ಎಂಸಿಎಫ್‌ಗೆ 2 ತಿಂಗಳೊಳಗೆ ಗೈಲ್ ಗ್ಯಾಸ್!
ರಸಗೊಬ್ಬರ ಉತ್ಪಾದನೆಗೆ ನೈಸರ್ಗಿಕ ಅನಿಲ ಬಳಸಲು ಸಿದ್ಧತೆ
Team Udayavani, Jan 20, 2020, 5:24 AM IST
ಮಹಾನಗರ: ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಮಂಗಳೂರಿನ ಎಂಸಿಎಫ್‌ನಲ್ಲಿ ರಸಗೊಬ್ಬರ ಉತ್ಪಾದನೆಗೆ ನೈಸರ್ಗಿಕ ಅನಿಲ ಬಳಸಲು ಎಲ್ಲ ಸಿದ್ಧತೆ ನಡೆದಿದ್ದು, ಮುಂದಿನ ಎರಡು ತಿಂಗಳೊಳಗೆ ಎಂಸಿಎಫ್‌ಗೆ ಗೈಲ್ ಗ್ಯಾಸ್ ಪೈಪ್‌ಲೈನ್ ಮೂಲಕ ಅನಿಲ ಪೂರೈಕೆಯಾಗುವ ಸಾಧ್ಯತೆಯಿದೆ.
ನಾಫ್ತಾ ಬಳಕೆಗೆ ಕೇಂದ್ರ ಸರಕಾರ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ 2014ರ ಸೆ. 30ರಿಂದ ಎಂಸಿಎಫ್‌ನಲ್ಲಿ ಯೂರಿಯಾ ಮತ್ತಿತರ ರಸಗೊಬ್ಬರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಕೇಂದ್ರ ಸಚಿವರ ಮಧ್ಯಪ್ರವೇಶದಿಂದಾಗಿ ನೈಸರ್ಗಿಕ ಅನಿಲ ಲಭ್ಯವಾಗುವವರೆಗೆ ನಾಫ್ತಾ ಬಳಸಲು ಕೇಂದ್ರ ಸಚಿವ ಸಂಪುಟ ಅದೇ ವರ್ಷದ ಡಿ. 10ರಂದು ಒಪ್ಪಿಗೆ ನೀಡಿತ್ತು. ಅದರಂತೆ ಗೈಲ್ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಇದೀಗ ಅಂತಿಮ ಹಂತದಲ್ಲಿದೆ. ಮಾರ್ಚ್ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸರಕಾರದ ನಿರ್ದೇಶನವೂ ಇದೆ.
ನಾಫ್ತಾ ಬಳಕೆಯಿಂದ ವೆಚ್ಚ ಅಧಿಕ, ಪರಿಸರಕ್ಕೆ ಮಾರಕವಾಗುವ ಕಾರಣದಿಂದ ನೈಸರ್ಗಿಕ ಅನಿಲ ಬಳಸುವುದು ಉದ್ದೇಶ.
ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ನವರತ್ನ ಕಂಪೆನಿ ಗೇಲ್ ಲಿ. ವತಿಯಿಂದ ಕೊಚ್ಚಿಯಿಂದ ಮಂಗಳೂರುವರೆಗೆ ಗೈಲ್ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಆರಂಭಿಸಿತ್ತು. ಸುಮಾರು 450 ಕಿ.ಮೀ. ಉದ್ದದ ಪೈಪ್‌ಲೈನ್‌ನ ಪೈಕಿ ತಮಿಳುನಾಡು-ಕೇರಳದಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ದ.ಕ. ಭಾಗದಲ್ಲಿಯೂ ಕಾಮಗಾರಿ ಇದೀಗ ಕೊನೆಯ ಹಂತದಲ್ಲಿದೆ. ಪ್ರತಿದಿನ ಸುಮಾರು 100ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಗ್ಯಾಸ್ ಮೂಲಕ ರಸಗೊಬ್ಬರ ತಯಾರಿಸಲು ಎಂಸಿಎಫ್‌ನಲ್ಲಿ ಈಗಾಗಲೇ ಯಂತ್ರೋಪಕರಣದಲ್ಲಿ ಪರಿಷ್ಕರಣೆ ಮಾಡಲಾಗಿದೆ. 315 ಕೋ.ರೂ. ವೆಚ್ಚದಲ್ಲಿ ಇದಕ್ಕಾಗಿ ಎಂಸಿಎಫ್‌ನಲ್ಲಿ ಹೊಸ ಕೇಂದ್ರವನ್ನೂ ಸ್ಥಾಪಿಸಲಾಗಿದೆ.
ಕಾಮಗಾರಿ
ಆಗಬೇಕಾದದ್ದು ಎಲ್ಲಿ?
ಜಿಲ್ಲೆಯ ಮಂಗಳೂರು ತಾಲೂಕಿನ ಮಳವೂರು, ಅದ್ಯಪಾಡಿ, ಕಂದಾವರ, ಮೂಳೂರು, ಅಡೂxರು, ಮಲ್ಲೂರು, ಅರ್ಕುಳ, ಪಾವೂರು, ಕೆಂಜಾರು, ತೋಕೂರು, ಬಂಟ್ವಾಳ ತಾಲೂಕಿನ ಮೇರಮಜಲು, ಅಮ್ಮುಂಜೆ, ಪಜೀರು, ಕೈರಂಗಳ, ಬಾಳೆಪುಣಿ, ಕುರ್ನಾಡು ಗ್ರಾಮಗಳ ಮೂಲಕ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಇದೀಗ ಅಂತಿಮ ಹಂತದಲ್ಲಿದೆ.
ಈ ಪೈಕಿ ಬಹುತೇಕ ಕಡೆ ಕಾಮಗಾರಿ ಮುಗಿದಿದ್ದು, ಕಾಸರಗೋಡಿನ ಚಂದ್ರಗಿರಿ ನದಿ, ಫರಂಗಿಪೇಟೆ ಸಮೀಪದಲ್ಲಿ ನೇತ್ರಾ ವತಿ ನದಿಯಲ್ಲಿ ಪೈಪ್‌ಲೈನ್ ಅಳವಡಿಕೆ ಕೆಲವೇ ದಿನಗಳದಲ್ಲಿ ಮುಗಿ ಯಲಿದೆ. ಇನ್ಫೋಸಿಸ್ ಸಮೀಪ, ವಿಮಾನ ನಿಲ್ದಾಣ ಸಮೀಪ, ಪೆಟ್ರೋ ಪೈಪ್‌ಲೈನ್ ಇರುವ ಭಾಗದಲ್ಲಿ ಕಾಮಗಾರಿ ಇದೀಗ ಅಂತಿಮ ಹಂತಸದಲ್ಲಿದೆ. ಹೆದ್ದಾರಿ, ರೈಲ್ವೇ ಟ್ರಾÂಕ್ ಇರುವಲ್ಲಿ ಪೈಪ್‌ಲೈನ್ ಹಾಕುವ ಕಾರ್ಯ ಮುಗಿದಿದೆ.
ರೈತರಿಗೆ ಎಂಸಿಎಫ್ ಯೂರಿಯಾ
ಎಂಸಿಎಫ್ ಸರಾಸರಿ ದಿನಕ್ಕೆ ಸುಮಾರು 1600 ಟನ್ ಯೂರಿಯಾ ಉತ್ಪಾದನೆ ಮಾಡುತ್ತದೆ. 800 ಟನ್‌ನಷ್ಟು ಡಿಎಪಿ ಗೊಬ್ಬರ ಉತ್ಪಾದನೆ ಮಾಡುತ್ತದೆ. 700 ಟನ್‌ನಷ್ಟು ಅಮೋನಿಯಾ ಉತ್ಪಾದನೆ ಯಾಗುತ್ತದೆ. ಕೇಂದ್ರ ರಸಗೊಬ್ಬರ ಸಚಿವಾ ಲಯವು ಎಂಸಿಎಫ್ನಿಂದ ಖರೀದಿಸಿದ ಯೂರಿಯಾವನ್ನು ವಿವಿಧ ರಾಜ್ಯಗಳಿಗೆ ವಿತರಣೆ ಮಾಡುತ್ತದೆ. ಅದರಂತೆ ರಾಜ್ಯದ ಬಹುತೇಕ ಕೃಷಿಕರಿಗೆ ಎಂಸಿಎಫ್ನಿಂದಲೇ ಯೂರಿಯಾ ಪೂರೈಕೆಯಾಗುತ್ತದೆ.
ಮುಂದಿನ ತಿಂಗಳು “ಹೈಡ್ರೋ ಟೆಸ್ಟ್’?
ತಮಿಳುನಾಡು, ಕೇರಳ ಭಾಗದಲ್ಲಿ ಹಾಕಿರುವ ಪೈಪ್‌ಲೈನ್‌ನಲ್ಲಿ ಹೈಡ್ರೋ ಟೆಸ್ಟ್ ನಡೆಸಲಾಗಿದ್ದು, ದ.ಕ. ಜಿಲ್ಲೆಯ ಪೈಪ್‌ಲೈನ್ ಕಾಮಗಾರಿ ಮುಂದಿನ ತಿಂಗಳು ಪೂರ್ಣವಾದ ಬಳಿಕ ಹೈಡ್ರೋ ಟೆಸ್ಟ್ ನಡೆಯಲಿದೆ. ನಿಗದಿತ ಪ್ರಮಾಣದ ನೀರನ್ನು ಹೈಸ್ಪೀಡ್‌ನಲ್ಲಿ ಪೈಪ್‌ಲೈನ್‌ನಲ್ಲಿ ಹಾಕಿ ಪರಿಶೀಲಿಸಲಾಗುತ್ತದೆ. 24 ಗಂಟೆ ಇದನ್ನು ಗಮನಿಸಿದ ಅನಂತರ, ನೀರು ಖಾಲಿ ಮಾಡಲಾಗುತ್ತದೆ. ಬಳಿಕ ತೇವಾಂಶ ಇಲ್ಲದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಬಳಿಕ ಪೈಪ್ ಪರಿಶೀಲನೆ, ಸುರಕ್ಷತಾ ಪರಿಶೀಲನೆಗಾಗಿ ಉತ್ತರಪ್ರದೇಶ ನೋಯ್ಡಾದ ಉನ್ನತ ಅಧಿಕಾರಿಗಳ ತಂಡ ಆಗಮಿಸಲಿದೆ. ಅವರು ಸುರಕ್ಷತಾ ಪ್ರಮಾಣಪತ್ರ ನೀಡಿದ ಅನಂತರ ಎಂಸಿಎಫ್‌ಗೆ ಗ್ಯಾಸ್ ಸಂಪರ್ಕ ಆರಂಭವಾಗಲಿದೆ.
ಸಿಟಿ ಗ್ಯಾಸ್‌ಗೆ ಹಲವು ತಿಂಗಳು ಅಗತ್ಯ
ಎಂಸಿಎಫ್‌ಗೆ ಗೈಲ್ ಗ್ಯಾಸ್ ಪೈಪ್‌ಲೈನ್ ದೊರಕಿದ ಬಳಿಕ ಅನಿಲವನ್ನು ದ.ಕ. ವ್ಯಾಪ್ತಿಯ ಮನೆ ಮನೆಗಳಿಗೆ ನೀಡುವ ಯೋಜನೆಯಿದೆ. ಇದರಂತೆ 100 ಸಿಎನ್‌ಜಿ ಸ್ಟೇಷನ್‌ಗಳು (ನೈಸರ್ಗಿಕ ಅನಿಲ ಸ್ಟೇಷನ್) ಆರಂಭವಾಗಲಿವೆೆ. ಮೊದಲಿಗೆ ನಗರ ವ್ಯಾಪ್ತಿಯಲ್ಲಿ ಜಾರಿ ಯಾಗಲಿದೆ. ಇದಕ್ಕಾಗಿ ಸದ್ಯ ಮನೆ ಮನೆಗೆ ಗೈಲ್ ಗ್ಯಾಸ್‌ನ ಪ್ರತಿನಿಧಿ ಗಳು ಆಗಮಿಸಿ ನೋಂದಣಿ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಎಂಆರ್‌ಪಿಎಲ್ ವ್ಯಾಪ್ತಿಯಲ್ಲಿ ಮನೆ ಮನೆಗೆ ಗ್ಯಾಸ್ ಕೆಲವೇ ತಿಂಗಳಲ್ಲಿ ಪ್ರಾಯೋಗಿಕವಾಗಿ ದೊರೆಯುವ ಸಾಧ್ಯತೆಯಿದೆ. ಅನಂತರ ನಗರದಲ್ಲಿ ಗ್ಯಾಸ್ ಸಂಪರ್ಕ ಆರಂಭವಾಗಲಿದೆ. ನಗರದಲ್ಲಿ ಮತ್ತೆ ಪೈಪ್‌ಲೈನ್ ಮಾಡಲು ಮಾತ್ರ ಹಲವು ತಿಂಗಳು ಬೇಕಾಗಬಹುದು.
ಮೊದಲಿಗೆ ಎಂಸಿಎಫ್‌ಗೆ ಅನಿಲ ಪೂರೈಕೆ
ಗೈಲ್ ಗ್ಯಾಸ್ ಪೈಪ್ ಮೂಲಕ ಮೊದಲು ಎಂಸಿಎಫ್ಗೆ ಅನಿಲ ಪೂರೈಕೆಯಾಗಲಿದೆ. ಬಳಿಕ ಎಸ್‌ಇಝಡ್, ಎಂಆರ್‌ಪಿಎಲ್, ಬಿಎಎಸ್‌ಎಫ್ನಂತಹ ಕಾರ್ಖಾನೆಗಳಿಗೆ ಪಿಎನ್‌ಜಿ ವಿತರಿಸುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಜತೆಗೆ ನಗರದ ಜನವಸತಿ ಪ್ರದೇಶಗಳಿಗೆ ಗ್ಯಾಸ್ ವಿತರಣೆ ನಡೆಯಲಿದೆ.
- ವಿಲೀನ್ ಝುಂಕೆ, ಸಿಜಿಡಿ ಯೋಜನ ಡಿಜಿಎಂ-ಗೈಲ್ ಗ್ಯಾಸ್
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.