ಭಜನೆಯಿಂದ ನವಭಾರತಕ್ಕೆ ನಾಂದಿ: ಡಾ| ಪಾರ್ಥಸಾರಥಿ


Team Udayavani, Sep 18, 2017, 8:05 AM IST

partha-sarati.jpg

ಬೆಳ್ತಂಗಡಿ: ಪಂಚತಾರಾ ಸಂಸ್ಕೃತಿಯ ನವಭಾರತ ನಿರ್ಮಾಣಕ್ಕಿಂತ ಸನಾತನ, ಸುಸಂಸ್ಕೃತ ಸಮುದಾಯಗಳುಳ್ಳ, ಚಟುವಟಿಕೆಗಳ ಗ್ರಾಮಗಳಿರುವ, ಲವಲವಿಕೆಯ ಶುಚಿತ್ವದ ಸಚ್ಚಾರಿತ್ರÂದ ಜನರನ್ನು ಸೃಷ್ಟಿ ಮಾಡುವ ಕ್ರಾಂತಿಕಾರಿ ಪುರುಷ ಡಾ| ವೀರೇಂದ್ರ ಹೆಗ್ಗಡೆಯವರಿಂದ ಭಜನ ಸಂಸ್ಕೃತಿಯ ಮೂಲಕ ನವಭಾರತ ನಿರ್ಮಾಣಕ್ಕೆ ನಾಂದಿ ಹಾಡುವ ಕಾರ್ಯ ನಡೆದಿದೆ ಎಂದು ಬೆಂಗಳೂರಿನ ವಿದ್ವಾಂಸ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದರು.

ಅವರು ರವಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ ವತಿಯಿಂದ ನಡೆದ 19ನೇ ವರ್ಷದ ಭಜನ ತರಬೇತಿ ಕಮ್ಮಟದ ಸಮಾರೋಪ ಹಾಗೂ ಭಜನೋತ್ಸವದಲ್ಲಿ ಮಾತನಾಡಿದರು.

ಧರ್ಮಶ್ರದ್ಧೆಯ ಭಾರತ
ನಾವಿರುವಲ್ಲಿಗೆ ಭಗವಂತನನ್ನು ಒಲಿಸಿಕೊಳ್ಳುವುದು ಭಜನೆ ಸಂಸ್ಕೃತಿಯ ವಿಶೇಷ. ಭಜನೆ ಮಾಡುವವರಿಗೆ ಶಿಸ್ತು, ಕ್ರಿಯಾಶೀಲ ಗುಣ, ಕಾರ್ಯಕ್ಷಮತೆ, ಕೌಶಲ ಇರುತ್ತದೆ. ಮನುಷ್ಯರನ್ನು ಪ್ರೀತಿಸುವಾಗ ಕಾಮನೆ ಇರುತ್ತದೆ. ಆದರೆ ನಿಷ್ಕಾಮದಿಂದ ಭಗವಂತನನ್ನು ಪ್ರೀತಿಸಿದರೆ ಆತನ ಒಲುಮೆ ದೊರೆಯಬಲ್ಲದು. ಧರ್ಮಶ್ರದ್ಧೆಯ ಭಾರತವನ್ನು, ಭಕ್ತಿ ಸಂಸ್ಕೃತಿಯ ಭಾರತವನ್ನು, ದೈವಭಕ್ತಿಯ ಅನಾವರಣವನ್ನು, ಹಳ್ಳಿಗಳಲ್ಲಿ ಪರಮಾತ್ಮನ ನಾಮಸ್ಮರಣೆಯನ್ನು ಕೇಳುವಂತೆ ಮಾಡುವುದೇ ಇಂತಹ ಕಮ್ಮಟಗಳ ಉದ್ದೇಶ. ಭಕ್ತಿ ಎಂದರೆ ಅಂತರಗಂಗೆ. ಇದು ಜಲಪಾತವಾದರೆ ಭಜನೆ ಎಂದರು.

ಉದ್ಯೋಗ ಸೃಷ್ಟಿ
ಸಕ್ಕರೆ ಮತ್ತು ಸಣ್ಣ ಕೈಗಾರಿಕಾ ಸಚಿವೆ ಡಾ| ಎಂ.ಸಿ. ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್‌) ಅವರು ಭಕ್ತಿಯ ಆರಾಧನೆಗೆ ಇಡಿಯ ಧರ್ಮಸ್ಥಳ ತೆರೆದುಕೊಂಡಿದೆ ಎಂದು ಹೇಳಿ, ದ.ಕ. ಜಿಲ್ಲೆಯಲ್ಲಿ 16 ಸಣ್ಣ ಕೈಗಾರಿಕೆಗಳು, 11 ದೊಡ್ಡ ಕೈಗಾರಿಕೆಗಳು, 1 ಐಟಿ ಇಂಡಸ್ಟ್ರಿ, 1 ಮಲ್ಟಿ ಪ್ರಾಡಕ್ಟ್ ಇಂಡಸ್ಟ್ರಿ ಇದೆ. ಮುಂದೆ ಸಣ್ಣ ಕೈಗಾರಿಕೆಗಳನ್ನು ಹೆಚ್ಚಿಸುವ ಮೂಲಕ ಸ್ಥಳೀಯ ಸಂಪನ್ಮೂಲ ಬಳಕೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದರು.

ಭಗವಂತನ ದಾಸರಾಗಿ
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಭೋಗ ಜೀವನ ಯೋಗ ಜೀವನ ಎಂಬೆರಡು ವಿಧಾನಗಳಿದ್ದು ಬದುಕಿನಲ್ಲಿ ಸಂತೋಷ,ತೃಪ್ತಿ, ನೆಮ್ಮದಿ ಧನ್ಯತೆಗೆ ಭೋಗ ಜೀವನ ಬೇಕು. ಆದರೆ ಭೋಗದ ದಾಸ
ರಾಗದೇ ನಮ್ಮತನ ಕಳೆದುಕೊಳ್ಳದೇ ಹಿಡಿತದಲ್ಲಿಟ್ಟು ಬದುಕಬೇಕು. ಬಾಹ್ಯಾ ಕರ್ಷಣೆಗಳಿಗೆ ನಿಯಂತ್ರಣ ಹೇರಬೇಕು. ಭೋಗದ ದಾಸರಾಗದೇ ಭಗವಂತನ ದಾಸರಾಗಿ ಮನಸ್ಸಿನ ಮಾಲಿನ್ಯ ದೂರ ಮಾಡಬೇಕು ಎಂದರು.

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌,
ಸುಪ್ರಿಯಾ ಎಚ್‌. ಕುಮಾರ್‌, ಸಮಿತಿಯ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಬಿ. ಜಯರಾಮ ನೆಲ್ಲಿತ್ತಾಯ, ಡಾ| ಐ. ಶಶಿಕಾಂತ್‌ ಜೈನ್‌ ಉಪಸ್ಥಿತರಿದ್ದರು. ಕುಣಿತ ಭಜನೆ ಹಾಗೂ ಕುಳಿತು ಭಜನೆಯ ಪ್ರಾತ್ಯಕ್ಷಿಕೆ ನಡೆಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿ, ಕಾರ್ಯದರ್ಶಿ ಮಮತಾ ರಾವ್‌ ವರದಿ ವಾಚಿಸಿದರು. ವೀರು ಶೆಟ್ಟಿ ವಂದಿಸಿದರು. ಶ್ರೀನಿವಾಸ ರಾವ್‌, ಪ್ರದೀಪ್‌ ನಿರ್ವಹಿಸಿದರು.

ಭಜನೋತ್ಸವ
300 ಭಜನ ಮಂಡಳಿಗಳ 5,000 ಭಜಕರಿಂದ ಭಜನೋತ್ಸವ ನಡೆಯಿತು. ಈ ಬಾರಿ 13 ಜಿಲ್ಲೆಗಳ 115 ಮಂಡಳಿಗಳ 208 ಮಂದಿ ತರಬೇತಿಗೆ ಆಗಮಿಸಿದ್ದರು. ಶಂಕರ್‌ ಶ್ಯಾನುಭಾಗ್‌ ಬೆಂಗಳೂರು, ಬಿ.ಕೆ. ಸುಮಿತ್ರಾ ಬೆಂಗಳೂರು, ರಾಮಕೃಷ್ಣ ಕಾಟುಕುಕ್ಕೆ ಕಾಸರಗೋಡು, ಉಷಾ ಹೆಬ್ಟಾರ್‌ ಮಣಿಪಾಲ, ಮನೋರಮಾ ತೋಳ್ಪಾಡಿತ್ತಾಯ ಧರ್ಮಸ್ಥಳ, ದೇವದಾಸ ಪ್ರಭು ಬಂಟ್ವಾಳ, ಮೋಹನದಾಸ ಶೆಣೆೈ ಮಂಗಳೂರು, ಮಂಗಲದಾಸ್‌ ಗುಲ್ವಾಡಿ ಮಂಗಳೂರು, ಈರಪ್ಪ ಕೆ. ಪತ್ತಾರ್‌ ಬೈಲಹೊಂಗಲ, ರಮೇಶ್‌ ಕಲ್ಮಾಡಿ, ಶಂಕರ್‌ ಉಡುಪಿ ತರಬೇತಿ ನೀಡಿದ್ದರು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.