ಗಿರೀಶ್ ಭಾರದ್ವಾಜ್ ಅವರಿಗೆ ನಾಗರಿಕ ಸಮ್ಮಾನ
Team Udayavani, May 31, 2017, 12:31 PM IST
ಸುಳ್ಯ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಭಾರದ್ವಾಜ್ ಅವರ ಕೀರ್ತಿಯ ಹಿಂದೆ ಧ್ಯೇಯ ಮತ್ತು ಕರ್ಮ ಜೀವನವಿದೆ. 129 ಸೇತುವೆಗಳ ನಿರ್ಮಾಣದ ಮೂಲಕ ದೇಶದ ಕುಗ್ರಾಮಗಳ ಪ್ರತಿಯೋರ್ವರಿಗೂ ತಮ್ಮ ಜವಾಬ್ದಾರಿಯ ಅರಿವು ಮೂಡಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ನುಡಿದರು.
ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅಭಿನಂದನ ಸಮಿತಿ ಸುಳ್ಯ ಮತ್ತು ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಮಂಗಳವಾರ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಜರಗಿದ ನಾಗರಿಕ ಸಮ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಯಾರೂ ಬಯಸಿ ಬಂದಿದ್ದಲ್ಲ. ಸಾಮಾಜಿಕ ಚಿಂತನೆಗಳುಳ್ಳ ಕರ್ಮಜೀವಿಗಳನ್ನೇ ಅರಸಿ ಬಂದಿದೆ. ಗಿರೀಶ್ ಮತ್ತು ಅವರ 70 ಮಂದಿ ಜೊತೆಗಾರರ ನಂಬಿಕೆ, ವಿಶ್ವಾಸದ ಕಾರ್ಯಕ್ಕೆ ಸಂದ ಗೌರವವಿದು. ಹುಟ್ಟೂರ ಜನತೆ ಸಮ್ಮಾನಿಸುವ ಮೂಲಕ ಪ್ರಶಸ್ತಿಗಿಂತಲೂ ಹೆಚ್ಚಿನ ಗೌರವ ಪ್ರಾಪ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರದ್ವಾಜರ ಸಾಧನೆ ಪಠ್ಯವಾಗಲಿ
ಮುಖ್ಯ ಅತಿಥಿಗಳಾಗಿದ್ದ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಚಿದಾನಂದ ಕೆ.ವಿ., ಗಿರೀಶ್ ಅವರು ಉತ್ತಮ ಸಾಧಕ. ಕ್ರಿಕೆಟ್ ತಾರೆಗಳ ವಿಚಾರಗಳನ್ನು ಬರೆಯುವ ಬದಲಾಗಿ ಸರಕಾರ ಗಿರೀಶ್ ಅವರ ವಿಚಾರಧಾರೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು. ಅವರ ತೂಗು ಸೇತುವೆಯ ತಾಂತ್ರಿಕತೆ ಮತ್ತಷ್ಟು ಆಧುನಿಕತೆ ಯೊಂದಿಗೆ ಸಾಗಲಿ ಎಂದು ಶುಭಹಾರೈಸಿದರು.
ಗುಣಗಳಿಗೆ ಮಾನ್ಯತೆ ನೀಡಬೇಕು: ಅಂಗಾರ
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಅಂಗಾರ ಮಾತನಾಡಿ, ದೇಶದ ಅತ್ಯುನ್ನತ ಪ್ರಶಸ್ತಿ ಪಡೆದ ಸಾಧನೆ ಓರ್ವನಾದರೂ ಅದರ ಕೀರ್ತಿ ತಾಲೂಕಿಗೆ ದೊರೆತಿದೆ. ಇಂದು ವ್ಯಕ್ತಿಯ ಗುಣಗಳಿಗೆ ಮಾನ್ಯತೆ ನೀಡುವ ಕಾರ್ಯವಾಗಬೇಕು. ಪ್ರತಿಯೊಬ್ಬರಲ್ಲೂ ಕಾರ್ಯನಿಷ್ಠೆ ಇದ್ದಾಗ ಯಶಸ್ಸು ಖಂಡಿತ ಎಂದರು.
ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾ ಮಾಧವ ಉಪಸ್ಥಿತರಿದ್ದರು. ಅಭಿನಂದನ ಸಮಿತಿ ಕೋಶಾಧಿಕಾರಿ ಎಂ.ಬಿ. ಸದಾಶಿವ ಸ್ವಾಗತಿಸಿದರು. ಕೃಷ್ಣಪ್ರಸಾದ್ ಮಡ್ತಿಲ ಸಮ್ಮಾನ ಪತ್ರ ವಾಚಿಸಿದರು. ಸುಜನ್ ಕಿಲಂಗೋಡಿ ವಂದೇ ಮಾತರಂ ಹಾಡಿದರು. ಬೇಬಿ ವಿದ್ಯಾ ಹಾಗೂ ಭವ್ಯಾ ರಜತ್ ಕಾರ್ಯಕ್ರಮ ನಿರೂಪಿಸಿದರು. ಎ.ಟಿ. ಕುಸುಮಾಧರ ವಂದಿಸಿದರು.
ವಿವಿಧ ಸಂಘ-ಸಂಸ್ಥೆಗಳಿಂದ ಪ್ರಮುಖರು ಹಾರಾರ್ಪಣೆ ಮಾಡಿದರು. ದುರ್ಗಾಕುಮಾರ್ ಮತ್ತು ತಂಡದವರಿಂದ ಸಂಪಾದಿತ ಸಾಕ್ಷ್ಯಚಿತ್ರ ವನ್ನು ಬಿಡುಗಡೆಗೊಳಿಸಲಾಯಿತು.
ಸಾರೋಟಿನಲ್ಲಿ ಮೆರವಣಿಗೆ
ಉಷಾ – ಗಿರೀಶ್ ಭಾರದ್ವಾಜ ದಂಪತಿಯನ್ನು ಕಾರ್ಯಕ್ರಮಕ್ಕೆ ಮೊದಲು ಜ್ಯೋತಿ ವೃತ್ತದಿಂದ ಸಭಾವೇದಿಕೆವರೆಗೆ ಸಾರೋಟಿನಲ್ಲಿ ಕುಳ್ಳಿರಿಸಿ ಭವ್ಯವಾದ ಮೆರವಣಿಗೆ ಮೂಲಕ ಕರೆತರಲಾ ಯಿತು. ವಿವಿಧ ಸಂಘ-ಸಂಸ್ಥೆಗಳವರು ಸಾರ್ವಜನಿ ಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಹೃದಯಗಳನ್ನು ಬೆಸೆಯುವ ಕಾರ್ಯ
ಅಭಿನಂದನೆ ಸ್ವೀಕರಿಸಿದ ಗಿರೀಶ್ ಭಾರದ್ವಾಜ್ ಅವರು ಮಾತನಾಡಿ, ಪ್ರತಿಯೊಂದು ವೃತ್ತಿ ಮನುಕುಲದ ಸೇವೆಗಿರುವ ಅವಕಾಶ. ಹಾಗೆ ಅರಿತುಕೊಂಡರೆ ಸಾಕಷ್ಟು ಅನುಭವಗಳಾಗುತ್ತವೆ. ನಮ್ಮ ನದಿ-ದಡಗಳನ್ನು ಸಂಪರ್ಕಿಸುವ ಸೇತುವೆ ಕಾರ್ಯದಲ್ಲಿ ಜನರ ಪ್ರೇಮದ ಸಾûಾತ್ಕಾರವಾಗುತ್ತಿತ್ತು ಎಂದು ತಮ್ಮ ಅನುಭವಗಳನ್ನು ತಿಳಿಸಿದರು. ಕೇವಲ ನದಿಗಳ ದಡವನ್ನು ತಲುಪುವ ಮಾತ್ರವಲ್ಲ. ಹಳ್ಳಿ – ಹಳ್ಳಿಗಳ, ಹಳ್ಳಿ- ನಗರಗಳ ಸಂಪರ್ಕಿಸುವ ಸೇವೆಗಳೊಂದಿಗೆ ಹಳ್ಳಿಗರ ಕನಸು ನಗರಕ್ಕೆ ಜೋಡಿಸುವುದರೊಂದಿಗೆ ಹೃದಯ ಹೃದಯಗಳ ಬೆಸೆಯುವ ಕಾರ್ಯದಲ್ಲಿ ನಮ್ಮ ತಂಡ ಕೈಜೋಡಿಸಿದೆ. ಇದೇ ರೀತಿ ಜನರ ಹೃದಯ – ಹೃದಯಗಳನ್ನು ಬೆಸೆಯುವ ಕಾರ್ಯವಾಗಬೇಕು. ರಾಜಕೀಯ ಪಕ್ಷ ಗಳಿಂದಾಗಿ ಜನರ ನಡುವೆ ಕಂದಕ, ಗೋಡೆಗಳು ನಿರ್ಮಾಣವಾಗಿವೆ. ಇವುಗಳನ್ನು ನಿವಾರಿಸುವ ಕಾರ್ಯವಾಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
MUST WATCH
ಹೊಸ ಸೇರ್ಪಡೆ
Tennis: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ನಿವೃತ್ತಿ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.