ಜಿ.ಪಂ. ಸಿಇಒ ಒಪ್ಪಿಗೆ ಮೇರೆಗೆ ಅನುದಾನ: ವಸತಿ ಸಚಿವ
ವಸತಿ ಯೋಜನೆ ಅವ್ಯವಹಾರ ತಡೆಗೆ ಹೊಸ ಕ್ರಮ
Team Udayavani, Jan 9, 2020, 5:26 AM IST
ಮಂಗಳೂರು: ವಸತಿ ಯೋಜನೆಗಳಲ್ಲಿ ಅವ್ಯಹಾರ ಆಗದಂತೆ ತಡೆಯುವ ಸಲುವಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಒಪ್ಪಿಗೆ ನೀಡಿದ ಮನೆಗ ಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ವಸತಿ ಸಚಿವ ವಿ. ಸೋಮಣ್ಣ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಾ.ಪಂ. ಇಒಗಳು, ಪಿಡಿಒಗಳು, ಸ್ಥಳೀಯ ಶಾಸಕರು ಸೇರಿ ಹಂಚಿಕೆಯಾದ ಮನೆಗಳನ್ನು ಪರಿಶೀಲಿಸಿ ಅವರಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಜಿ.ಪಂ. ಸಿಇಒಗೆ ಕಳುಹಿಸಲು ನಿರ್ದೇಶಿಸಲಾಗಿದೆ. ಸಿಇಒ ಒಪ್ಪಿಗೆ ದೊರೆತ ಮನೆಗಳಿಗೆ ಅನುದಾನ ನೀಡಲಾಗುವುದು. ಮುಂದಿನ 15 ದಿನಗಳೊಳಗೆ ಈ ಪ್ರಕ್ರಿಯೆ ನಡೆಯಬೇಕು ಎಂದು ಸೂಚನೆ ನೀಡಿರುವುದಾಗಿ ಹೇಳಿದರು.
ಹಿಂದಿನ ಸರಕಾರದ ಯೋಜನೆಗಳಿಗೆ ತಡೆ
ವಸತಿ ಯೋಜನೆಯಲ್ಲಿ ಹಲವೆಡೆ ಅವ್ಯವಹಾರ ನಡೆದಿರುವುದು ಗೊತ್ತಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಹಂಚಿಕೆ ಮಾಡಲಾದ ಹಲವು ವಸತಿ ಯೋಜನೆಗಳಿಗೆ ನೀಡಬೇಕಾಗಿದ್ದ ಅನುದಾನಕ್ಕೆ ತಡೆ ನೀಡಲಾಗಿದೆ. ದಾಖಲೆ ಪ್ರಕಾರ ಕಳೆದ ಐದಾರು ವರ್ಷಗಳಲ್ಲಿ 45 ಲಕ್ಷ ಮನೆಗಳಿಗೆ ಹಣ ವಿತರಣೆಯಾಗಿದೆ ಎನ್ನುತ್ತದೆ. ಆದರೆ ಇಷ್ಟೊಂದು ಮನೆಗಳನ್ನು ನಿರ್ಮಿಸಲು ಹೇಗೆ ಸಾಧ್ಯ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ವಿವರಿಸಿದರು.
ವಸತಿ ಯೋಜನೆಗೆ ಆ್ಯಪ್
ಮನೆ ಹಂಚಿಕೆಯಾದ ಪ್ರದೇಶ, ಅವುಗಳ ನಿರ್ಮಾಣ ಹಂತ ಸೇರಿದಂತೆ ಪ್ರತಿಯೊಂದನ್ನು ತಿಳಿಯುವ ನಿಟ್ಟಿನಲ್ಲಿ ವಸತಿ ಯೋಜನೆಯನ್ನು ಆ್ಯಪ್ ಮೂಲಕ ನಿರ್ವಹಿಸುವ ಉದ್ದೇಶವಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಅನುಷ್ಠಾನದ ಜವಾಬ್ದಾರಿಯನ್ನು ನಗರಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಗ್ರಾಮಾಂತರದಲ್ಲಿ ಜಿ.ಪಂ. ಸಿಇಒಗೆ ವಹಿಸಲು ನಿರ್ಧರಿಸಲಾಗಿದೆ ಎಂದರು.
2.50 ಲಕ್ಷ ರೂ.ಗಳಿಗೆ ಬೇಡಿಕೆ
ಪ್ರಸ್ತುತ ವಿವಿಧ ವಸತಿ ಯೋಜನೆಗಳಿಗೆ ರಾಜ್ಯದ 70 ಸಾವಿರ ರೂ. ಹಾಗೂ ಕೇಂದ್ರದ 50 ಸಾವಿರ ರೂ. ಸೇರಿ ಒಟ್ಟು 1.20 ಲಕ್ಷ ರೂ. ನೀಡಲಾಗುತ್ತಿದೆ. ಆದರೆ ಮನೆ ನಿರ್ಮಾಣಕ್ಕೆ ಈ ಮೊತ್ತ ಸಾಲದು ಎಂಬುದನ್ನು ಮನಗಂಡು ಪ್ರತಿ ಮನೆಗಳಿಗೆ ಕನಿಷ್ಠ 2.5 ಲಕ್ಷ ರೂ. ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು. ಈಗ ನಾಲ್ಕು ಕಂತುಗಳಲ್ಲಿ ಬಿಡು ಗಡೆಯಾಗುವ ಹಣವನ್ನು ಎರಡು ಕಂತುಗಳಿಗೆ ಇಳಿ ಸುವ ಉದ್ದೇಶವಿದೆ ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.