ತಾರಸಿಯಲ್ಲಿ ಬೆಂಡೆ ಬೆಳೆಯುವ ಬೈಕ್‌ ಮೆಕ್ಯಾನಿಕ್‌


Team Udayavani, Oct 26, 2017, 4:50 PM IST

26-Mng–18.jpg

ವಿಟ್ಲ: ವಿಟ್ಲ ಮೇಗಿನಪೇಟೆ ನಿವಾಸಿ, ವಿಟ್ಲ ಭಗವತೀ ದೇವಸ್ಥಾನದ ಎದುರುಗಡೆ ಇರುವ ಶೇಖರ್‌ ಆಟೋ ವರ್ಕ್ಸ್ ನ ಬೈಕ್‌ ಮೆಕ್ಯಾನಿಕ್‌ ಓರ್ವರು ತರಕಾರಿ ಕೃಷಿಯನ್ನು ಹವ್ಯಾಸವಾಗಿ ಮಾಡಿ ಯಶಸ್ವಿಯಾಗಿದ್ದಾರೆ.

ಯೂಸುಫ್‌ ಗಮಿ ಅವರು ಕಳೆದ ವರ್ಷ ಈ ಕಾಯಕ ಆರಂಭಿಸಿದರು. ಇರುವುದು 14 ಸೆಂಟ್ಸ್‌ ಜಾಗ. ಅದರಲ್ಲಿ ಮನೆ ಇದೆ. ಕೆಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಮನೆ ಮೇಲೆ ಒಟ್ಟು 2,000 ಚದರಡಿಯಷ್ಟು ವಿಸ್ತೀರ್ಣದ ವಿಶಾಲ ಜಾಗವಿದೆ. ಬೈಕ್‌ ದುರಸ್ತಿಗೆಂದು ಹೋದಾಗ ಮನೆಯವರು ಬೆಂಡೆ ನೀಡಿದ್ದರು. ಅದನ್ನು ಬೀಜವಾಗಿಸಿದ ಅವರು ಹತ್ತಾರು ಪ್ಲಾಸ್ಟಿಕ್‌ ತೊಟ್ಟೆಗಳಲ್ಲಿ ಬೆಳೆಸಲು ಆರಂಭಿಸಿದರು.

ಪಾಚಿಯೇ ಗೊಬ್ಬರ
ತೊಟ್ಟೆಯಲ್ಲಿ ಸ್ವಲ್ಪ ಭಾಗ ಕೆಂಪು ಮಣ್ಣು. ಮತ್ತೊಂದಷ್ಟು ಭಾಗ ಸುಡುಮಣ್ಣು. ಮನೆಯ ಕಸ ಸುಡುಮಣ್ಣಾಗಿಸಿದ ಅವರು
ಅದನ್ನು ಕೃಷಿಗೆ ಬಳಸಿ ಬೆಂಡೆ ಬೀಜ ಬಿತ್ತಿದರು. ತಾರಸಿಯಲ್ಲಿ ಪಾಚಿ ಬರುತ್ತಿತ್ತು. ಅದನ್ನು ಮಳೆಗಾಲದಲ್ಲಿ ಒಂದು ಕಡೆ
ಸಂಗ್ರಹಿಸಿ, ರಾಶಿ ಹಾಕಿದ್ದರು. ಬೆಂಡೆ ಬೀಜ ಈ ಪಾಚಿಯಲ್ಲಿ ಬೆಳೆಯಲಾರಂಭಿಸಿತು. ಅತ್ಯಂತ ಹುಲುಸಾಗಿ ಬೆಳೆದ ಗಿಡವನ್ನು ನೋಡಿ ಆಶ್ಚರ್ಯವಾಯಿತು. ಇತರ ಕೃಷಿಗೂ ಗೊಬ್ಬರವಾಗಿ ಪಾಚಿ ಬಳಸಿದರು. ಅದು ಯಶಸ್ವಿಯಾಯಿತು. ತಾರಸಿಯ ಪಾಚಿಯನ್ನೇ ಗೊಬ್ಬರವಾಗಿಸಿದ ಅವರ ಅನುಭವ ಮತ್ತು ಯೋಚನೆ ಶ್ಲಾಘನೀಯವಾದುದು.

ದ್ರಾಕ್ಷಿಯೂ ಇತ್ತು
ದ್ರಾಕ್ಷಿ, ನಿಂಬೆ, ಕಹಿಬೇವು, ತೆಂಗು ಎಲ್ಲವೂ ಇಲ್ಲಿದೆ. ಇರುವ ಸ್ವಲ್ಪ ಜಾಗದಲ್ಲಿ ಮೆಕ್ಯಾನಿಕ್‌ ಯೂಸುಫ್‌ ಅವರ ಕೃಷಿಯ ಉತ್ಪನ್ನಗಳಿಗೆ ಭಾರೀ ಬೇಡಿಕೆಯೂ ಇದೆ. ಸಾವಯವ ಬೆಂಡೆ, ತೊಂಡೆಕಾಯಿಗಳನ್ನು ಮೆಕ್ಯಾನಿಕ್‌ ಶಾಪ್‌ನಲ್ಲಿ ತಂದಿಟ್ಟರೆ ತತ್‌ ಕ್ಷಣ ಮಾರಾಟವೂ ಆಗುತ್ತಿದೆ. ಇವರಿಗೆ ಮಾಲಕರಾದ ಚಂದ್ರಶೇಖರ ಭಟ್‌ ಪಡಾರು ಅವರ ಬೆಂಬಲವೂ ಇದೆ.

100 ಬೆಂಡೆ ಸಸಿ
ಈ ಬಾರಿ 100 ಬೆಂಡೆ ಸಸಿಗಳನ್ನು ಬೆಳೆಸಿದರು. ಪ್ರತಿದಿನವೂ ಪ್ರತಿ ಗಿಡದಲ್ಲಿಯೂ ಒಂದೊಂದು ಬೆಂಡೆ ಪಡೆಯುವ ಗುರಿ ಅವರದ್ದು. ಅದು ಯಶಸ್ವಿಯಾಗಿದೆ. ಈ ತನಕ ಅದೇ ಪ್ರಮಾಣದಲ್ಲಿ ಲಭ್ಯವಾಗಿದೆ. ಆಗಸ್ಟ್‌ ತಿಂಗಳಲ್ಲಿ ಬಿತ್ತಿದ ಬೀಜದಲ್ಲಿ ಒಂದು ತಿಂಗಳ ಬಳಿಕ ಬೆಳೆ ಪಡೆಯುವ ಅವರ ಗುರಿಯೂ ಈಡೇರಿದೆ ಮತ್ತು ಮಾರ್ಚ್‌, ಎಪ್ರಿಲ್‌ ತಿಂಗಳಲ್ಲಿ ನೀರಿನ ಬರ ಬಾರದೇ ಇದ್ದರೆ ಅಲ್ಲಿ ತನಕವೂ
ಬೆಳೆಯನ್ನು ಪಡೆಯಬೇಕೆಂಬ ಆಶಯ ಅವರಲ್ಲಿದೆ.

ಪಕ್ಕದಲ್ಲಿ ತೊಂಡೆ
ತಾರಸಿಯಿಂದ ತೊಂಡೆ ಚಪ್ಪರವನ್ನೂ ಇಳಿಸಲಾಗಿದೆ. ಮನೆ ಮುಂದಿನ ಭಾಗದಲ್ಲಿ ತೊಂಡೆ ಬುಡವೆದ್ದು ತಾರಸಿಗೇರುತ್ತದೆ. ಆ ಚಪ್ಪರದಲ್ಲಿ ತೊಂಡೆಕಾಯಿಯನ್ನೂ ಪಡೆಯುತ್ತಿರುವ ಅವರು ಈ ಕೃಷಿಗಾಗಿ ಆಡಿನ ಹಿಕ್ಕೆಯನ್ನು ಬಳಸುತ್ತಾರೆ. ಅದಕ್ಕಾಗಿ ಆಡು ಮತ್ತು ಕೋಳಿಯನ್ನೂ ಸಾಕುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೇ ಹಿತಮಿತವಾಗಿ ಬೆಳೆಸುವ ಇವರ ಕೃಷಿ ಇತರರಿಗೆ
ಮಾದರಿಯಾಗಿದೆ.

 ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.