ಮುಂಡೂರು: ‘ಸೌಧ’ ನಿರ್ಮಿಸಿದರೂ ಪ್ಲಾಸ್ಟಿಕ್‌ ಹಾಕುತ್ತಿಲ್ಲ!


Team Udayavani, May 26, 2018, 5:05 AM IST

garbage-18-5.jpg

ನರಿಮೊಗರು: ಅಭಿವೃದ್ಧಿ ಹೊಂದುತ್ತಿರುವ ಗ್ರಾಮಗಳ ಪೈಕಿ ಮುಂಡೂರು ಕೂಡ ಒಂದು. ಸ್ವಚ್ಛತೆಗೆ ಇಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯಬೇಡಿ, ಪ್ಲಾಸ್ಟಿಕ್‌ ಚೆಲ್ಲದೆ ಪರಿಸರ ವನ್ನು ಕಾಪಾಡಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಅಂಗಡಿ – ಮನೆಗಳಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ದಾಸ್ತಾನಿರಿಸಲು ಗ್ರಾ.ಪಂ. ಕಚೇರಿ ಎದುರಲ್ಲೇ ಪ್ಲಾಸ್ಟಿಕ್‌ ಸೌಧವನ್ನು ನಿರ್ಮಿಸಿದ್ದರೂ ಈ ಸೌಧಕ್ಕೆ ಯಾರೂ ಪ್ಲಾಸ್ಟಿಕ್‌ ಹಾಕುತ್ತಲೇ ಇಲ್ಲ.

ಗ್ರಾ.ಪಂ. ವತಿಯಿಂದ ನಿರ್ಮಿಸಲಾದ ಪ್ಲಾಸ್ಟಿಕ್‌ ಸೌಧ ಒಂದು ಅಚ್ಚುಕಟ್ಟಾದ ವ್ಯವಸ್ಥೆಯಾಗಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಬದಲಾಗಿ ಸೌಧದೊಳಗೆ ತಂದು ಹಾಕಿ. ಅದನ್ನು ನಾವು ಬೇರೆ ಕಡೆ ಸಾಗಾಟ ಮಾಡುತ್ತೇವೆ ಎಂದು ಗ್ರಾ.ಪಂ. ಮನವಿ ಮಾಡುವ ಮೂಲಕ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಿತ್ತು. ನಾಲ್ಕೈದು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಸೇವೆಯನ್ನು ಮೊದಮೊದಲು ಜನ ಉಪಯೋಗಿಸುತ್ತಿದ್ದರು. ಆ ಬಳಿಕ ಬಳಕೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಈಗ ಸೌಧದೊಳಗೆ ಕಸವನ್ನು ಹಾಕುವುದೇ ಇಲ್ಲ. ಇದರಿಂದ ಗ್ರಾ.ಪಂ. ಸ್ವತ್ಛತೆಯ ಕುರಿತು ಇದ್ದ ಕನಸು ನನಸಾಗುತ್ತಿಲ್ಲ.

ರಸ್ತೆ ಬದಿಯಲ್ಲೇ ಎಸೆಯುತ್ತಾರೆ
ಕಸ ಹಾಕಲು ವ್ಯವಸ್ಥೆ ಇದ್ದರೂ ಹಾಕುತ್ತಿಲ್ಲ. ಆದರೆ ರಾತ್ರಿ ವೇಳೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ರಸ್ತೆ ಬದಿಯಲ್ಲೇ ಕಸ ಎಸೆಯುತ್ತಾರೆ. ಯಾರು ಕಸ ಬಿಸಾಡುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಕಸದ ಜತೆಗೆ ಕೋಳಿಗಳ ತ್ಯಾಜ್ಯವೂ ಇದೆ. ಸತ್ತ ಪ್ರಾಣಿಗಳ ದೇಹವೂ ಇದೆ. ಗ್ರಾಮಸ್ಥರು ಕಾದು ಕುಳಿತು ಆರೋಪಿಗಳನ್ನು ಪತ್ತೆ ಮಾಡಲು ಶತಪ್ರಯತ್ನ ಮಾಡಿದರೂ ಕಸ ಹಾಕುವವರು ಸಿಕ್ಕಿಲ್ಲ. ಇದೇ ವಿಚಾರ ಗ್ರಾಮಸಭೆಯಲ್ಲಿ ಪ್ರಸ್ತಾವಗೊಂಡು ಪೊಲೀಸ್‌ ಠಾಣೆಯ ಮೆಟ್ಟಿಲೇರಿತ್ತು. ಅವರಿಂದಲೂ ಕಸ ಹಾಕುವವರನ್ನು ಹಿಡಿಯುವುದು ಆಗಲಿಲ್ಲ. ಇಂದಿಗೂ ಕಸ ಬೀಳುತ್ತಲೇ ಇದೆ. ಕಸ ಹಾಕುವ ಸೌಧ ಕಣ್ಣೆದುರಿಗೇ ಇದ್ದರೂ ಅದನ್ನು ಬಳಸದೇ ಇರುವುದು ವ್ಯವಸ್ಥೆಯನ್ನು ಅಥವಾ ಪರಿಸರವನ್ನು ಹಾಳು ಮಾಡುವ ಷಡ್ಯಂತ್ರ ಎನ್ನುತ್ತಾರೆ ಗ್ರಾಮಸ್ಥರು.

ಜಾಗೃತಿ ಮುಖ್ಯ
ಮನೆಯಲ್ಲಿ ಉತ್ಪತ್ತಿಯಾದ ಕಸವನ್ನು ಗ್ರಾಮಸ್ಥರು ಮನೆಯಲ್ಲೇ ಬಳಕೆ ಮಾಡುತ್ತಾರೆ. ಆದರೆ ಪ್ಲಾಸ್ಟಿಕ್‌ ವಸ್ತುಗಳನ್ನು ಏನು ಮಾಡಬೇಕು? ಎಂಬ ಪರಿಜ್ಞಾನ ಕೆಲವರಿಗೆ ಇರುವುದಿಲ್ಲ. ಪ್ಲಾಸ್ಟಿಕ್‌ ಚೀಲಗಳನ್ನು ಮರು ಬಳಕೆ ಮಾಡುವ ಮಾಹಿತಿ ಗ್ರಾಮೀಣ ಜನರಿಗಿಲ್ಲ. ಪ್ಲಾಸ್ಟಿಕ್‌ ವಸ್ತುಗಳನ್ನು ಸ್ವಚ್ಛವಾಗಿಟ್ಟು ಒಣಗಿಸಿ ಅದನ್ನು ಸ್ಥಳೀಯ ಅಂಗನವಾಡಿಗೆ ನೀಡಿದರೆ ಅಲ್ಲಿಂದ ಬೇರೆ ಕಡೆ ರವಾನೆಯಾಗುತ್ತದೆ. ಪ್ಲಾಸ್ಟಿಕ್‌ ಚೀಲಗಳನ್ನು ಕ್ರೋಡೀಕರಿಸಿ ಎಂದು ಸರಕಾರವೇ ಮನೆ ಮನೆಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಯಾವ ಅಂಗನವಾಡಿಗೂ ಪ್ಲಾಸ್ಟಿಕ್‌ ಬರಲೇ ಇಲ್ಲ. ಪ್ಲಾಸ್ಟಿಕ್‌ ವಸ್ತುಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಜಾಗೃತಿ ಮೂಡಿ ಸುವುದೇ ಇದಕ್ಕೆ ಪರಿಹಾರ ಎಂಬಂತಿದೆ.

ಕಸ ಹಾಕಿದರೆ ಕಾನೂನು ಕ್ರಮ
ಸ್ವಚ್ಛ ಗ್ರಾಮದ ಕನಸು ಸಾಕಾರವಾಗಬೇಕಿದ್ದರೆ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಕಡಿಮೆ ಮಾಡಿ, ಜನ ಬಟ್ಟೆ ಚೀಲಗಳನ್ನೇ ಬಳಕೆ ಮಾಡಬೇಕು ಎಂಬ ಉದ್ದೇಶದಿಂದ ನಾವು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಪ್ಲಾಸ್ಟಿಕ್‌ ಹಾಕಲು ಪ್ಲಾಸ್ಟಿಕ್‌ ಸೌಧ ನಿರ್ಮಿಸಿದ್ದೇವೆ. ಆದರೆ ಜನರು ಅದನ್ನು ಬಳಕೆ ಮಾಡುತ್ತಿಲ್ಲ. ಸಾರ್ವಜನಿಕರ ಸಹಕಾರ ಇದ್ದಲ್ಲಿ ಮಾತ್ರ ಯಾವುದೇ ಸಾರ್ವಜನಿಕ ಕೆಲಸ ಯಶಸ್ವಿಯಾಗಲು ಕಾಣಲು ಸಾಧ್ಯವಾಗುತ್ತದೆ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ ಮತ್ತು ತ್ಯಾಜ್ಯವನ್ನು ಹಾಕುತ್ತಿರುವುದು ಯಾರೆಂದು ಗೊತ್ತಾದಲ್ಲಿ ಅವರ ವಿರುದ್ಧ ಗ್ರಾ.ಪಂ. ಕಾನೂನು ಕ್ರಮ ಕೈಗೊಳ್ಳಲಿದೆ. ಸ್ವಚ್ಛ ಗ್ರಾಮವಾಗಿಡಲು ಎಲ್ಲರೂ ಸಹಕರಿಸಬೇಕು.
– ಎಸ್‌.ಡಿ. ವಸಂತ, ಗ್ರಾ.ಪಂ. ಅಧ್ಯಕ್ಷರು, ಮುಂಡೂರು

— ಪ್ರವೀಣ ಚೆನ್ನಾವರ

ಟಾಪ್ ನ್ಯೂಸ್

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts

Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು

Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ

Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ

police-ban

Sullia: ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

11

Puttur: ಬಸ್‌ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ

byndoor

Guttigaru: ಕಮರಿಗೆ ಉರುಳಿದ ಕಾರು; ಗಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.