ಮಂಗಳೂರು: ಫೈನಾನ್ಸ್ ಹೆಸರಲ್ಲಿ ವಂಚನೆ
Team Udayavani, Jun 2, 2022, 10:04 PM IST
ಮಂಗಳೂರು: ಖಾಸಗಿ ಫೈನಾನ್ಸ್ನಿಂದ ಸಾಲ ಪಡೆಯುವುದಕ್ಕೆ ಮುಂದಾಗಿದ್ದ ವ್ಯಕ್ತಿಯೊಬ್ಬರಿಗೆ ಫೈನಾನ್ಸ್ ಹೆಸರಿನಲ್ಲಿ ಕರೆ ಮಾಡಿ 18,119 ರೂ. ವಂಚಿಸಿದ ಪ್ರಕರಣ ವರದಿಯಾಗಿದೆ.
ಮೇ 25ರಂದು ಕರೆ ಬಂದಿದ್ದು, ಲೋನ್ ಮಂಜೂರು ಮಾಡಲು ಕೆವೈಸಿ ಕಳುಹಿಸುವಂತೆ ತಿಳಿಸಿದ್ದಾರೆ. ಅದನ್ನು ನಂಬಿದ ವ್ಯಕ್ತಿ ಕೆವೈಸಿ ಕಳುಹಿಸಿದ್ದಾರೆ. ಆ ಬಳಿಕ ಇನ್ನೊಂದು ಕರೆ ಬಂದಿದ್ದು, ಲೋನ್ ಮಂಜೂರಾಗಿದ್ದು, ಅದರ ಮಾಹಿತಿಯನ್ನು ವಾಟ್ಸ್ಆ್ಯಪ್ ಮಾಡಲಾಗಿದೆ. ಅದಕ್ಕಾಗಿ ಅಗ್ರಿಮೆಂಟ್ ಚಾರ್ಜಸ್, ಲೋನ್ ಪೇಮೆಂಟ್ ಹೋಲ್ಡ್ ಚಾರ್ಜಸ್ಅನ್ನು ಗೂಗಲ್ ಪೇ ಮಾಡುವಂತೆ ತಿಳಿಸಿದ್ದಾರೆ.
ದೂರುದಾರರು ನಿಜವೆಂದು ನಂಬಿ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 18,119 ರೂ. ವರ್ಗಾಯಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಲೋನ್ ಹಾಗೂ ತಾನು ವರ್ಗಾಯಿಸಿದ ಹಣವನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.