ಗೌರಿ ಹತ್ಯೆ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
Team Udayavani, Oct 3, 2017, 3:41 PM IST
ಉಪ್ಪಿನಂಗಡಿ : ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿ ಉಪ್ಪಿನಂಗಡಿಯ ಪ್ರಗತಿಪರ ವೇದಿಕೆಯ ವತಿಯಿಂದ ಇಲ್ಲಿನ ಬಸ್ ನಿಲ್ದಾಣದ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆಯು ದೇಶವ್ಯಾಪಿ ಜರಗಿದ ಪ್ರತಿಭಟನೆ ನಡೆಸುತ್ತಿದ್ದು, ಅದರ ಅಂಗವಾಗಿ ನಡೆದ ಈ ಪ್ರತಿಭಟನೆಯಲ್ಲಿ ಮಾತನಾಡಿದ ಉಪ್ಪಿನಂಗಡಿ ಮಾಲೀಕ್ ದಿನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಾಫಾ ಕೆಂಪಿ, ಹಿಂಸಾರಹಿತ ವಿಚಾರಧಾರೆಯ ಪ್ರತಿಪಾದಕರಾಗಿ, ಅದನ್ನು ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿಕೊಂಡು ಬಂದಿದ್ದ ಮಾತೃ ಹೃದಯ ಗೌರಿ ಲಂಕೇಶ್‌ರದ್ದಾಗಿತ್ತು. ಆದರೆ ಅವರು ಯಾವುದನ್ನು ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದಿದ್ದರೋ ಕೊನೆಗೆ ಅದೇ ಹಿಂಸೆಗೆ ಬಲಿಯಾಗಿರುವುದು ದೇಶದ ದುರಂತ. ಕ್ರೂರ ಮನೋಸ್ಥಿತಿಯ ಹಂತಕರು ಗೌರಿಯೆಂಬ ಶರೀರವನ್ನು ಕೊಂದಿರಬಹುದು. ಆದರೆ ಅವರು ಲಕ್ಷಾಂತರ ಗೌರಿಗಳಲ್ಲಿ ಹುಟ್ಟು ಹಾಕಿದ ವಿಚಾರಧಾರೆಗಳನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ. ರಾಜ್ಯ ಸರಕಾರವು ಯಾವುದೇ ಒತ್ತಡಗಳಿಗೆ ಮಣಿಯದೆ ಅವರ ಹತ್ಯಾ ಆರೋಪಿಗಳನ್ನು ತತ್‌ಕ್ಷಣ ಬಂಧಿಸಿ ಕಾನೂನಿನಡಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಬೆಳ್ತಂಗಡಿ ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ತನ್ಸೀಫ್ ಬಿ.ಎಂ. ಮಾತನಾಡಿ, ಸಮಾನತೆ ಮತ್ತು ಸತ್ಯವನ್ನು ಪ್ರತಿಪಾದಿಸಿ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸ ಗೌರಿ ಲಂಕೇಶ್‌ರಿಂದಾಗಿತ್ತು. ಜನರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಅವರಲ್ಲಿ ಮೌಡ್ಯತೆ ಬಿತ್ತಿ ಅವರನ್ನು ಶೋಷಿಸುತ್ತಿದ್ದವರ ವಿರುದ್ಧದ ಧ್ವನಿಯಾಗಿ ಗೌರಿ ಅವರು ಇದ್ದರು. ಆರೋಪಿಗಳನ್ನು ಶೀಘ್ರ ಬಂಧಿಸಿ, ಉಗ್ರ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುರ್ರಹ್ಮಾನ್, ವರ್ತಕರ ಸಂಘದ ಕಾರ್ಯದರ್ಶಿ ಯುನಿಕ್ ಅಬ್ದುರ್ರಹ್ಮಾನ್, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಪ್ರಗತಿಪರ ವೇದಿಕೆಯ ಶಬೀರ್ ಕೆಂಪಿ, ಇಬ್ರಾಹೀಂ ಪಿಲಿಗೂಡು, ಶಹೀದ್ ನಂದಾವರ, ಅಮ್ಮಿ ಸನ್ಮಾನ್, ಝಬೈರ್ ಕೊಯಿಲ , ರಿಯಾಝ್ ಕಡವಿನ ಬಾಗಿಲು, ಅಝೀಝ್ ನಿನ್ನಿಕಲ್ಲ್ , ಆಶಿಕ್ ಅರಫಾ, ಆಶಿಕ್ ರಾಮನಗರ, ಶಲೂಲ್ ಯು.ಟಿ., ಇಬ್ರಾಹಿಂ ಆಚಿ ಮತ್ತಿತರರು ಪಾಲ್ಗೊಂಡಿದ್ದರು.ಪ್ರಗತಿಪರ ವೇದಿಕೆಯ ಇರ್ಷಾದ್ ಯು.ಟಿ. ಉಪ್ಪಿನಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.