ಮದುವೆ ಆಗುವುದಾಗಿ ನಂಬಿಸಿ ವಂಚನೆ: ಶಿಕ್ಷೆ
Team Udayavani, Oct 12, 2019, 3:39 AM IST
ಮಂಗಳೂರು: ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿ ವಂಚಿಸಿದ ಪ್ರಕರಣದಲ್ಲಿ ಶಕ್ತಿನಗರದ ಕುಂಟಲ್ಪಾಡಿಯ ಜಿ. ಗಣೇಶ್ ಕುಮಾರ್ (34) ಎಂಬಾತನಿಗೆ 7 ವರ್ಷ ಸಜೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ತೀರ್ಪು ನೀಡಿದ್ದಾರೆ.
ಶಿಕ್ಷೆಯ ವಿವರ: ಆರೋಪಿಗೆ ಐಪಿಸಿ 376(ಅತ್ಯಾಚಾರ) ಅನ್ವಯ 7 ವರ್ಷ ಸಜೆ ಮತ್ತು 5,000 ರೂ. ದಂಡ, ಐಪಿಸಿ 417 (ವಂಚನೆ) ಅನ್ವಯ 6 ತಿಂಗಳು ಸಜೆ, ಐಪಿಸಿ 506 (ಬೆದರಿಕೆ) ಪ್ರಕಾರ 6 ತಿಂಗಳು ಸಜೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ 6 ತಿಂಗಳು ಸಜೆ ಮತ್ತು 2,500 ರೂ. ದಂಡ ವಿಧಿಸಲಾ ಗಿದೆ. ದಂಡ ನೀಡದಿದ್ದಲ್ಲಿ 1 ತಿಂಗಳು ಸಾದಾ ಸಜೆ ಅನುಭವಿಸಬೇಕು.
ಪ್ರಕರಣದ ವಿವರ: ಗಣೇಶ್ ಕುಮಾರ್ ನಗರದಲ್ಲಿ ಕಂಟ್ರಾಕುrದಾರನಾಗಿದ್ದು, ಆತನಿಗೆ ಮನೆ ಕೆಲಸ ಮಾಡುತ್ತಿದ್ದ ಹಾಸನ ಮೂಲದ ಯುವತಿ ಜತೆ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ 2010ರಿಂದ 2013ರ ವರೆಗೆ ಇಬ್ಬರೂ ಅನ್ಯೋನ್ಯವಾಗಿದ್ದರು. ಯುವಕ ಮದುವೆಯಾಗುವುದಾಗಿ ನಂಬಿಸಿ ನಗರದ ಕೆಲವು ಲಾಡ್ಜ್ ಗಳಿಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಈಕೆ ಮದುವೆಯಾಗಲು ಒತ್ತಾಯಿಸಿದ್ದಳು. ಆಗ ಗಣೇಶ್ ಜಾತಿಯ ಪ್ರಸ್ತಾಪ ಮಾಡಿ ಜಾತಿ ನಿಂದನೆ ಮಾಡಿದ್ದ. ಬಳಿಕ ಯುವತಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ರಾಜಿ ಸಂಧಾನಕ್ಕೆ ಪ್ರಯತ್ನ: ಪೊಲೀಸ್ ಠಾಣೆಗೆ ದೂರು ನೀಡಿದಾಗ ಹೆೆದರಿದ ಗಣೇಶ್ ಕೂಡಲೇ ರಾಜಿ ಸಂಧಾನಕ್ಕೆ ಮುಂದಾಗಿ ಮದುವೆಯಾಗುವ ಭರವಸೆ ಕೊಟ್ಟಿದ್ದ. ಇದಕ್ಕಾಗಿ ಸಿದ್ಧತೆ ಕೂಡ ಮಾಡಲಾಗಿತ್ತು. ಆದರೆ ಮದುವೆ ದಿನ ಆತ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ 2014 ಮಾ. 19ರಂದು ಯುವತಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಣೇಶ್ ವಿರುದ್ಧ ಅತ್ಯಾಚಾರ, ಮೋಸ, ದೌರ್ಜನ್ಯ ದೂರು ದಾಖಲಿಸಿದ್ದಳು.
ನಗರದ ಕೇಂದ್ರ ವಿಭಾಗದ ಎಸಿಪಿ ಪೊಲೀಸ್ ಆಯುಕ್ತ ತಿಲಕ್‌ಚಂದ್ರ ಪ್ರಾರಂಭಿಕ ತನಿಖೆ ನಡೆಸಿ, ಬಳಿಕ ಬಂದ ಎಸಿಪಿ ಸದಾನಂದ ವರ್ಣೇಕರ್ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿ ತನಗೆ ಲೈಂಗಿಕ ಸಂಪರ್ಕ ಮಾಡುವ ಸಾಮರ್ಥ್ಯ ಇಲ್ಲ ಎಂದು ವಾದಿಸಿದ್ದರೂ ಸಾಬೀತು ಮಾಡಲಾಗಿಲ್ಲ. ಆತ ತನ್ನ ಸ್ನೇಹಿತರಲ್ಲೂ “ಈಕೆ ನನ್ನನ್ನು ಮದುವೆಯಾಗುವವಳು’ ಎಂದು ಪರಿಚಯಿಸಿದ್ದು, ಈ ಸ್ನೇಹಿತರು ಮತ್ತು ಲಾಡ್ಜ್ನ ಮ್ಯಾನೇಜರ್ ಸಹಿತ ಒಟ್ಟು 28 ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿತ್ತು. ಈ ಪೈಕಿ 18 ಮಂದಿ ಸಾಕ್ಷಿ ನುಡಿದಿದ್ದಾರೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ. ಶೇಖರ್ ಶೆಟ್ಟಿ ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.