Railway line ಘಾಟಿ ಭಾಗದಲ್ಲಿ ವಿದ್ಯುದೀಕರಣ 7 ತಿಂಗಳಲ್ಲಿ ಪೂರ್ಣ

ಸಂಸದ ನಳಿನ್‌ ನೇತೃತ್ವದಲ್ಲಿ ರೈಲ್ವೇ ಅಧಿಕಾರಿಗಳ ವಿಶೇಷ ಸಭೆ

Team Udayavani, Dec 2, 2023, 10:53 PM IST

Railway line ಘಾಟಿ ಭಾಗದಲ್ಲಿ ವಿದ್ಯುದೀಕರಣ 7 ತಿಂಗಳಲ್ಲಿ ಪೂರ್ಣ

ಮಂಗಳೂರು: ಮಂಗಳೂರಿನಿಂದ ಪುತ್ತೂರು ವರೆಗಿನ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದ್ದು, ಜನವರಿಯಲ್ಲಿ ಸುಬ್ರಹ್ಮಣ್ಯ ವರೆಗಿನ ಕಾಮಗಾರಿ ಮುಗಿಯಲಿದೆ. ಬಳಿಕ ಸಕಲೇಶಪುರ ವರೆಗಿನ ಘಾಟಿ ಪ್ರದೇಶದಲ್ಲಿ ಕಾಮಗಾರಿಗೆ ಚಾಲನೆ ದೊರೆ ಯಲಿದ್ದು, 2024ರ ಜೂನ್‌ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಇದೆ ಎಂದು ಮೈಸೂರು ರೈಲ್ವೇ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕಿ (ಎಡಿಆರ್‌ಎಂ) ವಿಜಯಾ ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ ರೈಲ್ವೇ ಮೂಲಸೌಕರ್ಯದ ಅಭಿವೃದ್ಧಿ, ಕಾರ್ಯಾಚರಣೆಯಲ್ಲಿ ಸುಧಾರಣೆ ಹಾಗೂ ರೈಲು ಸೇವೆಗಳಿಗೆ ಸಂಬಂಧಿಸಿದಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆಯಲ್ಲಿ ಪಾಲಕ್ಕಾಡ್‌ ವಿಭಾಗ, ಮೈಸೂರು ವಿಭಾಗ ಮತ್ತು ಕೊಂಕಣ ರೈಲ್ವೇ ಅಧಿಕಾರಿಗಳೊಂದಿಗೆ ಶನಿವಾರ ಜಿ.ಪಂ. ಸಭಾಂಗಣ ದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ನಳಿನ್‌ ಮಾತನಾಡಿ, ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಲ್ಲಿ ಬೆಂಗಳೂರು- ಮಂಗಳೂರು ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಅವಕಾಶ ದೊರೆಯಲಿದೆ. ಇದಕ್ಕೂ ಮುನ್ನ ಮಂಗಳೂರು-ಮಡಗಾಂವ್‌ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ದಿನಾಂಕ ನಿಗದಿಪಡಿಸಿ ಮಂಗಳೂರು ಸೆಂಟ್ರಲ್‌ ಹೆಚ್ಚುವರಿ ಪ್ಲಾಟ್‌ಫಾರಂ ಲೋಕಾ ರ್ಪಣೆ ಹಾಗೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುವ ಸಾಧ್ಯತೆಯಿದೆ ಎಂದರು.

ಮೆಮು ಸಂಚಾರ ಪರೀಶೀಲನೆ
ಕಬಕ ಪುತ್ತೂರು – ಮಂಗಳೂರು ಸೆಂಟ್ರಲ್‌ ನಡುವಿನ ರೈಲನ್ನು ಸುಬ್ರಹ್ಮಣ್ಯದ ವರೆಗೆ ವಿಸ್ತರಿಸುವ ಸಂಬಂಧ ಈಗಾಗಲೇ ಬೇಡಿಕೆಗಳು ಬರುತ್ತಿದ್ದು, ಸುಬ್ರಹ್ಮಣ್ಯದ ವರೆಗಿನ ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಮೆಮು ರೈಲು ಸಂಚಾರಕ್ಕೆ ಇರುವ ಅವಕಾಶಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಎಡಿಆರ್‌ಎಂ ವಿಜಯಾ ತಿಳಿಸಿದರು.

ಅಮೃತ್‌ ಭಾರತ್‌ ನಿಲ್ದಾಣ ಶೀಘ್ರ
ಮಂಗಳೂರು ಜಂಕ್ಷನ್‌, ಬಂಟ್ವಾಳ ಮತ್ತು ಸುಬ್ರಹ್ಮಣ್ಯ ರೋಡ್‌ ನಿಲ್ದಾಣಗಳನ್ನು ಅಮೃತ ಭಾರತ್‌ ಸ್ಟೇಷನ್‌ ಯೋಜನೆಯಡಿ ಅಭಿವೃದ್ಧಿ ಪಡಿಸಗುತ್ತಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಸಂಸದರಿಗೆ ವಿವರಿಸಿದರು.

ಸೆಂಟ್ರಲ್‌ಗೆ ಹೆಚ್ಚು ರೈಲು; ಪರಿಶೀಲನೆ

ಮಂಗಳೂರು ಸೆಂಟ್ರಲ್‌ನಲ್ಲಿ 4, 5ನೇ ಪ್ಲಾಟ್‌ಫಾರ್ಮ್ ನಿರ್ಮಾಣವಾಗಿ ರುವುದರಿಂದ ಜಂಕ್ಷನ್‌ ವರೆಗೆ ಬರುವ ನಾಲ್ಕು ರೈಲುಗಳನ್ನು ಸೆಂಟ್ರಲ್‌ಗೆ ವಿಸ್ತರಿಸಬೇಕು ಎನ್ನುವ ಬೇಡಿಕೆಯನ್ನು ಹೋರಾಟಗಾರರು ಅಧಿಕಾರಿಗಳ ಮುಂದೆ ಇರಿಸಿದರು. ಪಾಲಕ್ಕಾಡ್‌ ವಿಭಾಗದ ಡಿಆರ್‌ಎಂ ಅರುಣ್‌ ಕುಮಾರ್‌ ಚತುರ್ವೇದಿ ಪ್ರತಿಕ್ರಿಯಿಸಿ, ಈ ಬೇಡಿಕೆಗಳು ಈಗಾಗಲೇ ನಮ್ಮ ಗಮನಕ್ಕೆ ಬಂದಿವೆ. ಅವಕಾಶಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಫರಂಗಿಪೇಟೆ ನಿಲ್ದಾಣ
ಅಭಿವೃದ್ಧಿ ಬೇಡಿಕೆ
ಫರಂಗಿಪೇಟೆ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಿ ಮತ್ತೆ ಆರಂಭಿಸಬೇಕು ಮತ್ತು ಕ್ರಾಸಿಂಗ್‌ ಸ್ಟೇಷನ್‌ ಮಾಡಬೇಕು ಎಂದು ರೈಲ್ವೇ ಹೋರಾಟಗಾರರು ಬೇಡಿಕೆ ಇಟ್ಟರು. ವಿವಿಧ ಕಾಲೇಜುಗಳಿಗೆ ಹತ್ತಿರವಿರುವ ಸ್ಥಳವಾಗಿದ್ದು, ನಿಲ್ದಾಣ ಕೂಡ ಹೆದ್ದಾರಿಗೆ ಹೊಂದಿಕೊಂಡೇ ಇದೆ. 30 ಎಕರೆ ಖಾಲಿ ಜಾಗವಿದ್ದು, ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಶಾಸಕರಾದ ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಕೊಂಕಣ ರೈಲ್ವೇಯ ಹಿರಿಯ ಪ್ರಾದೇಶಿಕ ನಿಯಂತ್ರಣಾಧಿಕಾರಿ ವಿನಯ ಕುಮಾರ್‌, ಪಾಲಕ್ಕಾಡ್‌ ವಿಭಾಗದ ಎಡಿಆರ್‌ಎಂ ಜಯಕೃಷ್ಣನ್‌, ಸ್ಮಾರ್ಟ್‌ ಸಿಟಿ, ಎನ್‌ಎಚ್‌ಎಐ, ಪಿಡಬ್ಲೂ$Âಡಿ ಅಧಿಕಾರಿಗಳು, ಮನಪಾ ಸದಸ್ಯರು, ರೈಲ್ವೇ ಬಳಕೆದಾರರ ಸಂಘದ ಪ್ರಮುಖರಾದ ಅನಿಲ್‌ ಹೆಗ್ಡೆ, ಜಿ.ಕೆ. ಭಟ್‌, ರವೀಶ್‌, ಲಕ್ಷ್ಮೀನಾರಾಯಣ ಬಂಟ್ವಾಳ, ಮುರಳೀಧರ ಕೆದಿಲಾಯ, ಜಯಕೃಷ್ಣನ್‌, ಜೆರಾರ್ಡ್‌ ಟವರ್ ಮೊದಲಾದವರಿದ್ದರು.ಹಿರಿಯ ಅಧಿಕಾರಿ ಮಾಣಿಕ್ಯ ಸ್ವಾಗತಿಸಿದರು.

ಹಿರಿಯ ಅಧಿಕಾರಿಗಳು ಗೈರು
ದ.ಕ. ಜಿಲ್ಲೆಗೆ ಸಂಬಂಧ ಪಟ್ಟಂತೆ ಮೈಸೂರು, ಪಾಲಕ್ಕಾಡ್‌ ಮತ್ತು ಕೊಂಕಣ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೇ ಪ್ರಬಂಧಕರ (ಡಿಆರ್‌ಎಂ)ಗಳ ಸಭೆಯನ್ನು ಸಂಸದರು ಕರೆದಿದ್ದರು. ಸಭೆಗೆ ಪಾಲಕ್ಕಾಡ್‌ ಡಿಆರ್‌ಎಂ ಸಂಪೂರ್ಣ ತಂಡದೊಂದಿಗೆ ಹಾಜರಾಗಿದ್ದರೆ, ಮೈಸೂರಿನಿಂದ ಎಡಿಆರ್‌ಎಂ, ಕೊಂಕಣ ರೈಲ್ವೇಯಿಂದ ರೀಜನಲ್‌ ಟ್ರಾಫಿಕ್‌ ಮ್ಯಾನೇಜರ್‌ ಹೀಗೆ ಕೆಳಹಂತದ ಮಾತ್ರ ಅಧಿಕಾರಿಗಳು ಹಾಜರಾಗಿದ್ದರು.

ಚರ್ಚಿತ ಇತರ‌ ವಿಷಯಗಳು
– ಬಂಟ್ವಾಳ ರೈಲು ನಿಲ್ದಾಣ ಅಕ್ರಮ ಚಟುವಟಿಕೆಗಳ ತಾಣ ವಾಗಿದ್ದು, ಪೊಲೀಸ್‌ ನಿಗಾ ಅಗತ್ಯ
– ಅಡ್ಯಾರ್‌ ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ನಲ್ಲಿ ರಾತ್ರಿ ವೇಳೆಯೂ ಗಾರ್ಡ್‌ ನಿಯೋಜನೆ
– ಮಂಗಳೂರು ಸೆಂಟ್ರಲ್‌ 4-5ನೇ ಪ್ಲಾಟ್‌ಫಾರ್ಮ್ಗೆ ಶೀಘ್ರ ಮೂಲಸೌಕರ್ಯ
-ಮಂಗಳೂರು ಜಂಕ್ಷನ್‌-ಸೆಂಟ್ರಲ್‌ ನಡುವಿನ 1 ಕಿ.ಮೀ. ಹಳಿ ದ್ವಿಗುಣ
-ಮಂಗಳೂರು ಸುಬ್ರಹ್ಮಣ್ಯ ನಡುವೆ ವೇಗ ಮಿತಿ ಹೆಚ್ಚಳ
– ರೈಲು ಹಳಿಯಿಂದ 15 ಮೀ. ಪ್ರದೇಶದಲ್ಲಿ ಸಾರ್ವಜನಿಕ ಅಭಿವೃದ್ಧಿಗೆ ಅವಕಾಶವಿಲ್ಲ.
– ಮಹಾಕಾಳಿಪಡು³ ಅಂಡರ್‌ಪಾಸ್‌ ಮೇ ತಿಂಗಳೊಳಗೆ ಪೂರ್ಣ
– ತೋಕೂರು ಅಂಡರ್‌ಪಾಸ್‌ ನಿರ್ಮಾಣವಾದರೂ ಉಪಯೋಗಕ್ಕಿಲ್ಲ.
– ಸೆಂಟ್ರಲ್‌ ನಿಲ್ದಾಣದ ಮುಂಭಾಗ ಟ್ಯಾಕ್ಸಿ ಪಾರ್ಕಿಂಗ್‌ಗೆ ಅವಕಾಶ ಬೇಕು.
– ಕಬಕ ಪುತ್ತೂರು ರೈಲು 9 ಗಂಟೆಯೊಳಗೆ ಸೆಂಟ್ರಲ್‌ ತಲುಪುವಂತಾಗಬೇಕು.

ಗಮನ ಸೆಳೆದ
“ಉದಯವಾಣಿ’ ವರದಿ
ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ “ಹಳೇ ಬೇಡಿಕೆಗಳು ಕೂಡಲೇ ಈಡೇರಲಿ’ ಎಂದು “ಉದಯವಾಣಿ’ಯಲ್ಲಿ ಶನಿವಾರ ಪ್ರಕಟವಾಗಿದ್ದ ವರದಿಯಲ್ಲಿ ಉಲ್ಲೇಖವಾಗಿದ್ದ ಪ್ರಯಾಣಿಕರ ಹಲವು ಬೇಡಿಕೆಗಳು ಸಭೆಯಲ್ಲಿ ಪ್ರಸ್ತಾವವಾದವು. ಮಂಗಳೂರು ಸೆಂಟ್ರಲ್‌ಗೆ ಹೆಚ್ಚುವರಿ ರೈಲು, ಸುಬ್ರಹ್ಮಣ್ಯಕ್ಕೆ ಪ್ಯಾಸೆಂಜರ್‌ ರೈಲು ವಿಸ್ತಣೆ, ಎಡಮಂಗಲ ಪೇಟೆಯಲ್ಲಿ ರೈಲ್ವೇ ಗೇಟ್‌ನಿಂದ ಸಮಸ್ಯೆ ಸಹಿತ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಬಳಕೆದಾರರು ಅಧಿಕಾರಿಗಳ ಗಮನ ಸೆಳೆದರು.

ಟಾಪ್ ನ್ಯೂಸ್

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

9–Niveus-Mangalore-Marathon

Niveus Mangalore Marathon 2024: ನ.10: ನೀವಿಯಸ್‌ ಮಂಗಳೂರು ಮ್ಯಾರಥಾನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.