ವಾರದಲ್ಲಿ ಅನುಮೋದನೆ; ಜನವರಿಯಿಂದ ಕಾಮಗಾರಿ ಸಾಧ್ಯತೆ
Team Udayavani, Dec 6, 2018, 10:47 AM IST
ಬೆಳ್ತಂಗಡಿ: ತೀರಾ ಹಳೆಯದಾದ ಬೆಳ್ತಂಗಡಿ ತಾ.ಪಂ.ಗೆ ನೂತನ ಕಟ್ಟಡ ನಿರ್ಮಾಣಕ್ಕೆ ಕಾಲ ಸನ್ನಿಹಿತವಾಗಿದ್ದು, ತಾಂತ್ರಿಕ ಮಂಜೂರಾತಿ ಬಳಿಕ ಟೆಂಡರ್ ಪ್ರಕ್ರಿಯೆ ಸುಸೂತ್ರವಾಗಿ ನಡೆದರೆ ಜನವರಿ ತಿಂಗಳ ಮಧ್ಯದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಒಟ್ಟು 3.50 ಕೋ. ರೂ. ಅನುದಾನದಲ್ಲಿ ‘ಜಿ ಪ್ಲಸ್ ಟು’ (ಎರಡು ಅಂತಸ್ತು) ಕಟ್ಟಡ ನಿರ್ಮಾಣಗೊಳ್ಳಲಿದೆ.
ತಾ.ಪಂ.ನ ಹಾಲಿ ಕಟ್ಟಡವು ಶಿಥಿಲಾ ವಸ್ಥೆಯಲ್ಲಿರುವ ಜತೆಗೆ ಜಾಗದ ಕೊರತೆಯೂ ಅಲ್ಲಿದೆ. ಮಧ್ಯದಲ್ಲಿ ಹಳೆಯ ಕಟ್ಟಡವೊಂದಿದ್ದು, ಬಳಿಕ ಅದಕ್ಕೆ ಸಣ್ಣ ಸಣ್ಣ ಕಟ್ಟಡಗಳನ್ನು ಸೇರಿಸಲಾಗಿದ್ದು, ಒಟ್ಟಿನಲ್ಲಿ ಅದು ವ್ಯವಸ್ಥಿತ ಕಟ್ಟಡದಂತಿಲ್ಲ. ಹೀಗಾಗಿ ಒಂದು ಸುಸಜ್ಜಿತ ಕಟ್ಟಡಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಕೇಳಿಬಂದಿತ್ತು.
19 ಸಾವಿರ ಚ. ಅಡಿ
ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದರೂ ತಾಂತ್ರಿಕ ಮಂಜೂರಾತಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ನಿರ್ದಿಷ್ಟವಾಗಿ ಇಂತಿಷ್ಟೇ ಚದರ ಅಡಿ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂಬುದನ್ನು ಈಗಲೇ ಹೇಳುವಂತಿಲ್ಲ. ಆದರೆ ಪ್ರಸ್ತುತ ಸಿದ್ಧಗೊಂಡಿರುವ ಅಂದಾಜು ನಕಾಶೆಯ ಪ್ರಕಾರ ಒಟ್ಟು 19 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಗೊಳ್ಳಲಿದೆ.
ಕಟ್ಟಡದ ನೆಲ ಅಂತಸ್ತಿ ನಲ್ಲಿ 6,500 ಚ. ಅಡಿ, ಮೊದಲ ಮಹಡಿಯಲ್ಲಿ 6,500 ಚ. ಅಡಿ, ಎರಡನೇ ಅಂತಸ್ತಿನಲ್ಲಿ 6,000 ಚ. ಅಡಿ ವಿಸ್ತೀರ್ಣ ಕಟ್ಟಡ ನಿರ್ಮಾಣಗೊಳ್ಳಲಿದೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಪ್ರತ್ಯೇಕ ಕೊಠಡಿ ಹಾಗೂ ವೀಡಿಯೋ ಕಾನ್ಫರೆನ್ಸ್ ಕೊಠಡಿ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷರಿಗೆ ಪ್ರತ್ಯೇಕ ಕೊಠಡಿಗಳು ನಿರ್ಮಾಣಗೊಳ್ಳಲಿವೆ. ಜತೆಗೆ ಸದಸ್ಯರ ಚೇಂಬರ್ ಸಹಿತ ಹಾಲಿ ತಾ.ಪಂ.ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಗಳು ಹೊಸ ಕಟ್ಟಡದಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರದಲ್ಲಿ ಅನುಮೋದನೆ
ಕಟ್ಟಡಕ್ಕೆ ಅನುದಾನ ಮಂಜೂರಾಗಿದ್ದರೂ ತಾಂತ್ರಿಕ ಅನುಮೋದನೆ ಇನ್ನೂ ಬಾಕಿ ಇದೆ. ಅದರ ಕಡತ ಪ್ರಸ್ತುತ ಬೆಂಗಳೂರಿನಿಂದ ದ.ಕ. ಜಿ.ಪಂ.ಗೆ ಬಂದಿದ್ದು, ಬೆಳ್ತಂಗಡಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‌ಗಳು ಹೇಳುವ ಪ್ರಕಾರ, ವಾರದಲ್ಲಿ ತಾಂತ್ರಿಕ ಅನುಮೋದನೆ ಸಿಗಲಿದೆ. ತಾಂತ್ರಿಕ ಅನುಮೋದನೆ ಬಳಿಕ ಟೆಂಡರ್ ಕರೆಯಲಾಗುತ್ತದೆ. ಸುಮಾರು 40ರಿಂದ 45 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಜನವರಿ ತಿಂಗಳ 15ರ ಸುಮಾರಿಗೆ ನೂತನ ಕಟ್ಟಡದ ಕಾಮಗಾರಿ ಆರಂಭಗೊಳ್ಳಲಿದೆ.
ಸಾಮರ್ಥ್ಯ ಸೌಧಕ್ಕೆ ಶಿಫ್ಟ್
ಹಾಲಿ ತಾ.ಪಂ. ಕಟ್ಟಡ ಇರುವ ಸ್ಥಳದಲ್ಲೇ ಹೊಸ ಕಟ್ಟಡ ನಿರ್ಮಾಣವಾಗುವುದರಿಂದ ಹಳೆ ಕಟ್ಟಡ ಕೆಡವುದು ಅನಿವಾರ್ಯವಾಗಿದೆ. ಹೀಗಾಗಿ ಸುಮಾರು ವರ್ಷಗಳ ಕಾಲ ಬೆಳ್ತಂಗಡಿ ತಾ.ಪಂ. ಸ್ಥಳೀಯ ಸಾಮರ್ಥ್ಯ ಸೌಧ ಕಟ್ಟಡದಲ್ಲಿ ಕಾರ್ಯಾಚರಿಸಲಿದೆ. ಅಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಹೊಸ ಕಟ್ಟಡ ಶೀಘ್ರ ನಿರ್ಮಾಣವಾಗುವ ಸಾಧ್ಯತೆ ಇದೆ.
1 ಕೋಟಿ ರೂ. ಬಿಡುಗಡೆ
ಮಂಜೂರುಗೊಂಡ 3.50 ಕೋ. ಅನುದಾನದಲ್ಲಿ ಈಗಾಗಲೇ 1 ಕೋ. ರೂ. ಬಿಡುಗಡೆಗೊಂಡಿದೆ. ಅದು ಮಾರ್ಚ್ ಒಳಗೆ ಮುಗಿಯಬೇಕಿರುವುದರಿಂದ ಜನವರಿಯಲ್ಲಿ ಕಾಮಗಾರಿ ಆರಂಭಿಸುವುದು ಅನಿವಾರ್ಯವಾಗಿದೆ. ಈ ಅನುದಾನ ಖರ್ಚಾದ ಬಳಿಕ ಮುಂದಿನ ಅನುದಾನ ಬಿಡುಗಡೆಯಾಗಲಿದೆ.
ಶೀಘ್ರದಲ್ಲಿ ತಾಂತ್ರಿಕ ಅನುಮೋದನೆ
ಅನುದಾನ ಮಂಜೂರುಗೊಂಡು ಶೀಘ್ರದಲ್ಲಿ ತಾಂತ್ರಿಕ ಅನುಮೋದನೆ ಸಿಗಲಿದೆ. ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಗೊಂಡು ಜ. 15ರ ಸುಮಾರಿಗೆ ಕಾಮಗಾರಿ ಆರಂಭಿಸಲಿದ್ದೇವೆ. ಪ್ರಸ್ತುತ 1 ಕೋ. ರೂ. ಬಿಡುಗಡೆಗೊಂಡಿದ್ದು, ಮಾರ್ಚ್ ಅಂತ್ಯದಲ್ಲಿ ಅದನ್ನು ಖರ್ಚು ಮಾಡುವುದು ಅನಿವಾರ್ಯವಾಗಿದೆ. ಎಲ್ಲರ ಸಹಕಾರ ಲಭಿಸಿದಲ್ಲಿ ಶೀಘ್ರದಲ್ಲಿ ಹೊಸ ಕಟ್ಟಡದ ಕಾಮಗಾರಿ ಪೂರ್ತಿಗೊಳ್ಳಲಿದೆ.
– ಚೆನ್ನಪ್ಪ ಮೊಯಿಲಿ ಎಇಇ,
ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ, ಬೆಳ್ತಂಗಡಿ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.