ಕಸ ವಿಲೇವಾರಿಗೆ ಬದಲಿ ಜಾಗ: ಬೆಟ್ಟಂಪಾಡಿ ಗ್ರಾ.ಪಂ. ಆಗ್ರಹ
Team Udayavani, Apr 10, 2017, 3:08 PM IST
ಬೆಟ್ಟಂಪಾಡಿ: ಗ್ರಾ.ಪಂ.ಗೆ ಕಸ ವಿಲೇವಾರಿ ಮಾಡಲು ಬದಲಿ ಜಾಗವನ್ನು ಗುರುತಿಸಿ ಕೊಡುವಂತೆ ಕಂದಾಯ ಇಲಾಖೆಗೆ ಬರೆಯುವುದೆಂದು ಎ. 7ರಂದು ನಡೆದ ಸಾಮಾನ್ಯಸಭೆಯಲ್ಲಿ ನಿರ್ಣಯಿಸಲಾಯಿತು.
ಅಧ್ಯಕ್ಷೆ ಉಮಾವತಿ ಮಣಿಯಾಣಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಗ್ರಾಮದ ಪುದ್ದೊಟ್ಟಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಘಟಕ ಸ್ಥಾಪಿಸಲು ಕಂದಾಯ ಇಲಾಖೆ ಸ್ಥಳ ಗುರುತಿಸಿ ಪಂಚಾಯತ್‌ಗೆ ವರ್ಗಾಯಿಸಿದ ಜಾಗವನ್ನು ಸಮತಟ್ಟು ಮಾಡಲಾಗಿತ್ತು. ಆದರೆ ಈಗ ಕುಡಿಯುವ ನೀರು ಕಲುಷಿತಗೊಳ್ಳುತ್ತದೆ. ಅಲ್ಲದೆ ಸುತ್ತಮುತ್ತ ಅದರ ದುರ್ವಾಸನೆಯ ಸಮಸ್ಯೆ, ಕಲುಷಿತ ನೀರು ಕೃಷಿ ಭೂಮಿಗೆ ನುಗ್ಗಿ ಜಮೀನು ಹಾಳಾಗುವ ಭೀತಿ ವ್ಯಕ್ತಪಡಿಸಿ ನಾಗರಿಕರು ದೂರು ನೀಡಿದ್ದಾರೆ. ಘಟಕಕ್ಕೆ ಸಂಬಂಧಿಸಿದ ಕೆಲಸವನ್ನು ಮುಂದುವರಿಸಬಾರದು ಎಂದು ತಾಲೂಕು ಆರೋಗ್ಯಾಧಿಕಾರಿಯವರಿಂದ ಪತ್ರ ಪಂಚಾಯತ್‌ಗೆ ಬಂದ ಬಗ್ಗೆ ಚರ್ಚೆ ನಡೆಸಲಾಯಿತು.
ಬಳಿಕ ಬೇರೆ ಜಾಗವನ್ನು ಗುರುತಿಸಿಕೊಡುವಂತೆ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಿ ನಿರ್ಣಯ ಕೈಗೊಳ್ಳಲಾಯಿತು.
ವರ್ತಕರಿಂದ ವಿಲೇವಾರಿ
ಪುದ್ದೊಟ್ಟಿನಲ್ಲಿ ಘನ ತ್ಯಾಜ್ವ ವಿಲೇವಾರಿ ಘಟಕಕ್ಕೆ ಆಕ್ಷೇಪ ಬಂದ ಕಾರಣ ಬದಲಿ ವ್ಯವಸ್ಥೆ ಆಗುವವರೆಗೆ ಅಂಗಡಿಗಳ ತ್ಯಾಜ್ಯ ನಿರ್ವಹಣೆ ಅಸಾಧ್ಯ. ಅಂಗಡಿಯವರು ಅವರ ಕಸವನ್ನು ಎಲ್ಲೊಂದರಲ್ಲಿ ಹಾಕುವಂತಿಲ್ಲ. ಘನ ತ್ಯಾಜ್ಯ ಘಟಕ ಆಗು ವವರೆಗೆ ತ್ಯಾಜ್ಯವನ್ನು ಅವರೇ ವಿಲೇವಾರಿ ಮಾಡ ಬೇಕು ಎಂದು ನಿರ್ಧರಿಸಿ ಈ ಕುರಿತುಅವರಿಗೆ ತಿಳಿಸುವ ಬಗ್ಗೆ ನಿರ್ಣಯಿಸಲಾಯಿತು.
ಶಾಲೆ ದುರಸ್ತಿಗೆ ಆಗ್ರಹ
ಕುಸಿದು ಬೀಳುವ ಸ್ಥಿತಿಯಲ್ಲಿರುವ ಮಿತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿಗೊಳಿಸಲು ಆಗ್ರಹಿಸಿ ಜಿ.ಪಂ.ಗೆ ಬರೆಯಲು ನಿರ್ಣಯಿಸಲಾಯಿತು.
ಇತ್ತೀಚೆಗೆ ನಿಧನ ಹೊಂದಿದ ಹಿರಿಯರಾದ ಆನಾಜೆ ಗಣೇಶ ರೈ ಅವರ ಬಗ್ಗೆ ಸದಸ್ಯ ವಿನೋದ್ ರೈ ಗುತ್ತು ಮಾತನಾಡಿದರು. ಅವರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ಉಪಾಧ್ಯಕ್ಷೆ ಭವಾನಿ ಕೆ., ಸದಸ್ಯರಾದ ಪಾರ್ವತಿ ಲಿಂಗಪ್ಪ ಗೌಡ, ಪ್ರಕಾಶ್ ರೈ, ಐತ್ತಪ್ಪ ಜಿ., ದಿನೇಶ್ ಜಿ., ಜಗನ್ನಾಥ ರೈ, ರಕ್ಷಣ್ ರೈ, ವಿನೋದ್ ರೈ ಗುತ್ತು.ಮೊಯಿದು ಕುಂಞೆ ಕೋನಡ್ಕ, ಭವಾನಿ ಪಿ., ಶಾಲಿನಿ ಘಾಟೆ, ದಿವ್ಯಾ ಪಿ., ಬೇಬಿ ಜಯರಾಂ, ಪುಷ್ಪಲತಾ, ಪದ್ಮಾವತಿ ಡಿ., ಪ್ರೇಮಲತಾ, ರಮೇಶ್ ಶೆಟ್ಟಿ ಕೊಮ್ಮಂಡ, ಪಿಡಿಒ ಶಾಂತಾರಾಮ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿದರು. ಸಿಬಂದಿ ರಾಮಣ್ಣ, ಸಂದೀಪ್, ಚಂದ್ರಾವತಿ, ಸವಿತಾ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.