ಮಂಗಳೂರಿಗೆ ಮತ್ತೆ ಬಂತು ಎರಡು ಕಾಡುಕೋಣ! ಗ್ರಾಮಸ್ಥರಲ್ಲಿ ಆತಂಕ
Team Udayavani, Jun 1, 2022, 1:17 AM IST
ಮಂಗಳೂರು: ನಗರದ ಮರೋಳಿ ಬಳಿ ಮಂಗಳವಾರ ಬೆಳಗ್ಗೆ ಎರಡು ಕಾಡುಕೋಣಗಳು ಕಾಣಿಸಿ ಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದವು.
ಕಾಡುಕೋಣಗಳನ್ನು ಕಂಡ ಕೂಡಲೇ ಪರಿಸರದ ಮಂದಿ ಅರಣ್ಯ ಇಲಾಖೆಯ ಗಮನಕ್ಕೆ ತಂದರು. ರಾತ್ರಿ ವರೆಗೆ ಇಲಾಖೆಯವರು ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿದರೂ ಕಾಡುಕೋಣಗಳನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ.
ಮರೋಳಿಯ ಇದೇ ಪ್ರದೇಶದಲ್ಲಿ ಈ ಹಿಂದೆ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.ಸ್ಥಳೀಯರಾದ ಭಾಸ್ಕರ್ ಪ್ರತಿಕ್ರಿಯಿಸಿ, “ಮರೋಳಿಯ ಕೆನರಾ ವರ್ಕ್‌ಶಾಪ್ ಬಳಿ ನನ್ನ ಟೈಲರಿಂಗ್ ಅಂಗಡಿಯಿದ್ದು, 9.45 ಸುಮಾರಿಗೆ ಆ ಪ್ರದೇಶದಲ್ಲಿ ಕಾಡು ಕೋಣ ಕಾಣಿಸಿಕೊಂಡಿತ್ತು ಎಂದರು.
ಕಾಡುಕೋಣದ ಹೆಜ್ಜೆ ಗುರುತು ಸ್ಥಳದಲ್ಲಿ ಪತ್ತೆಯಾಗಿದೆ. ಈ ಹಿಂದೆ ಕೂಡ ಇದೇ ಪರಿಸರದ ಸುತ್ತಮುತ್ತ ಕಾಡು ಕೋಣವೊಂದು ಕಾಣಿಸಿತ್ತು. ಬಜಪೆ-ಕೆಂಜಾರು ಪ್ರದೇಶದಿಂದ ಬಂದಿರಬಹುದು ಎಂಬುದಾಗಿ ಅಂದಾ ಜಿಸಲಾಗಿದೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ತಿಳಿಸಿದ್ದಾರೆ.
2 ವರ್ಷಗಳ ಹಿಂದೆ ಆತಂಕ ಮೂಡಿಸಿದ್ದ ಕಾಡುಕೋಣ
2020ರ ಮೇ 4ರಂದು ನಗರದ ಕುದ್ರೋಳಿ, ಮಣ್ಣಗುಡ್ಡ ವ್ಯಾಪ್ತಿಯ ಜನನಿಬಿಡ ರಸ್ತೆಯಲ್ಲಿ ಕಾಡುಕೋಣ ಕಾಣಿಸಿಕೊಂಡಿತ್ತು. ಕುದ್ರೋಳಿ, ಮಣ್ಣಗುಡ್ಡ, ಲೇಡಿಹಿಲ್, ಬಿಜೈ ಭಾಗದೆಲ್ಲೆಲ್ಲ ಓಡಾಡಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಕೊನೆಗೂ ಮಣ್ಣಗುಡ್ಡ ಗೋದಾಮಿನ ಸಮೀಪ ಅರಿ ವಳಿಕೆ ಚುಚ್ಚುಮದ್ದು ಪ್ರಯೋ ಗಿಸಲಾಗಿತ್ತು. ಬಳಿಕ ರಕ್ಷಿತಾರಣ್ಯಕ್ಕೆ ಕರೆ ದೊಯ್ಯುವಾಗ ಮಾರ್ಗ ಮಧ್ಯೆ ಹೃದಯಾಘಾತದಿಂದ ಕಾಡುಕೋಣ ಮೃತಪಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.