Fraud Case ಮುದ್ರಾ ಯೋಜನೆಯ ಸಾಲದ ಹೆಸರಿನಲ್ಲಿ 20.50 ಲಕ್ಷ ರೂ. ವಂಚನೆ
Team Udayavani, Aug 2, 2024, 6:33 AM IST
ಮಂಗಳೂರು: ಕೇಂದ್ರ ಸರಕಾರದ ಮುದ್ರಾ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ 20.50 ಲಕ್ಷ ರೂ. ಪಡೆದು ವಂಚಿಸಿರುವ ಕುರಿತಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಎನ್ನುವವರಿಗೆ ಪರಿಚಯವಾಗಿದ್ದ ಪ್ರಕಾಶ್ ಪೂಜಾರಿ ಎಂಬಾತ ತಾನು ಮುದ್ರಾ ಯೋಜನೆಯ ಏಜೆಂಟ್ ಎಂದು ಪರಿಚಯಿಸಿ ಸಾಲ ಕೊಡಿಸುತ್ತೇನೆ ಎಂದು ತಿಳಿಸಿದ್ದಾನೆ. ಅನಿಲ್ ಅವರು ಬೇಡ ಎಂದರೂ, ವಿನಯದಿಂದ ಮಾತನಾಡಿ ಹಲವರಿಗೆ 15 ಲಕ್ಷ ರೂ. ವರೆಗೆ ಸಾಲ ತೆಗೆಸಿಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. 15 ಲಕ್ಷ ರೂ. ಸಾಲದ ಖರ್ಚಿಗೆ 1.50 ಲಕ್ಷ ರೂ. ನೀಡಬೇಕು, ಸಾಲ ಮಂಜೂರು ಆಗದೇ ಇದ್ದಲ್ಲಿ ಹಣ ವಾಪಸು ನೀಡುವುದಾಗಿಯೂ ತಿಳಿದ್ದಾನೆ.
ಆತನ ಮಾತನ್ನು ನಂಬಿ 1.50 ಲಕ್ಷ ರೂ. ಒಟ್ಟುಗೂಡಿಸಿ ಪ್ರಕಾಶ್ ಪೂಜಾರಿಯ ಖಾತೆಗೆ ನೆಫ್ಟ್ ಮಾಡಿದ್ದಾರೆ. ಇದೇ ವೇಳೆ ಇತರರೂ ಆತನಿಗೆ ಹಣ ನೀಡಿದ್ದಾರೆ. ಸಾಲ ಮಂಜೂರಾಗದೇ ಇದ್ದಾಗ ಆತನ ಮನೆಗೆ ಹೋಗಿ ವಿಚಾರಿಸಿದ್ದು, ಸಾಲ ಮಂಜೂರಾಗುವ ಬಗ್ಗೆ ಭರವಸೆಯನ್ನೂ ನೀಡಿದ್ದ. ಹಲವು ದಿನಗಳು ಕಳೆದರೂ, ಸಾಲ ದೊರೆಯದೇ ಇದ್ದಾಗ ಆತನ ಮೊಬೈಲ್‌ಗೆ ಕರೆ ಮಾಡಿದ್ದು, ಅದು ಸ್ವಿಚ್ ಆಫ್ ಆಗಿದೆ. ಮನೆಗೆ ಹೋಗಿ ಕೇಳಿದಾಗ ಆತನ ತಾಯಿ ಮತ್ತು ಪತ್ನಿ ಆತ ಮನೆಗೆ ಬಾರದೆ 2 ವರ್ಷ ಆಯಿತು ಎಂದು ತಿಳಿಸಿದ್ದಾರೆ. ಇನ್ನಷ್ಟು ವಿಚಾರಿಸಿದಾಗ ಆತನ ಪತ್ನಿಯೂ ಸಾಲಕ್ಕೆ ಸಂಬಂಧಿಸಿದ ಹಲವರಿಂದ ಹಣ ಪಡೆದಿರುವುದು ತಿಳಿದುಬಂದಿದೆ.
ಹಲವರಿಗೆ ಲಕ್ಷಾಂತರ ರೂ. ವಂಚನೆ
ಇಬ್ಬರು ಸೇರಿ ಅನಿಲ್ ಅವರಿಂದ 1.50 ಲಕ್ಷ ರೂ. ಮತ್ತು ಇತರ ಸಾರ್ವಜನಿಕರಾದ ದಿಶಾ ಡಿ. ನಾಯಕ್ ಅವರಿಂದ 1.50 ಲಕ್ಷ ರೂ., ಸುನೀಲ್ ಎಂಬವರಿಂದ 50 ಸಾವಿರ ರೂ., ವೇದಾ ಅವರಿಂದ 1 ಲಕ್ಷ ರೂ., ಸ್ವಾತಿ ಎಂ. 4.50 ಲಕ್ಷ ರೂ., ನರೇಂದ್ರ ಶೆಟ್ಟಿ 5 ಲಕ್ಷ ರೂ., ವೀಣಾ ನಾಯಕ್ 1 ಲಕ್ಷ ರೂ., ಮಹೇಶ್ ಮೇಸ್ತ 1 ಲಕ್ಷ ರೂ., ಕಾರ್ತಿಕ್ 1 ಲಕ್ಷ ರೂ., ಲೀಲಾವತಿ 2 ಲಕ್ಷ ರೂ., ನಿತ್ಯಾನಂದ ಮೇಸ್ತ 1.50 ಲಕ್ಷ ರೂ. ಹೀಗೆ ಒಟ್ಟು 20.50 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Emotions: ಭಾವನೆಗಳ ಬಸ್ ನಿಲ್ದಾಣ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.