
ಭಯವೇ ಧರ್ಮದ ಮೂಲ: ಕೃಷ್ಣಾಪುರ ಶ್ರೀ
ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಧಾರ್ಮಿಕ ಸಭೆ
Team Udayavani, Apr 28, 2019, 6:10 AM IST

ಸುರತ್ಕಲ್: ಭಯವೇ ಧರ್ಮದ ಮೂಲ ಆದರಂತೆ ವಿಘ್ನ ಕಾರಕನೂ ವಿಘ್ನನಿವಾರಕನೂ ಆದ ಗಣ ಪತಿಯ ಆರಾಧನೆ ಯಿಂದ ಸತ್ಕರ್ಮವು ಯಶಸ್ವಿಯಾಗುತ್ತದೆ. ಹಾಗಿದ್ದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ ಎಂದು ಕೃಷ್ಣಾಪುರ ಮಠಾಧಿಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ನುಡಿದರು.
ಗಣೇಶಪುರ ಶ್ರೀ ಮಹಾಗಣಪತಿ ದೇವ ಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವಾರಾಧನೆಯಿಂದ ಸಕಲ ದುರಿತಗಳು ನಿವಾರಣೆಗೊಂಡು ಭಕ್ತರ ಇಷ್ಟಾರ್ಥ ಸಿದ್ಧಿಯಗಿ ಆರೋಗ್ಯಪೂರ್ಣ ಶಾಂತಿ ನೆಮ್ಮದಿಯ ಬದುಕು ಸಾಧ್ಯ. ದೇವಾಲಯಗಳ ಜಾತ್ರೆ ಸಂದರ್ಭ ಪ್ರತಿಯೊಬ್ಬ ಹಿಂದೂ ಬಾಂಧವರು ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ನಮ್ಮ ಧರ್ಮೋನ್ನತಿಗೆ ನಾಂದಿಯಾಗಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದಾಗ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತದೆ ಎಂದರು.
ಉತ್ತಮ ಸಂಸ್ಕಾರ ಅಳವಡಿಸಿ
ದೇವಸ್ಥಾನದ ತಂತ್ರಿವೇರಣ್ಯರಾರ ಶಿವ ಪ್ರಸಾದ್ ತಂತ್ರಿ ಮಾತನಾಡಿ, ಉತ್ತಮ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಸಮೃದ್ಧ ಶಕ್ತಿಶಾಲಿ ಜೀವನ ನಿರ್ವಹಣೆ ಸಾಧ್ಯ ಎಂದರು.
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ ಮಾತನಾಡಿ ನಿಸ್ವಾರ್ಥ ಸೇವಾಮನೋಭಾವದಿಂದ ಕಾರ್ಯಕ್ರಮ ಆಳವಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದರು.
ಜೀವನಮೌಲ್ಯಗಳಿಂದ ಯಶಸ್ಸು
ಉದ್ಯಮಿ ಮಧ್ಯ ಕರುಣಾಕರ ಶೆಟ್ಟಿ ಸುರತ್ಕಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಕಾರ ನೀಡಲಾಗುವುದು. ವಿದ್ಯಾ ದಾನ ಶ್ರೇಷ್ಠ ದಾನ. ಹೆತ್ತವರು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ, ಗುಣ-ನಡತೆಗಳನ್ನು ಮತ್ತು ಭಾರತೀಯ ಹಿಂದೂ ಜೀವನಮೌಲ್ಯಗಳನ್ನು ಅಳವಡಿಸಿ ಕೊಂಡಾಗ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಚೇಳಾçರುಗುತ್ತುವಿನ ವೀಣಾ ಶೆಟ್ಟಿ, ಉದ್ಯಮಿ ಪ್ರಕಾಶ್ ಪುತ್ರನ್, ದಿವ್ಯರೂಪ ಸಂಸ್ಥೆಯ ಯಾದವ ಕೋಟ್ಯಾನ್, ಧರ್ಮೇಂದ್ರ ಗಣೇಶಪುರ, ಸದಸ್ಯರಾದ ನಿರಂಜನ್ ಹೊಳ್ಳ, ಮೀರಾವಾಣಿ ಎಂ. ಶೆಟ್ಟಿ, ಸುಮತಿ ಶ್ರೀಧರ್ ಮೋಹಿನಿ ದೇವಾಡಿಗ ಮೊದ ಲಾದವರು ಉಪಸ್ಥಿತರಿದ್ದರು. ರಾಮಚಂದ್ರ ಶೆಟ್ಟಿಗಾರ್ ಸ್ವಾಗತಿಸಿ, ಗಿರೀಶ್ ನಾವಡ ವಂದಿಸಿದರು. ಚಂದ್ರಹಾಸ ಶೆಟ್ಟಿಗಾರ್ ನಿರೂಪಿಸಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.