ಶೀಘ್ರ ಅನುಷ್ಠಾನವಾಗಲು ಕಾಮಗಾರಿ ವೇಗ ಪಡೆಯಲಿ
ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆ
Team Udayavani, Apr 22, 2019, 6:00 AM IST
ಅನುಷ್ಠಾನ ಹಂತದಲ್ಲಿರುವ ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆ.
ಬಂಟ್ವಾಳ : ಜಿಲ್ಲೆಯ ಜೀವ ನದಿ ನೇತ್ರಾವತಿ ತಟದಲ್ಲಿ ಇದ್ದರೂ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಇನ್ನೂ ಸ್ವಾವಲಂಬಿ ಯೋಜನೆಗಳನ್ನು ನರಿಕೊಂಬು ಗ್ರಾ.ಪಂ. ಹೊಂದಿಲ್ಲ. ಆದರೂ ಪ್ರಸ್ತುತ ಬಹುಗ್ರಾಮ ಕುಡಿ ಯುವ ನೀರು ಯೋಜನೆ ಅನುಷ್ಠಾನ ವಾಗುತ್ತಿರುವುದು ಸಮಾಧಾನದ ಸಂಗತಿ.
ಕಳೆದ ಒಂದು ವರ್ಷದ ಹಿಂದೆ ಯೋಜನೆ ಕಾಮಗಾರಿ ಆರಂಭ ಮಾಡಿದಾಗ ಭವಿಷ್ಯದಲ್ಲಿ ಸ್ಥಳೀಯವಾಗಿ ಕುಡಿಯುವ ನೀರಿನ ಉದ್ದೇಶದ ದೊಡ್ಡ ಸಮಸ್ಯೆ ನಿವಾರಣೆ ಆಗಲಿದೆ ಎಂಬುದಾಗಿ ಭಾವಿಸಲಾಗಿತ್ತು. ಆದರೆ ಕಾಮಗಾರಿ ನಿಧಾನವಾಗಿ ಅನುಷ್ಠಾನ ಆಗುತ್ತಿರುವುದು, ತುರ್ತು ನೆಲೆಯ ಆದ್ಯತೆ ದೊರೆಯದಿರುವುದು ನಿರಾಸೆ ಮೂಡಿಸಿದೆ. ಆದರೂ ಗ್ರಾಮವು ಮುಂದೊಂದು ದಿನ ಬರಮುಕ್ತ ಆಗ ಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅನುಷ್ಠಾನ ವಿಳಂಬ
ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ ಬಹುಗ್ರಾಮ ಕುಡಿ ಯುವ ನೀರಿನ ನಾಲ್ಕು ಯೋಜನೆಗಳಲ್ಲಿ ನರಿಕೊಂಬು ಗ್ರಾಮದ ಯೋಜನೆ ಪ್ರಥಮ ಆದ್ಯತೆಯಾಗಿದ್ದರೂ ತಾಂತ್ರಿಕ ವಾಗಿ ಎದುರಾಗಿರುವ ತೊಡಕಿನಿಂದ ಅನುಷ್ಠಾನದಲ್ಲಿ ವಿಳಂಬವಾಗಿದೆ.
ನೀರು ಸಂಗ್ರಹ ತೊಟ್ಟಿ, ಮೇಲ್‌ರೇಚಕ, ಶುದ್ಧೀಕರಣ ಘಟಕ, ಪೈಪ್‌ಲೈನ್‌ಗಳು ಜೋಡಣೆ ಆಗಿಲ್ಲ. ಸಾಮಗ್ರಿಗಳನ್ನು ತಂದು ರಾಶಿ ಹಾಕಲಾಗಿದೆ ಎನ್ನುವುದು ಎಲ್ಲರಿಗೂ ಎದ್ದು ಕಾಣುವಂತಿದೆ.
ಯೋಜನೆಗೆ ನೀರು ಸರಬರಾಜು ಆಗುವ ಕರ್ಬೆಟ್ಟು ಪಂಪ್‌ಶೆಡ್ ಸ್ಥಾವರದ ಕೆಲಸ ಶೇ. 40 ಆಗಿದ್ದು, ಅದು ಮುಕ್ತಾಯಕ್ಕೆ ಬರುವಾಗ ಮಳೆ ಸುರಿಯಬಹುದು. ಅಂದರೆ ಈ ವರ್ಷಕ್ಕೆ ಅನುಷ್ಠಾನಕ್ಕೆ ಬರು ವುದು ಕಷ್ಟಸಾಧ್ಯವೆಂದೇ ಹೇಳಬಹುದು.
ನರಿಕೊಂಬು ಗ್ರಾಮ ಕರ್ಬೆಟ್ಟು ನೇತ್ರಾವತಿ ನದಿ ಕಾಂಕ್ರೀಟ್ ಸೇತುವೆ ಸನಿಹ ಬಹುಗ್ರಾಮ ಕುಡಿ ಯುವ ನೀರಿನ ಯೋಜನೆ ಅನುಷ್ಠಾನ ಆಗುತ್ತಿರುವ ನೀರು ಎತ್ತುವ ಸ್ಥಾವರ, ಮೇಲ್‌ರೇಚಕ ಟ್ಯಾಂಕ್ ಕಾಮಗಾರಿ ಇನ್ನೂ ಪ್ರಗತಿ ಹಂತದಲ್ಲಿ ಇರುವುದ ರಿಂದ ತುರ್ತು ನೀರು ಒದಗಿಸುವ ಯಾವುದೇ ಭರವಸೆ ಇಲ್ಲ. ಪೈಪ್‌ಲೈನ್ ಆಗಿದ್ದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ವಿದ್ಯುತ್ ಸಂಪರ್ಕ ಆಗಿಲ್ಲ. ನೀರೆತ್ತುವ ವಿದ್ಯುತ್ ಮೋಟರ್ ಅಳವಡಿಕೆ ಆಗಿಲ್ಲ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಗ್ರಾಮದ ಜನತೆ ಈ ಬಾರಿಯೂ ಅನುಭವಿಸಬೇಕಾಗಿದೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಕುಡಿಯುವ ನೀರು ಸಿಗುವಂತಾಗಲಿ ಎಂಬುದು ಫಲಾನುಭವಿಗಳ ಆಶಯ.
ಕುಡಿಯುವ ನೀರಿನ ಸಮಸ್ಯೆ
ಪ್ರಸ್ತುತ ವರ್ಷದಲ್ಲಿ ಕುಡಿಯುವ ನೀರಿನ ಸರಬರಾಜು ಸ್ಥಿತಿ ಗಂಭೀರವಾಗಿದೆ. ಕೆರೆ, ಬಾವಿ, ಕೊಳವೆ ಬಾವಿಗಳಲ್ಲೂ ನೀರು ತಳ ಸೇರಿದೆ. ಆವಶ್ಯಕತೆ ಇರುವ ಕಡೆಗೆ ನೀರು ಒದಗಿಸಲು ಪರ್ಯಾಯವಾಗಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಟ್ಯಾಂಕರ್ ಬಳಕೆ ಮಾಡಲಾಗುತ್ತಿದೆ.
– ಯಶೋಧರ ಕರ್ಬೆಟ್ಟು, ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.
ನೀತಿ ಸಂಹಿತೆ ನಿರ್ಬಂಧ ಇಲ್ಲ
ಚುನಾವಣೆ ನೀತಿ ಸಂಹಿತೆ ಇದ್ದರೂ ಕುಡಿಯುವ ನೀರಿನ ಉದ್ದೇಶದ ಕೆಲಸಕ್ಕೆ ನಿರ್ಬಂಧ ಇರುವುದಿಲ್ಲ. ಸಮಸ್ಯೆ ಎದುರಾದಲ್ಲಿ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬಹುದು. ತುರ್ತು ಸಂದರ್ಭದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಗಮನಕ್ಕೆ ತಂದು ನೀರು
ಒದಗಿಸುವುದಕ್ಕೆ ಅನುದಾನಕ್ಕೂ ಕೊರತೆ ಆಗುವುದಿಲ್ಲ.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಶಾಸಕರು
ನೀರಿನ ಮೂಲಗಳು
ನರಿಕೊಂಬು, ಶಂಭೂರು
ಎರಡು ಗ್ರಾಮಗಳ ಒಟ್ಟು
ಜನಸಂಖ್ಯೆ -10,179
ಕೊಳವೆ ಬಾವಿ – 19,
ಟ್ಯಾಂಕ್-11, ಕೆರೆ-7,
ಸರಕಾರಿ ಬಾವಿ-3.
– ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.