ಸ್ವಚ್ಛ ಭಾರತಕ್ಕೆ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರ: ಹರೀಶ್
Team Udayavani, Jan 10, 2018, 11:39 AM IST
ಮೂಲ್ಕಿ : ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕಲ್ಪನೆಯು ಕನಸು ನಿಜವಾಗುವಲ್ಲಿ ದೇಶದ ಮಾಹಾನ್ ಯುವ ಶಕ್ತಿ ಅದರಲ್ಲೂ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಹಕಾರ ನೀಡಿದರೆ ಯಾವುದೇ ಶ್ರಮ ರಹಿತವಾಗಿ ಪರಿಪೂರ್ಣಗೊಳಿಸಲು ಸಾಧ್ಯವಾದೀತು ಎಂದು ಮೂಲ್ಕಿ ಸಮಾಜ ಸೇವಾಕರ್ತ ಹರೀಶ್ ಅಮೀನ್ ಹೇಳಿದರು.
ಅವರು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ನಡೆದ ನಗರ ಸ್ವಚ್ಛತಾ ಅಂದೋಲನದಲ್ಲಿ ನಾವೇನು ಮಾಡಬಹುದು ಎಂಬ ವಿಚಾರದಲ್ಲಿ ಮಾತನಾಡಿದರು. ನಮ್ಮ ಪರಿಸರ ಮತ್ತು ಮುಂದಿನ ಪೀಳಿಗೆಯ ರಕ್ಷಣೆಯ ಕೆಲಸಕ್ಕಾಗಿ ನಾವು ನಮ್ಮ ಮನೆಯಿಂದ ಸ್ವಚ್ಛತೆಯ ಪಾಠವಾನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ವಿಜಯ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ನಾರಾಯಣ ಪೂಜಾರಿ ಮಾತನಾಡಿ, ಮನೆಯಿಂದ ಮೊದಲು ನಾವು ಸ್ವಚ್ಛತೆಯನ್ನು ಹುಟ್ಟು ಹಾಕಿ ನಮ್ಮ ಪರಿಸರವನ್ನು ಉಳಿಸುವ ಕೆಲಸದಲ್ಲಿ ಹಿರಿಯರಿಗೆ ಪರಿಪೂರ್ಣ ಮಾಹಿತಿಯಿತ್ತು ಶ್ರಮಿಸುವ ಮೂಲಕ ಯಶಸ್ಸು ಕಾಣಬೇಕಾಗಿದೆ ಎಂದು ಹೇಳಿದರು. ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರೊ| ವೆಂಕಟೇಶ ಭಟ್ ಮಾತನಾಡಿ, ವಿದ್ಯಾರ್ಥಿಗಳು ಈ ಯೋಜನೆಯ ಮೂಲಕ ಮಾಡುವ ಹೆಚ್ಚಿನ ಕೆಲಸಗಳು ಸಮಾಜಮುಖೀಯಾಗಿ ನಡೆಯುತ್ತದೆ. ಘಟಕದ ಕಾರ್ಯದರ್ಶಿ ಶಿಲ್ಪಾ ಸ್ವಾಗತಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.