“ಮಕ್ಕಳಿಗಾಗಿ ಕನಿಷ್ಠ ಒಂದು ಗಂಟೆ ನೀಡಿ’
Team Udayavani, Jul 13, 2017, 2:45 AM IST
ಉಪ್ಪಿನಂಗಡಿ: ಮಕ್ಕಳಿಗೆ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ಕನಸು, ಭಾವನೆಗಳೂ ಇರುತ್ತವೆ. ಅವುಗಳನ್ನು ಹಂಚಿಕೊಳ್ಳಲು ಹೆತ್ತವರು, ಪೋಷಕರು ದಿನದಲ್ಲಿ ಕನಿಷ್ಠ ಒಂದು ಗಂಟೆಯನ್ನು ಅವರಿಗಾಗಿ ಮೀಸಲಿಟ್ಟು ಅವರೊಂದಿಗೆ ಕಳೆಯಿರಿ. ಇದು ಮಕ್ಕಳು ಮತ್ತು ಪೋಷಕರ ಸಂಬಂಧ ಗಟ್ಟಿಗೊಳಿಸಲು ಸಹಕಾರಿ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ವಝೀರ್ ಅಹಮದ್ ಹೇಳಿದರು.
ಜು. 11ರಂದು ಉಪ್ಪಿನಂಗಡಿಯಲ್ಲಿ ಮಹಿಳಾ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ಕೃಷ್ಣ ಮಾತನಾಡಿ, ಮಹಿಳೆಯರು ಸಂಘಟಿತರಾಗಬೇಕು. ಆಗ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ ಇದೆ. ಇಲಾಖೆಯ ಮೂಲಕ ಬಹಳಷ್ಟು ಯೋಜನೆ, ಸೌಲಭ್ಯಗಳೂ ಇದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಪಾಲನೆ, ಮತ್ತು ರಕ್ಷಣೆಯ ಹೆಚ್ಚು ಹೊಣೆ ಮಹಿಳೆಯರಿಗೆ ಇರುತ್ತದೆ. ಹೆಣ್ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ಬೆಳೆಸಿದರೆ ಮುಂದೆ ಅವರು ಹೆತ್ತವರಿಗೆ ಹೆಚ್ಚು ನೆರವಾಗುತ್ತಾರೆ. ಮಹಿಳೆಯರಿಗೆ ಬಹಳಷ್ಟು ಸೌಲಭ್ಯಗಳು ಇದ್ದು, ಅವುಗಳನ್ನು ಪಡೆಯುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.
ದ.ಕ. ಜಿಲ್ಲಾ ಚೈಲ್ಡ್‌ಲೈನ್ ಸಂಯೋಜಕ ಯೋಗೀಶ್ ಮಲ್ಲಿಗೆಮಾರು ಮತ್ತು ಸಾಮಾಜಿಕ ಕಾರ್ಯಕರ್ತ ಶಿವಾನಂದ, ಮಕ್ಕಳ ಸಹಾಯವಾಣಿ, ಮಕ್ಕಳ ವಿಶೇಷ ಪಾಲನಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಪಾಲನಾ ಮಂಡಳಿ ಮೊದಲಾದ ಘಟಕಗಳ ಕಾರ್ಯವ್ಯಾಪ್ತಿಯ ಬಗ್ಗೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಕುಡಿಯುವ ನೀರು ಸರಬರಾಜು ಸಮಿತಿ ಉಪಾಧ್ಯಕ್ಷ ಜಯಂತ ಪೊರೋಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹರಿಣಾಕ್ಷಿ ಮಾತನಾಡಿದರು.
ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರಮಜಲು, ಭಾರತಿ, ಕವಿತಾ, ಝರೀನ, ಜಮೀಲಾ, ವನಿತಾ ಸಮಾಜದ ಸುಭದ್ರಾ ಭಟ್, ಉಷಾ ಮುಳಿಯ, ಶ್ಯಾಮಲಾ ಶೆಣೈ, ಆರೋಗ್ಯ ಸಹಾಯಕಿ ಗಾಯತ್ರಿ ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್ ಸ್ವಾಗತಿಸಿ, ಕಾರ್ಯದರ್ಶಿ ರೋಹಿತಾಕ್ಷ ವಂದಿಸಿದರು.
ಭಾವನಾತ್ಮಕ ಸಂಬಂಧವಿರಲಿ
ಇಂದಿನ ದಿನಗಳಲ್ಲಿ ಮಕ್ಕಳು ತನ್ನ ಆಟ, ಪಾಠ, ಓದು, ಬರಹಗಳ ಹೊರತಾಗಿ ಹೆಚ್ಚಿನ ಸಮಯ ಅಂತರ್ಜಾಲ, ಸಾಮಾಜಿಕ ಜಾಲತಾಣ, ಟಿವಿ ಮುಂದೆ ಕಳೆಯುತ್ತಾರೆ. ಪೋಷಕರು ಸಹಜವಾಗಿ ದೂರ ಉಳಿಯುತ್ತಾರೆ. ಹೀಗೆ ಸಂಬಂಧ ದೂರ ಆಗುತ್ತಿದೆ. ಹೀಗಾದಾಗ ಮಕ್ಕಳು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಬೇರೆಯವರ ಮೊರೆ ಹೋಗುತ್ತಾರೆ. ಅದು ಆಗ ಕೂಡದು. ಮಕ್ಕಳ ಹಿತದೃಷ್ಟಿಯಿಂದ ಹೆತ್ತವರು ಮಕ್ಕಳೊಂದಿಗೆ ಸಮಯ ಹಂಚಿಕೊಳ್ಳಬೇಕು – ವಝೀರ್ ಅಹಮದ್,
ಘಟಕ ರಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Virtual ; ಟರ್ಕಿಯಯಲ್ಲಿ ವರ, ಹಿಮಾಚಲದಲ್ಲಿ ವಧು : ಆನ್ ಲೈನ್ ನಲ್ಲೇ ನಿಖ್ಹಾ!
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.