ಎಂಆರ್‌ಪಿಎಲ್‌ಗೂ ಸರಬರಾಜಾಗಲಿದೆ ಗೇಲ್ ಗ್ಯಾಸ್
ಮಂಗಳೂರಿಗೆ ಪೈಪ್‌ಲೈನ್‌ನಲ್ಲಿ ಬಂದ ನೈಸರ್ಗಿಕ ಅನಿಲ
Team Udayavani, Nov 23, 2020, 6:12 AM IST
ಮಂಗಳೂರಿನ ಎಂಸಿಎಫ್ ಆವರಣದಲ್ಲಿರುವ ಅನಿಲ ಸ್ವೀಕರಣಾ ಸ್ಥಾವರ.
ಮಂಗಳೂರು: ರಾಜ್ಯವ್ಯಾಪಿ ತೈಲ ಸರಬರಾಜು ಮಾಡುವ ಮಂಗಳೂರಿನ ಎಂಆರ್‌ಪಿಎಲ್‌ಗೂ ಕೇಂದ್ರ ಸರಕಾರದ ಅಧೀನಕ್ಕೆ ಒಳಪಟ್ಟ ನವರತ್ನ ಕಂಪೆನಿಯಾದ ಗೇಲ್ (ಇಂಡಿಯಾ) ಲಿ. ವತಿಯಿಂದ ನೈಸರ್ಗಿಕ ಅನಿಲ ಸರಬರಾಜಾಗಲಿದೆ. ಕೊಚ್ಚಿಯಿಂದ ಪೈಪ್‌ಲೈನ್‌ನಲ್ಲಿ ಬರುವ ನೈಸರ್ಗಿಕ ಅನಿಲವನ್ನು ಸೋಮವಾರ ದಿಂದ ಎಂಸಿಎಫ್ ಸಂಸ್ಥೆಯು ಸ್ವೀಕರಿಸಿದ ಅನಂತರ ಮುಂದಿನ ದಿನಗಳಲ್ಲಿ ಮಂಗಳೂರು- ಉಡುಪಿ ನಗರ ಸೇರಿದಂತೆ ಎಂಆರ್‌ಪಿಎಲ್‌ಗೂ ಪ್ರತ್ಯೇಕ ಪೈಪ್‌ಲೈನ್‌ಗಳಲ್ಲಿ ಸರಬರಾಜಾಗಲಿದೆ.
ಎಂಆರ್‌ಪಿಎಲ್‌ಗೆ ಏಕೆ?
ಎಂಆರ್‌ಪಿಎಲ್‌ನಲ್ಲಿ ಪ್ರತಿದಿನ 2,500 ಟನ್ ಎಲ್‌ಪಿಜಿ ಉತ್ಪಾದನೆಯಾಗಿ ಅಲ್ಲಿಂದಲೇ ರಾಜ್ಯಾದ್ಯಂತ ಅನಿಲ ಸರಬರಾಜು ಆಗುತ್ತಿದೆ. ಜತೆಗೆ ಅಲ್ಲಿನ ಸ್ಥಾವರದ ಬಳಕೆಗಾಗಿ ಕಚ್ಚಾತೈಲದಿಂದ ಗ್ಯಾಸ್ ಉತ್ಪಾದನೆ ಮಾಡಿ “ಫೀಡ್’ (ಸ್ಥಾವರದ ಕಚ್ಚಾ ವಸ್ತು) ಮಾಡಲಾಗುತ್ತಿತ್ತು. ಆದರೆ ನೈಸರ್ಗಿಕ ಅನಿಲ ಲಭಿಸಿದ ಬಳಿಕ ಅನಿಲದಿಂದ ನೇರವಾಗಿ ಫೀಡ್ ಮಾಡಲು ಸಾಧ್ಯ. ಜತೆಗೆ ಎಂಆರ್‌ಪಿಎಲ್‌ನಲ್ಲಿಯೇ ಎಲ್‌ಎಸ್‌ಎಚ್‌ಎಸ್ ಎಣ್ಣೆ ಉಪಯೋಗಿಸಿ ಇಂಧನ ಉತ್ಪಾದಿಸಲಾಗುತ್ತಿತ್ತು. ನೈಸರ್ಗಿಕ ಅನಿಲ ಬಂದ ಮೇಲೆ ಎಣ್ಣೆಯ ಬಳಕೆಯೂ ತಪ್ಪಲಿದೆ. ಹೈಡ್ರೋಜನ್ ಘಟಕ ಸೇರಿದಂತೆ ಸ್ಥಾವರದ ಇತರ ನಿರ್ವಹಣೆಯ ಇಂಧನವಾಗಿಯೂ ನೈಸರ್ಗಿಕ ಅನಿಲ ಬಳಕೆಯಾಗಲಿದೆ.
ಲಾಭವೇನು?
“ಉದಯವಾಣಿ’ಯ ಜತೆಗೆ ಮಾತನಾಡಿದ ಎಂಆರ್‌ಪಿಎಲ್‌ನ ಕಾರ್ಪೊರೇಟ್ ಕಮ್ಯುನಿಕೇಶನ್‌ನ ಜಿಎಂ ರುಡೋಲ್ಫ್ ನೊರೋನ್ಹಾ ಅವರು, “ಎಂಆರ್‌ಪಿಎಲ್ ಸ್ಥಾವರದಲ್ಲಿ ಇಂಧನ ಹಾಗೂ ಫೀಡ್ ಬಳಕೆಗಾಗಿ ನೈಸರ್ಗಿಕ ಅನಿಲವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಗ್ಯಾಸ್ ಬಳಕೆಯಿಂದ ಸಲ#ರ್ ಅಂಶ ಗಣನೀಯ ಪ್ರಮಾಣದಲ್ಲಿ ಕಡಿಮೆ ಯಾಗಿ ಪರಿಸರಕ್ಕೆ ಪೂರಕವಾಗಲಿದೆ. ಆರ್ಥಿಕವಾಗಿಯೂ ನೈಸರ್ಗಿಕ ಅನಿಲ ಲಾಭದಾಯಕವಾಗಲಿದೆ. ಶೀಘ್ರ ಅನಿಲ ಸರಬರಾಜು ಆಗಲಿದೆ ಎಂದರು.
5750 ಕೋ.ರೂ. ವೆಚ್ಚ
ಕೊಚ್ಚಿ-ಮಂಗಳೂರು ಮಧ್ಯೆ ಒಟ್ಟು 444 ಕಿ.ಮೀ. ಉದ್ದದ ಪೈಪ್‌ಲೈನ್‌ನ ಕೆಲಸವನ್ನು 2,915 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಭೂಸ್ವಾಧೀನದಲ್ಲಿ ಆದ ವಿಳಂಬದಿಂದಾಗಿ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಕುಂಠಿತವಾಗಿತ್ತು. ಇದರಿಂದಾಗಿ ಯೋಜನಾ ವೆಚ್ಚವೂ 5,750 ಕೋಟಿ ರೂ.ಗೆ ಏರಿತು.
ಕೊಚ್ಚಿಯಿಂದ 90 ಕಿ.ಮೀ.
ಉತ್ತರಕ್ಕೆ ಕುಟ್ಟನಾಡುವರೆಗೆ 2019ರಲ್ಲೇ ಗ್ಯಾಸ್ ಲಭ್ಯವಾಗಿದ್ದರೆ, 354 ಕಿ.ಮೀ. ದೂರದ ಕಣ್ಣೂರು ವರೆಗೆ ಪೈಪ್‌ಲೈನ್ ಬಳಕೆಗೆ ಸಿದ್ಧ ಗೊಂಡಿದೆ. ಪ್ರಸ್ತುತ ಕೊಚ್ಚಿಯಲ್ಲಿ ವಿತರಣೆ ಮಾಡಲಾಗುತ್ತಿದ್ದು ಅಲ್ಲಿನ ಪ್ರತಿ ದಿನದ ಬೇಡಿಕೆ 3.8 ದಶಲಕ್ಷ ಘನ ಮೀಟರ್ ಆಗಿದೆ.
ಮಂಗಳೂರಿನ ಬೇಡಿಕೆ
ಮಂಗಳೂರಿನಲ್ಲಿ 2.5 ದಶಲಕ್ಷ ಘನ ಮೀಟರ್ ಅನಿಲ ಬೇಡಿಕೆಯ ನಿರೀಕ್ಷೆಯನ್ನು ಗೇಲ್ ಅಧಿಕಾರಿಗಳು ಇರಿಸಿಕೊಂಡಿದ್ದಾರೆ.
ಮಂಗಳೂರಿಗೆ ಬಂತು ಗೈಲ್ ಗ್ಯಾಸ್
ಬಹುನಿರೀಕ್ಷಿತ ನೈಸರ್ಗಿಕ ಅನಿಲ ಮೊದಲ ಬಾರಿಗೆ ರವಿವಾರ ಸಂಜೆಯೇ ಮಂಗಳೂರಿಗೆ ಕೊಚ್ಚಿಯಿಂದ ಪೈಪ್‌ಲೈನ್‌ನಲ್ಲಿ ಸರಬರಾಜಾಗಿದೆ. ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಎಂಸಿಎಫ್ ಸಂಸ್ಥೆಗೆ ಸೋಮವಾರದಿಂದ ಅನಿಲ ಪೂರೈಕೆ ಅಧಿಕೃತವಾಗಿ ಆರಂಭವಾಗುವ ನಿರೀಕ್ಷೆಯಿದೆ. ವಾರದ ಹಿಂದಷ್ಟೇ ಕಾಸರಗೋಡಿನ ಚಂದ್ರಗಿರಿ ನದಿಯಲ್ಲಿ ಕ್ಲಿಷ್ಟಕರವಾಗಿದ್ದ ಪೈಪ್ ಅಳವಡಿಕೆ ಕಾರ್ಯ ಮುಗಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.