ಗಂಜಿಮಠ: ನೀರಿದ್ದರೂ ಪೂರೈಕೆಯಲ್ಲಿ ಸಮಸ್ಯೆ
ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಕೆ
Team Udayavani, May 21, 2019, 6:00 AM IST
ಎಡಪದವು: ಗಂಜಿಮಠ ಪಂಚಾಯತ್ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಜನರ ಮೂಲಭೂತ ಅವಶ್ಯಕತೆಗೆ ಅನುಗುಣವಾಗಿ ನೀರಿದ್ದರೂ ಪೂರೈಕೆಯಲ್ಲಿ ಸಮಸ್ಯೆಯಾಗಿರುವುದರಿಂದ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ.
ಗಂಜಿಮಠ ಗ್ರಾಮ ಪಂಚಾಯತ್‌ನಿಂದ ಮೊಗರು, ಬಡಗುಳಿಪಾಡಿ ವ್ಯಾಪ್ತಿಗಳಿಗೆ ಪ್ರತಿದಿನ ನೀರು ಪೂರೈಕೆ ಮಾಡ ಲಾಗುತ್ತಿದೆ.
ಪೈಪ್‌ಗಳಿಗೆ ಹಾನಿ
ಗಂಜಿಮಠ ಪದವು ಬಳಿ ಕೊಳವೆ ಬಾವಿ ಸಮೀಪದ ಪಂಪ್‌ಹೌಸ್‌ನಿಂದ ನೀರು ಹಾಯಿಸುವ ಪೈಪ್‌ಗ್ಳನ್ನು ಕೆಲವು ದಿನಗಳ ಹಿಂದಷ್ಟೇ ಸರಿ ಪಡಿಸಲಾಗಿದ್ದರೂ ಕಿಡಿಗೇಡಿಗಳು ಮತ್ತೆಮತ್ತೆ ಹಾನಿ ಮಾಡುತ್ತಿರುವುದರಿಂದ ನೀರಿನ ಪೂರೈಕೆ ಯಲ್ಲಿ ವ್ಯತ್ಯಯವಾಗುತ್ತಿದೆ. ಈಗ ತಾತ್ಕಲಿಕವಾಗಿ ಇದನ್ನು ಸರಿಪಡಿಸಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಈ ಪೈಪ್ ಅನ್ನು ಸರಿಪಡಿಸಲಾಗಿತ್ತು. ಆದರೆ ಇದಾದ ಎರಡೇ ದಿನಗಳಲ್ಲಿ ನೀರಿನ ಪೈಪ್‌ಗೆ ಹಾನಿ ಮಾಡಿರುವ ಕಾರಣ ಮಳಲಿ ಭಾಗಕ್ಕೆ ನೀರು ಪೂರೈಕೆ ಸಂ ಪೂರ್ಣ ಸ್ತಬ್ಧಗೊಂಡಿತ್ತು. ಕೊನೆಗೆ ಕಾರ್ಮಿಕರು ಅದನ್ನು ರಿಪೇರಿ ಮಾಡಿ ನೀರು ಹಾಯಿಸಿದ್ದಾರೆ. ಇದೇ ರೀತಿ ಹಲವಾರು ಬಾರಿ ಕಿಡಿಗೇಡಿಗಳು ಪೈಪ್‌ಗ್ಳಿಗೆ ಹಾನಿ ಮಾಡುತ್ತಿದ್ದು, ಇದನ್ನು ಇಬ್ಬರು ಕಾರ್ಮಿಕರು ಸರಿಪಡಿಸಿದ್ದರು. ಆದರೆ ಸರಿಪಡಿಸಿದ ಕೆಲವೇ ದಿನಗಳಲ್ಲೇ ಪೈಪ್‌ಗೆ ಹಾನಿ ಮಾಡುವ ಕೃತ್ಯ ನಡೆಯುತ್ತಲೇ ಇದ್ದು, ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಮೊಕ ದ್ದಮೆ ದಾಖಲಿಸುವಂತೆ ಸ್ಥಳೀಯರಿಂದ ಆಗ್ರಹ ಕೇಳಿ ಬಂದಿದೆ.
ಹಳೆಯ ಪೈಪ್ ಬದಲಾವಣೆ ಅಗತ್ಯ
ಗಂಜಿಮಠ ವ್ಯಾಪ್ತಿಯಲ್ಲಿ ಬೇಸಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಸಹ ಜನರ ಅಗತ್ಯಕ್ಕನುಗುಣವಾಗಿ ನೀರು ಇದೆ. ವ್ಯವಸ್ಥಿತ ರೀತಿಯಲ್ಲಿ ನೀರು ಪೂರೈಕೆಯಾದರೆ ನೀರಿನ ಸಮಸ್ಯೆ ಬಾಧಿ ಸದು. ಆದರೆ ಹಲವಾರು ವರ್ಷಗಳ ಹಿಂದೆ ಇಲ್ಲಿ ಅಳವಡಿಸಿರುವ ಪೈಪ್ ಅನ್ನು ಇನ್ನೂ ಬದಲಾಯಿಸಲಾಗಿಲ್ಲ. ಈ ಪೈಪ್‌ಗ್ಳು ಎಲ್ಲಿ ಹಾದುಹೋಗಿದೆ ಎಂದು ಪತ್ತೆ ಹಚ್ಚಲೂ ಸಾಧ್ಯವಿಲ್ಲದಂತ ಪರಿಸ್ಥಿತಿ ಇದೆ.
ನೂತನ ರಸ್ತೆ ಕಾಮಗಾರಿ ಕೆಲಸಗಳಿಂದ ಹಳೆಯ ಪೈಪ್‌ಗ್ಳು ಭೂಮಿಯೊಳಗಡೆ ಹುದುಗಿ ಹೋಗಿದೆ. ಈ ಪೈಪ್‌ಗ್ಳಲ್ಲಿ ಹಾನಿ ಉಂಟಾಗಿರುವುದರಿಂದ ನೀರು ಹಾಯಿಸುವಾಗ ಬಹುತೇಕ ನೀರು ನಷ್ಟವಾಗುತ್ತಿದೆ. ಇದನ್ನು ಪತ್ತೆಹಚ್ಚುವುದು ಕಾರ್ಮಿಕ ರಿಗೂ ಅಸಾಧ್ಯವಾದ ಕಾರಣ ನೀರಿನ ಸಮಸ್ಯೆ ನಿರಂತರ ವಾಗಿ ಮುಂದುವರಿದಿದೆ.
ಎತ್ತರದ ಪ್ರದೇಶಗಳಿಗೆ ಪಂಪ್‌ಹೌಸ್‌ಗಳಿಂದ ಗೇಟ್‌ವಾಲ್ ಮೂಲಕ ಆಯಾಯ ಊರುಗಳಿಗೆ ಹೊಂದಾಣಿಕೆ ಮಾಡಿಕೊಂಡು ನೀರು ಹಾಯಿಸಲಾಗುತ್ತಿದೆ. ಪೈಪ್‌ಗ್ಳಿಗೆ ಹಾನಿಯಾಗಿರುವುದರಿಂದ ಮಳೆಗಾಲದಲ್ಲೂ ನೀರಿನ ಸಮಸ್ಯೆ ಎದುರಾಗುವುದರಿಂದ ಹೊಸ ಪೈಪ್ ಅಳವಡಿಸಬೇಕು ಎನ್ನುವ ಸ್ಥಳೀಯರ ಒತ್ತಾಯ ನಿರಂತರವಾಗಿ ಮುಂದುವರಿದಿದೆ.
ಗೇಟ್‌ವಾಲ್ ತಿರುಗಿಸಲು ಸಮಸ್ಯೆ
ನೀರನ್ನು ಸಮಪ್ರಮಾಣದಲ್ಲಿ ಎಲ್ಲರಿಗೂ ಸಿಗುವಂತೆ ಮಾಡುವ ಸಲುವಾಗಿ ಅಲ್ಲಲ್ಲಿ ಗೇಟ್‌ವಾಲ್‌ಗಳನ್ನು ಅಳವಡಿಸಲಾಗಿದೆ. ನೀರು ಬಿಡುವವರು ಎಲ್ಲರಿಗೂ ಸಮಪ್ರಮಾಣದಲ್ಲಿ ಸಿಗುವಂತಾಗಲು ಈ ಗೇಟ್‌ವಾಲ್‌ಗಳನ್ನು ತಿರುಗಿಸುತ್ತಾರೆ. ಆದರೆ ಕೆಲವರು ನೀರು ಬಿಡುವವರಿಗೆ ಮಾಹಿತಿ ನೀಡದೆ ತಾವೇ ಗೇಟ್‌ವಾಲ್‌ಗಳನ್ನು ತಿರುಗಿಸುವುದರಿಂದ ಕೆಲವು ಮನೆಗಳಿಗೆ ನೀರು ಸಿಗುತ್ತಿಲ್ಲ.
ಪರ್ಯಾಯ ಟ್ಯಾಂಕ್ ಇಲ್ಲ
ಮಳಲಿ ಕ್ರಾಸ್ ಬಳಿಯ ದಲಿತ ಕಾಲೋನಿಯಲ್ಲಿದ್ದ ಟ್ಯಾಂಕ್ ಅಪಾಯಕಾರಿಯಾಗಿದ್ದರಿಂದ ಪಂಚಾಯತ್ ವತಿಯಿಂದ ಅದ ನ್ನು ನೆಲಸಮಗೊಳಿಸಲಾಗಿತ್ತು. ಆದರೆ ಈ ಭಾಗದಲ್ಲಿ ಪರ್ಯಾಯ ಟ್ಯಾಂಕ್ ನಿರ್ಮಿಸದ ಕಾರಣ ಮಳಲಿ ಸೈಟ್ ಭಾಗದ ಜನರಿಗೆ ನೀರು ಪೂರೈಕೆ ಕಡಿಮೆಯಾಗಿದ್ದು, ಎತ್ತರದ ಭಾಗಗಳಲ್ಲಿ ಸಮಸ್ಯೆ ತಲೆದೋರಿದೆ. ಯಾಕೆಂದರೆ ಟ್ಯಾಂಕ್ ಮುಖಾಂತರ ನೀರು ಎತ್ತರದಿಂದ ಧುಮುಕುತ್ತಿದ್ದಾಗ ನೀರು ಹೆಚ್ಚಿನ ಪ್ರಮಾಣದಲ್ಲಿ ಹಾಯುತ್ತಿತ್ತು. ಆದರೆ ಈಗ ಟ್ಯಾಂಕ್ ಇಲ್ಲದಿರುವುದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹಾಯುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ.
ಪೈಪ್ ಹಾನಿ ಮಾಡುವವರ ವಿರುದ್ಧ ಕ್ರಮ
ಗಂಜಿಮಠ ವ್ಯಾಪ್ತಿಯಲ್ಲಿ ಇತ್ತೀಚೆಗೆ ನೀರಿನ ಪ್ರಮಾಣ ಕಡಿಮೆ ಯಾಗಿರುವುದರಿಂದ ಕೈಕಂಬ, ಸೂರಲ್ಪಾಡಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಒಡೆದು ಹೋದ ಪೈಪ್‌ಗಳನ್ನು ಸರಿಪಡಿಸಲಾಗುತ್ತಿದೆ. ನೀರಿನ ಪೈಪ್‌ಗಳಿಗೆ ಹಾನಿ ಮಾಡುವವ ವಿರುದ್ಧ ಕ್ರಮ ಕೈಗೊಳ್ಳಲು ಪಂಚಾಯತ್ ಬದ್ಧ.
-ಮಾಲತಿ,ಅಧ್ಯಕ್ಷೆ,
ಗಂಜಿಮಠ ಗ್ರಾ. ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.