ಮಳೆಕೊಯ್ಲು ಅಳವಡಿಸಿ ನೀರಿನ ಸಮಸ್ಯೆಯಿಂದ ದೂರವಿರಿ: ಡಾ| ಭರತ್ ಶೆಟ್ಟಿ
Team Udayavani, Jul 1, 2019, 5:28 AM IST
ಮಹಾನಗರ: ಮನೆಗಳಲ್ಲಿ ಮಳೆಕೊಯ್ಲು ಅಳವಡಿಸದಿದ್ದರೆ ಮುಂದಿನ ಬೇಸಗೆಯಲ್ಲಿ ಜಲಕ್ಷಾಮ ಎದುರಿ ಸಬೇಕಾದ ಪರಿಸ್ಥಿತಿ ಬರಬಹುದು ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ. ಹೇಳಿದರು.
ಭಾರತ್‌ಮಾತ ನಾಗರಿಕ ಪರಿಸರ ವೇದಿಕೆ ಕೋಡಿಕಲ್ ವತಿಯಿಂದ ನಗರದ ಕೋಡಿಕಲ್ನಲ್ಲಿರುವ ಜಿಎಸ್‌ಬಿ ಸಭಾಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪರಿಸರದಲ್ಲಿ ಗಿಡನೆಡುವ ಮತ್ತು ವಾರ್ಡ್ ನ ಮನೆ-ಮನೆಗಳಿಗೆ ಔಷಧ ಗಿಡ ಕೊಡುವ ಹಾಗೂ ಮಳೆಕೊಯ್ಲಿನ ವಿಷಯದ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಳೆಕೊಯ್ಲು ಅಳ ವಡಿಸಿದರೆ, ಅತ್ಯಂತ ಶುದ್ಧವಾದ ನೀರು ಪಡೆ ಯಲು ಸಾಧ್ಯ. ಅಲ್ಲದೆ, ಅಂತರ್ಜಲ ಮಟ್ಟ ಏರಿಕೆಯಾಗಲೂ ಸಾಧ್ಯವಿದೆ ಎಂದರು.
ಈ ವರ್ಷ ನಗರದಲ್ಲಿ ಅತೀ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸ ಬೇಕಾಯಿತು. ಮಳೆ ಬಂದಾಗ ಅತಿವೃಷ್ಟಿ ಯಾಗುತ್ತದೆ, ಮಳೆ ಬರದಿದ್ದರೆ ಬರ ಇರುತ್ತದೆ. ಸಮತೋಲನದಲ್ಲಿ ಮಳೆ ಬಂದರೆ ಮಾತ್ರ ಮಳೆ ನೀರು ಭೂಮಿಯಲ್ಲಿ ಇಂಗುತ್ತದೆ. ಪರಿಸರ ನಾಶವಾಗುತ್ತಿದೆ. ಮರಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಂಡಕಂಡಲ್ಲಿ ಹಾಕಿ ಪರಿಸರವನ್ನು ಹಾಳುಗೆಡವುತ್ತಿದ್ದೇವೆ ಎಂದರು.
ಅಸಮರ್ಪಕ ಒಳಚರಂಡಿ ವ್ಯವಸ್ಥೆ
ನಗರದಲ್ಲಿರುವ ಅಸಮರ್ಪಕ ಒಳ ಚರಂಡಿ ವ್ಯವಸ್ಥೆಯಿಂದ ನೀರು ಕಲುಷಿತ ವಾಗುತ್ತಿದೆ. ಮನೆಗಳ ಬಾವಿಗಳಲ್ಲಿ, ಕೆರೆಗಳಲ್ಲಿ ನೀರು ಮಲಿನವಾಗಿದೆ. ಇದನ್ನು ಸರಿಪಡಿಸಲು ಪಾಲಿಕೆಗೆ ಸಾಧ್ಯ ವಾಗಿಲ್ಲ. ತ್ಯಾಜ್ಯ ವಿಲೇವಾರಿಯ ಬಗ್ಗೆ ಗಮನ ಹರಿಸಬೇಕಾಗಿದೆ. ‘ನಿಮ್ಮ ಮನೆಯ ತ್ಯಾಜ್ಯಗಳಿಗೆ ನೀವೇ ಹೊಣೆಗಾರರು’ ಎಂಬ ಕಾನೂನನ್ನು ಕೇರಳ ರಾಜ್ಯದಲ್ಲಿ ತರಲಾಗಿದೆ. ಇದನ್ನು ರಾಜ್ಯದಲ್ಲೂ ಅಳವಡಿಸಬೇಕಾದ ಅನಿವಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸ ಬೇಕು. ಪ್ರಕೃತಿಯನ್ನು ಪ್ರೀತಿಸಿದರೆ ಅದೂ ನಮ್ಮನ್ನು ಪ್ರೀತಿಸುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪತ್ರಾಂಕಿತ ವ್ಯವಸ್ಥಾಪಕಿ ಪೂರ್ಣಿಮಾ ರಾಜಗೋಪಾಲ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಗಳೂರು ಉತ್ತರಮಂಡಲ ಬಿಜೆಪಿ ಪ್ರ. ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ, ಉಮಾನಾಥ ಅಮೀನ್, ವಕೀಲ ಬಿ.ಆರ್. ಸದಾಶಿವ, ಶೈಲಜಾ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಕಾರ್ಯದರ್ಶಿ ಶೈಲಜಾ ಸತೀಶ್, ಬಿ. ರಾಮದಾಸ್ ನಾಯಕ್, ಡಾ| ಎಂ. ಮುರಳಿ ಕುಮಾರ್ ಚಿಲಿಂಬಿ, ಜಾನ್‌ರಾಜ್ ಕೋಡಿಕಲ್, ಗಣೇಶ್ ಕಾಮತ್, ಸುಂದರ್ ಮೊದಲಾದವರಿದ್ದರು. ಲೋಕನಾಥ ಬಂಗೇರ ಸ್ವಾಗತಿಸಿ, ಪ್ರಿಯಾ ಹರೀಶ್ ನಿರೂಪಿಸಿದರು.
ಕೋಡಿಕಲ್ ಶ್ರೀ ಮೂಕಾಂಬಿಕಾ, ಮಹಾಕಾಳಿ, ಕೊರಗಜ್ಜ ಕ್ಷೇತ್ರದ ಧರ್ಮ ದರ್ಶಿ ಜಯ ಪಾತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟರು. ಇ.ಆರ್. ಕಲ್ಬಾವಿ ರಾಜೇಂದ್ರ ರಾವ್ ಮಳೆ ಕೊಯ್ಲು ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.