್ಲಾಡಳಿತ, ಎನ್‌ಎಚ್‌ಎಐ ಸಹಕಾರ ನೀಡುತ್ತಿಲ್ಲ. ಆರಂಭದಲ್ಲಿದ್ದ ಟೆಂಡರ್‌ನಲ್ಲಿ ಕೆಲವು ಬದಲಾವಣೆ ತಂದಿದ್ದು, ಗುಂಡ್ಯದಲ್ಲಿ ಅರಣ್ಯ ಇಲಾಖೆ ನಿರಾಕ್ಷೇಪಣ ಪತ್ರ ನೀಡಿಲ್ಲ. ಇದರಿಂದ ಸುಮಾರು 145 ಕೋಟಿ ರೂ. ಹೆಚ್ಚುವರಿ ವೆಚ್ಚ ಆಗಲಿದ್ದು, ನಷ್ಟವಾಗುತ್ತದೆ ಎಂಬುದು ಕಂಪೆನಿ ಹಿಂದೆ ಸರಿಯಲು ಕಾರಣ ಎನ್ನಲಾಗಿದೆ. ಅಲ್ಲದೆ, ಕಲ್ಲಡ್ಕದಲ್ಲಿ ಬೈಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ ಗೊಂದಲ ಇರುವುದರಿಂದ ಎನ್‌ಎಚ್‌ಎಇ 1.2 ಕಿ.ಮೀ. ರಸ್ತೆಯನ್ನು ಒಪ್ಪಂದದ ಬಳಿಕ ಕಡಿತ ಮಾಡಿದೆ.
ಮಳೆಗಾಲದಲ್ಲಿ ಗುಡ್ಡ ಪ್ರದೇಶದಲ್ಲಿ ರಸ್ತೆ ಅಗಲಗೊಳಿಸುವಾಗ ಕುಸಿದು ತೊಂದರೆಯಾಗಿತ್ತು. ಬಹುತೇಕ ಖಾಸಗಿ ಜಮೀನಾಗಿದ್ದು, ಭೂ ಸ್ವಾಧೀನಕ್ಕೆ ಸಮಸ್ಯೆಗಳು ಎದುರಾಗಿದ್ದವು. ಇನ್ನಷ್ಟು
ಜಮೀನು ಸ್ವಾಧೀನ ಆಗಬೇಕಾಗಿರು
ವುದು ಅಡ್ಡಿಯನ್ನು ಕ್ಲಿಷ್ಟವಾಗಿಸಿದೆ.
ಪೆರಿಯಶಾಂತಿಯಲ್ಲಿ ಸೇತುವೆ ಹೆಚ್ಚು ಅಗಲಗೊಳಿಸುವುದು, ಮೂರು ಸಣ್ಣ ಸೇತುವೆಗಳ ವಿಸ್ತರಣೆ, ನೆಲ್ಯಾಡಿಯಲ್ಲಿ ಅಂಡರ್‌ಪಾಸ್ ನಿರ್ಮಾಣ, ವಾಹನ ದಟ್ಟಣೆಯ ಪ್ರದೇಶಗಳಾದ ನರಿಕೊಂಬು ಪಾಣೆಮಂಗಳೂರು ಕ್ರಾಸ್, ಮೆಲ್ಕಾರ್ ಕ್ರಾಸ್, ಪುತ್ತೂರು ಕ್ರಾಸ್ ಮತ್ತು ಸುಬ್ರಹ್ಮಣ್ಯ ಕ್ರಾಸ್‌ಗಳಲ್ಲಿ ಜಂಕ್ಷನ್ ಪರಿವರ್ತನೆಗೆ ಸಂಸದರು ಬಯಸಿದಂತೆ ಅಂದಾಜು ಪ್ರಸ್ತಾವನೆ ಸಲ್ಲಿಸಿದ್ದರೂ ಸ್ಪಂದನೆ ದೊರೆಯದಿರುವುದು ಕಂಪೆನಿ ಹಿಂದೆ ಸರಿಯುವುದಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ.
ಬಿ.ಸಿ.ರೋಡ್- ಅಡ್ಡಹೊಳೆ: 821 ಕೋಟಿ ರೂ. ಯೋಜನೆ
ಬಿ.ಸಿ. ರೋಡ್‌ನಿಂದ ಅಡ್ಡಹೊಳೆಯ ವರೆಗೆ 821 ಕೋಟಿ ರೂ. ವೆಚ್ಚದಲ್ಲಿ 63 ಕಿ.ಮೀ. ಉದ್ದದಲ್ಲಿ ಸುಸಜ್ಜಿತ ಚತುಷ್ಪಥ ಕಾಂಕ್ರೀಟ್ ರಸ್ತೆಗೆ 2016ರ ಮಾ.28ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದರು. ರಸ್ತೆ ನಿರ್ಮಾಣದ ಜತೆಗೆ 14.5 ಕಿ.ಮೀ. ಸರ್ವೀಸ್ ರಸ್ತೆ, ಎರಡು ಮೇಲ್ಸೇತುವೆ, ಎರಡು ದೊಡ್ಡ ಸೇತುವೆ, 14 ಸಣ್ಣ ಸೇತುವೆ, 9 ಅಂಡರ್‌ಪಾಸ್, 1 ಟೋಲ್ ಗೇಟ್ ನಿರ್ಮಿಸಲು ಟೆಂಡರ್ ನೀಡಲಾಗಿತ್ತು.
ಕಾಮಗಾರಿಗಾಗಿ ಬಿ.ಸಿ. ರೋಡ್‌ನಿಂದ ಅಡ್ಡಹೊಳೆಯ ವರೆಗೆ 270.65 ಹೆಕ್ಟೇರ್ ಜಮೀನಿನ ಆವಶ್ಯಕತೆ ಇದ್ದು, 251.54 ಹೆಕ್ಟೇರ್ ಜಾಗ ಭೂಸ್ವಾಧೀನವಾಗಿದೆ, 15.02 ಹೆಕ್ಟೇರ್ ಭೂಸ್ವಾಧೀನ ಬಾಕಿ ಇದೆ. ಈವರೆಗೆ 122 ಕೋಟಿ ರೂ. ಹಣವನ್ನು ಪರಿಹಾರವಾಗಿ ನೀಡಲಾಗಿದೆ. ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ ಅರಣ್ಯ ವಲಯದಿಂದ 10,196 ಮರಗಳನ್ನು ಕಡಿಯಲು ಅನುಮತಿ ಸಿಕ್ಕಿದೆ. ಗುತ್ತಿಗೆದಾರರು ಸುಮಾರು 7 ಸಾವಿರ ಮರಗಳನ್ನು ಕಡಿದು 45 ಕಿ.ಮೀ.ಗಳಷ್ಟು ಭೂಮಿಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
ಎಲ್‌ಆ್ಯಂಡ್ ಟಿ ಕಂಪೆನಿ ಹೆಚ್ಚುವರಿ 47 ಹೆಕ್ಟೇರ್ ಭೂ ಸ್ವಾಧೀನ ಕೇಳಿದೆ. ಕೇಂದ್ರ ಸರಕಾರದ ಮಟ್ಟದಲ್ಲಿ ಇದರ ಬಗ್ಗೆ ಸಮಾಲೋಚನೆ ನಡೆದು ಒಪ್ಪಿಗೆ ಸಿಕ್ಕಿದೆ. ಕಾಮಗಾರಿ ನಿಲುಗಡೆ ಆಗಿಲ್ಲ. ಹಾಸನದಲ್ಲಿರುವ ಹೆದ್ದಾರಿ ಪ್ರೊಜೆಕ್ಟ್ ಡೈರೆಕ್ಟರನ್ನು ಈ ಬಗ್ಗೆ 2 ದಿನದಲ್ಲಿ ಕರೆಸಿಕೊಂಡು ಕಾಮಗಾರಿ ತ್ವರಿತ ಮಾಡುವಂತೆ ಸೂಚಿಸಲಾಗುವುದು. ಪ್ರಾಕೃತಿಕ, ಅರಣ್ಯ ಪ್ರದೇಶ ಭೂ ಸ್ವಾಧೀನ, ಸ್ಥಳೀಯ ಅಡಚಣೆಗಳಿಂದ ಆಗಿರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು.
ನಳಿನ್ ಕುಮಾರ್ ಕಟೀಲು ಸಂಸದರು.
ಆರಂಭವಾಗಿದ್ದ ಸೇತುವೆ ಕಾಮಗಾರಿ
ನೇತ್ರಾವತಿ ನದಿಯ ನೂತನ ಸೇತುವೆಗೆ ಪಿಲ್ಲರ್ ನಿರ್ಮಾಣ ಆರಂಭವಾಗಿತ್ತು. ಆದರೆ ಎನ್‌ಎಚ್‌ಎಐ ಮತ್ತು ಕಂಪೆನಿ ನಡುವಣ ಭಿನ್ನಾಭಿಪ್ರಾಯ ಅಥವಾ ಹೊಂದಾಣಿಕೆಯ ಕೊರತೆಯಿಂದ ಇಡೀ ಕಾಮಗಾರಿಯೇ ಸ್ಥಗಿತಗೊಳ್ಳುವ ಹಂತ ತಲುಪಿದೆ. ಮುಂದಿನ ಆರ್ಥಿಕ ವರ್ಷಾಂತ್ಯಕ್ಕೆ ಬಹುತೇಕ ಕಾಮಗಾರಿ ಮುಗಿಸಿ ಬಳಕೆಗೆ ತೆರೆದುಕೊಳ್ಳಬೇಕಿದ್ದ, ಮಂಗಳೂರು -ಬೆಂಗಳೂರು ಪ್ರಯಾಣ ಅವಧಿಯನ್ನು 3 ಗಂಟೆಗಳಷ್ಟು ಕಡಿಮೆ ಮಾಡಬಹುದಾಗಿದ್ದ ಯೋಜನೆಗೆ ಈಗ ಗ್ರಹಣ ಹಿಡಿದಿದೆ.
ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.