ಸಿಬಂದಿ ನೇಮಕ ಆಗಿಲ್ಲ ; ಡಿ.ಟಿ. ಪ್ರಭಾರ!
Team Udayavani, Jul 29, 2018, 10:36 AM IST
ವೇಣೂರು: ಬಾಡಿಗೆ ಕೋಣೆಯಲ್ಲಿ 1987ರಲ್ಲಿ ಪ್ರಾರಂಭಗೊಂಡ ನಾಡಕಚೇರಿಗೆ ಇನ್ನೂ ಸ್ವಂತ ಕಟ್ಟಡ ಭಾಗ್ಯ ಒದಗಿಬಂದಿಲ್ಲ. ಸರಿಸುಮಾರು 31 ವರ್ಷಗಳಿಂದ ಬಾಡಿಗೆ ಕೋಣೆ ಯಲ್ಲೇ ದಿನ ಕಳೆಯುತ್ತಿದೆ. ಇಲ್ಲಿನ ಕಂದಾಯ ನಿರೀಕ್ಷಕರೇ ಉಪ ತಹಶೀಲ್ದಾರರ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ. ಒಬ್ಬನೇ ಗ್ರಾಮ ಸಹಾಯಕ ಇಡೀ ಕಚೇರಿ ಕೆಲಸವನ್ನು ನಿರ್ವಹಿಸುತ್ತಿದ್ದು, ಅವರು ರಜೆ ಮಾಡಿದರೆ ಆ ದಿನ ಕಚೇರಿ ಬಂದ್!
ಮಾಸಾಶನಗಳು, ತಕರಾರು ಕೊಟೇಶನ್, ಜಾತಿ- ಆದಾಯ ಪ್ರಮಾಣ ಪತ್ರ, ಜನನ- ಮರಣ ಪ್ರಮಾಣ ಪತ್ರಗಳ ಸಹಿತ ಪ್ರಾಕೃತಿಕ ವಿಕೋಪದಡಿ ಪರಿಹಾರ ಹೀಗೆ ಹತ್ತಾರು ಸಮಸ್ಯೆಗಳನ್ನು ಹೋಬಳಿ ಮಟ್ಟದ ಜನರು ಹೊತ್ತು ತರುತ್ತಿದ್ದು, ನಾಡಕಚೇರಿಯ ಅವ್ಯವಸ್ಥೆಯಿಂದಾಗಿ ಜನತೆ ಸಮರ್ಪಕ ಸೇವೆಯಿಂದ ವಂಚಿತರಾಗಿದ್ದಾರೆ.
ಸಿಬಂದಿ ನೇಮಕ ಆಗಿಲ್ಲ
ವೇಣೂರು ಹೋಬಳಿಗೆ ಇರಬೇಕಾದ ಉಪತಹಶೀಲ್ದಾರರು, ಕ್ಲರ್ಕ್, ಬೆರಳಚ್ಚುಗಾರ, ಡಿ ದರ್ಜೆ ನೌಕರ ಹುದ್ದೆಯ ನೇಮಕವೇ ಆಗಿಲ್ಲ. ನಾಡ ಕಚೇರಿ ಯಲ್ಲಿ ಮೂವರು ನೌಕರರು ಮಾಡುವ ಕೆಲಸಗಳನ್ನು ಗ್ರಾಮ ಸಹಾಯಕರೊಬ್ಬರೇ ಮಾಡಿ ಇಡೀ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಈಗಾಗಿ ನಾಡಕಚೇರಿಯಲ್ಲಿ ಜನತೆ ತಮ್ಮ ಸೌಲಭ್ಯ ಪಡೆದುಕೊಳ್ಳಲು ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ.
ಕಡತ ಶೇಖರಣೆಯೇ ಕಷ್ಟ
ಬಾಡಿಗೆ ಕೋಣೆಯಲ್ಲಿರುವ ನಾಡಕಚೇರಿಯ ಮಹಡಿ ಸೋರುತ್ತಿದೆ. ಬೆಳ್ತಂಗಡಿ ತಾಲೂಕಿಗೆ 3 ಹೋಬಳಿಗಳಿವೆ. ವೇಣೂರು ಹೋಬಳಿ ಮಟ್ಟದ 29 ಗ್ರಾಮಗಳ ಫಲಾನುಭವಿಗಳ ಅಮೂಲ್ಯ ಕಡತಗಳಿದ್ದು, ಅದನ್ನು ಶೇಖರಿಸಿಡುವುದೇ ಸಿಬಂದಿಗೆ ತಲೆ ನೋವಾಗಿದೆ.
ಜಾಗವಿದ್ದರೂ ಕಟ್ಟಡವಿಲ್ಲ
ವೇಣೂರು ಕಂದಾಯ ನಿರೀಕ್ಷಕರ ಕಚೇರಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದಾಗ ದುರಸ್ತಿ ಕಾರ್ಯ ಮಾಡುವ ಬದಲು 2004ರಲ್ಲಿ ಅದನ್ನು ನಾಡಕಚೇರಿಯ ಬಾಡಿಗೆ ಕೋಣೆಗೆ ಸ್ಥಳಾಂತರ ಮಾಡಲಾಗಿದೆ. ನಾಡಕಚೇರಿಗೆ ಸಂಬಂಧಿಸಿ 40 ಸೆಂಟ್ಸ್ ಜಾಗ ಇದ್ದು, ಸುಸಜ್ಜಿತ ಕಟ್ಟಡ ನಿರ್ಮಾಣ ಆಗಬೇಕೆಂಬ ಬೇಡಿಕೆ ಸಾರ್ವಜನಿಕರದ್ದು.
ಸರಕಾರಕ್ಕೆಪ್ರಸ್ತಾವನೆ
1998ರಲ್ಲಿ ಗುರುಪ್ರಸಾದ್ ಕಂದಾಯ ನಿರೀಕ್ಷಕರಿದ್ದಾಗ ಹಾಗೂ 2013ರಲ್ಲಿ ಎನ್. ರಾಜು ಅವರು ಪ್ರಭಾರ ಉಪತಹಶೀಲ್ದಾರ್ ಆಗಿದ್ದಾಗ ಸ್ವಂತ ಕಟ್ಟಡಕ್ಕೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಆದರೆ ಪ್ರಸ್ತಾವನೆ ಈ ವರೆಗೆ ಅನುಮೋದನೆಗೊಳ್ಳಲೇ ಇಲ್ಲ.
ಸರಕಾರ ಗಮನ ಹರಿಸಿಲ್ಲ
ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಅಧಿಕಾರಿ-ಸಿಬಂದಿಯ ಹುದ್ದೆ ಖಾಲಿ ಇರುವ ಬಗ್ಗೆ ಸರಕಾರ ಈ ವರೆಗೆ ಗಮನಹರಿಸಿಲ್ಲ. ಅಧಿಕಾರಿಗಳ ನೇಮಕ ಸರಕಾರದ ಮಟ್ಟದಲ್ಲಿ ನಡೆಯುವುದು. ಈ ಬಗ್ಗೆ ನನ್ನಿಂದಾದ ಪ್ರಯತ್ನ ಮಾಡುತ್ತೇನೆ.
– ಹರೀಶ್ ಪೂಂಜ
ಶಾಸಕರು
ಪದ್ಮನಾಭ ವೇಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.