ತರಕಾರಿ ಕೃಷಿಯಲ್ಲಿ ಖುಷಿ ಕಂಡ ಕೃಷಿಕ ಜೆರಾಲ್ಡ್
Team Udayavani, Dec 31, 2017, 3:12 PM IST
ಪುಂಜಾಲಕಟ್ಟೆ : ವಾಣಿಜ್ಯ ಬೆಳೆಗಳ ಭರಾಟೆಯಲ್ಲಿ ತರಕಾರಿ ಕೃಷಿ ಕಡಿಮೆಯಾಗುತ್ತಿದೆ. ಬಹಳಷ್ಟು ರೈತರು ತರಕಾರಿ ಬೆಳೆಯವುದನ್ನೇ ಬಿಟ್ಟಿದ್ದಾರೆ. ಸ್ವಂತ ಉಪಯೋಗಕ್ಕೆ ಮಾತ್ರ ತರಕಾರಿ ಬೆಳೆಯುವವರೂ ಇದ್ದಾರೆ. ವಾಣಿಜ್ಯ ಬೆಳೆಗಳ ಜತೆ ತರಕಾರಿ ಬೆಳೆದು ವರ್ಷಪೂರ್ತಿ ಸಾಕಷ್ಟು ಆದಾಯ ಗಳಿಸಿದ ಕೃಷಿಕ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಜೆರಾಲ್ಡ್ ಲೋಬೋ ಇದರಲ್ಲೇ ಖುಷಿ ಕಂಡಿದ್ದಾರೆ.
ಉತ್ತಮ ಆದಾಯ
ಜೆರಾಲ್ಡ್ ಅವರು ಒಟ್ಟು 4 ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆದಿದ್ದಾರೆ. ಮನೆಯ ಮುಂಭಾಗದ 40 ಸೆಂಟ್ಸ್ ಪ್ರದೇಶದಲ್ಲಿ ಹೀರೆಕಾಯಿ, ಸೌತೆಕಾಯಿ, ಮುಳ್ಳು ಸೌತೆ ಹೀಗೆ ವರ್ಷಪೂರ್ತಿ ತರಕಾರಿ ಬೆಳೆಸುತ್ತಾರೆ. ಸ್ವತಃ ದುಡಿಯುವುದರಿಂದ ಕೂಲಿ ಖರ್ಚು ಕಡಿಮೆಯಾಗುತ್ತದೆ. ತರಕಾರಿ ಕೃಷಿಯಲ್ಲಿ ವಾರ್ಷಿಕ ಸರಾಸರಿ 1ರಿಂದ 1.50 ಲಕ್ಷ ರೂ. ನಿವ್ವಳ ಆದಾಯ ಪಡೆದಿದ್ದಾರೆ.
ಸಾವಯವ ಕೃಷಿ
ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುವುದರಿಂದ ಆರೋಗ್ಯಯುತ ತರಕಾರಿ ಲಭಿಸುತ್ತಿದ್ದು, ತರಕಾರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಜೆರಾಲ್ಡ್ ಲೋಬೋ ಅವರ ಪತ್ನಿ ಲೀಡಿಯಾ ಡಿ’ಸೋಜಾ ಅವರು ತರಕಾರಿ ಬೆಳೆಗಳಿಗೆ ನೀರು ನಿರ್ವಹಣೆ, ಗೊಬ್ಬರ ನೀಡುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ.
17 ವರ್ಷಗಳಿಂದ ಕೃಷಿ
ಜೆರಾಲ್ಡ್ ಲೋಬೋ ಅವರು 17 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡವರು. ಪ್ರಾರಂಭದಲ್ಲಿ 20 ಸೆಂಟ್ಸ್ ಪ್ರದೇಶದಲ್ಲಿ ಮಲ್ಲಿಗೆ ಕೃಷಿ ಆರಂಭಿಸಿ ಯಶಸ್ಸು ಗಳಿಸಿದರು. ಕೃಷಿ ಇಲಾಖೆಯ ಕೃಷಿಕರ ತರಬೇತಿಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದು ವೈವಿಧ್ಯಮಯ ಕೃಷಿ ಆರಂಭಿಸಿದರು. ಕೃಷಿ ಕ್ಷೇತ್ರದ ಮಾಹಿತಿಯನ್ನು ಕೃಷಿ ಸಂಬಂಧಿತ ಪತ್ರಿಕೆ, ಪುಸ್ತಕ ಓದಿ, ಟೀವಿ ಕಾರ್ಯಕ್ರಮಗಳನ್ನು ನೋಡಿ ತಿಳಿದುಕೊಂಡು, ಅಳವಡಿಸುತ್ತೇನೆ ಎನ್ನುತ್ತಾರೆ ಕೃಷಿಕ ಜೆರಾಲ್ಡ್ ಲೋಬೋ.
ಅವರು ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಎರೆಹುಳು ಗೊಬ್ಬರ, ಜೀವಾಮೃತವನ್ನು ಬೆಳೆಗಳಿಗೆ ನೀಡು
ತ್ತಾರೆ. ಕೀಟ ಬಾಧೆ ನಿರ್ವಹಣೆಗೆ ಟ್ಯಾಪ್ ಅಳವಡಿಸುತ್ತಾರೆ. ಎರೆಹುಳು ಗೊಬ್ಬರ ತಯಾರಿಕೆ ಘಟಕವೂ ಇದೆ. ಅದರಿಂದ ತಯಾರಾದ ಗೊಬ್ಬರವನ್ನೇ ಕೃಷಿಗೆ ಬಳಸುತ್ತಾರೆ. ನೀರಿಗೆ ಕೊಳವೆ ಬಾವಿಯ ವ್ಯವಸ್ಥೆಯಿದೆ. ಕೆಲವೊಂದು ಕಡೆಗಳಲ್ಲಿ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿಯಿದೆ.
ವಾರದಲ್ಲಿ ಮೂರು ಬಾರಿ ಮಾರಾಟ
ಪ್ರತೀ ವಾರದಲ್ಲಿ ಮೂರು ಬಾರಿ ವಾಹನದಲ್ಲಿ ಸಾಗಿಸಿ ಬಿ.ಸಿ. ರೋಡ್ ಮಾರುಕಟ್ಟೆಗೆ ಪೂರೈಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಶುಭ ಸಮಾರಂಭಕ್ಕೂ ಇವರು ಬೆಳೆದ ತರಕಾರಿಯೇ ಬೇಕು.
ಸಾವಯವ ಕೃಷಿ ಪದ್ಧತಿಯಲ್ಲಿನ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ, ಬೆಲೆಯಿದೆ. ಸ್ಥಳೀಯವಾಗಿಯೇ ಸಿಗುವ ಹೀರೆಕಾಯಿ, ಸೌತೆಕಾಯಿ, ಮುಳ್ಳು ಸೌತೆ ಇತ್ಯಾದಿ ತರಕಾರಿ ಖರೀದಿಸಲು ಹೆಚ್ಚಿನ ಗ್ರಾಹಕರು ಬರುತ್ತಾರೆ.
– ಜೆರಾಲ್ಡ್ ಲೋಬೋ, ಕೃಷಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಕೊಟ್ಟ ಚಿತ್ರತಂಡ
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.